ನಮ್ಮ ರಾಜ್ಯದಲ್ಲಿದ್ದು ಪಕ್ಕದ ರಾಜ್ಯಕ್ಕೆ ಜೈಕಾರ ಹಾಕಬೇಡಿ, ಅಭಿಮಾನವಿದ್ದರೆ ಅಲ್ಲಿಗೇ ಹೋಗಿ : ರೋಷನ್‌ ಬೇಗ್‌

ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆ ಸದಸ್ಯರು ಜೈ‌ ಮಹಾರಾಷ್ಟ್ರ ಘೋಷಣೆ ಮಾಡಿದ್ದಕ್ಕೆ ಖಂಡನೆ ವ್ಯಕ್ತಪಡಿಸಿರುವ ಸಚಿವ ರೋಷನ್‌ ಬೇಗ್‌, ನಮ್ಮ ರಾಜ್ಯದಲ್ಲಿ ಇದ್ದು ಇನ್ನೊಂದು ರಾಜ್ಯಕ್ಕೆ ಜೈಕಾರ ಹಾಕೋದು ತಪ್ಪು. ಅಷ್ಟು ಅಭಿಮಾನವಿದ್ರೆ ಅವರು ಅಲ್ಲಿಗೆ ಹೋಗಲಿ ಎಂದಿದ್ದಾರೆ. ಮಂಗಳವಾರ ಈ ಬಗ್ಗೆ ಮಾತನಾಡಿದ ಅವರು,  ನಾವೇಲ್ಲ ಭಾರತೀಯರು ಎಂಬ ಭಾವನೆ ಎಲ್ಲರಲ್ಲಿ ಇರಬೇಕು. ಪಾಲಿಕೆಯಲ್ಲಿ ನಾಡವಿರೋಧಿ ಚಟುವಟಿಕೆ ನಡೆಸಿದರೆ ಸದಸ್ಯತ್ವ ರದ್ದು ಮಾಡುತ್ತೇನೆ, ಇದಕ್ಕಾಗಿ ರಾಜ್ಯ ಸರ್ಕಾರ ಕಾನೂನು ಜಾರಿಗೊಳಿಸುತ್ತಿದೆ ಎಂದು ರೋಷನ್‌ ಬೇಗ್‌ ಖಡಕ್‌ ಎಚ್ಚರಿಕೆ ನೀಡಿದರು.
ಬೆಳಗಾವಿಯಲ್ಲಿ ರೋಷನ್‌ ಬೇಗ್‌ ಈ ಹೇಳಿಕೆ ನೀಡುತ್ತಿದ್ದಂತೆ, ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಶಿವಸೇವೆ ಪ್ರತಿಭಟನೆ ನಡೆಸಿತು. ಅಲ್ಲದೆ ಶಿವಸೇನೆಯ ಕಾರ್ಯಕರ್ತರು ಕರ್ನಾಟಕದ ಬಸ್‌ಗಳ ಮೇಲೆ ಜೈ ಮಹಾರಾಷ್ಟ್ರ ಎಂದು ಬರೆದು, ಮಹಾರಾಷ್ಟ್ರ ರಾಜ್ಯಗಳ ಬಸ್ ಮೇಲೆ ಅನಧಿಕೃತ ನಾಮಫಲಕ ಹಾಕಿದ್ದಾರೆ.

Comments are closed.

Social Media Auto Publish Powered By : XYZScripts.com