ನೀರು ತುಂಬಿದ ಡ್ರಮ್‌ ಅಡಿ ಸಿಲುಕಿ ಬಾಲಕ ಸಾವು : ಕುಡಿಯುವ ನೀರಿಗಾಗಿ ಬಲಿಯಾದ ಬಾಲಕ

ಬಳ್ಳಾರಿ:  ನೀರು ತುಂಬಿದ ಡ್ರಮ್‌ ಮೈಮೇಲೆ ಬಿದ್ದು, 6 ವರ್ಷದ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ಬಳ್ಳಾರಿ ಜಿಲ್ಲೆಯ ಕೊಟ್ಟೂರು ಸಮೀಪದ ಕಂದಗಲ್ ಗ್ರಾಮದಲ್ಲಿ ಸೋಮವಾರ ನಡೆದಿದೆ.  ರಾಜೀವ್  ಎಂಬ 6 ವರ್ಷದ ಬಾಲಕ ಮೃತ ದುರ್ದೈವಿಯಾಗಿದ್ದು, ಕುಟುಂಬದ ಹಿರಿಯರೊಂದಿಗೆ ದೂರದ ಜಮೀನಿನಿಂದ ಕುಡಿಯುವ ನೀರು ತಂದು ಮನೆಯಲ್ಲಿಡುವ ಸಂದರ್ಭದಲ್ಲಿ ದುರ್ಘಟನೆ ನಡೆದಿದೆ.
 ಕಂದಗಲ್‌ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವುದರಿಂದ ದೂರದ ಜಮೀನಿನಿಂದ ನೀರು ತರಲು ಹೊರಟ ಮನೆಯವರು ಈತನನ್ನೂ ಜೊತೆಯಲ್ಲಿ ಕರೆದೊಯ್ದಿದ್ದು,  ಜಮೀನಿನಲ್ಲಿ ನೀರು ತುಂಬಿಕೊಂಡು ಮನೆಗೆ ಬಂದು ಡ್ರಂ ಇಳಿಸುವಾಗ ಅದು ಬಾಲಕನ ಮೇಲೆ ಜಾರಿ ಬಿದ್ದಕಾರಣ ಬಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಆಕಸ್ಮಿಕವಾಗಿ ಮಗನನ್ನ ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.

Comments are closed.

Social Media Auto Publish Powered By : XYZScripts.com