ತೆಳ್ಳಗಾಗಲು ಬೇಬೋ ಕಸರತ್ತು :ಕರೀನಾ ಕಪೂರ್‌‌ ಅನುಸರಿಸುತ್ತಿರುವ ಹೆಲ್ದಿ ಡಯಟ್‌ ಪ್ಲಾನ್‌ ಏನು ಗೊತ್ತಾ..?

ಬಾಲಿವುಡ್‌ ಚಿತ್ರಪ್ರೇಮಿಗಳ ನೆಚ್ಚಿನ ನಟಿ ಬೇಬೋ ಕರೀನಾ ಕಪೂರ್‌, ಝೀರೋ ಫಿಗರ್‌ನಿಂದ ಖ್ಯಾತಿ ಪಡೆದವರು. ತಮ್ಮ ಸುಕೋಮಲ ತೆಳ್ಳಗಿನ ಮೈಮಾಟದಿಂದಲೇ ಚಿತ್ರರಸಿಕರ ನಿದ್ದೆಗೆಡಿಸಿದ ನಟಿ ಕರೀನಾ ಕಪೂರ್‌. ನಟ ಸೈಫ್‌ ಅಲಿಖಾನ್‌ರನ್ನ ಮದುವೆಯಾದ ಮೇಲೆಯೂ ತಮ್ಮ ಕರಿಯರ್‌ನಲ್ಲಿ ಸ್ವಲ್ಪವೂ ವ್ಯತ್ಯಾಸ ಕಂಡಿರದ ಪ್ರತಿಭಾವಂತ ನಟಿ ಆಕೆ. ಇತ್ತೀನ ಕೆಲವು ತಿಂಗಳ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿರುವ ಬೇಬೋ ಕರೀನಾಗೆ ಗರ್ಭಾವಸ್ಥೆಯಲ್ಲಿ ತೂಕ ಏರಿತ್ತು. ಗರ್ಭಿಣಿ ಕರೀನಾ ತೂಕ ಮೊದಲಿಗಿಂತ ಬರೋಬ್ಬರಿ 18 ಕೆಜಿ ಹೆಚ್ಚಾಗಿತ್ತು. ಸಧ್ಯ ಕರೀನಾ ತಮ್ಮ ಕರಿಯರ್‌ ಪುನಃ ಪ್ರಾರಂಭ ಮಾಡುವ ತಯಾರಿಯಲ್ಲಿದ್ದು, ಅದಕ್ಕಾಗಿ ತೂಕ ಇಳಿಸುವ ಕಸರತ್ತಿನಲ್ಲಿದ್ದಾರೆ. ವೇಟ್‌ಲಾಸ್‌ ಮಾಡಲೇಬೇಕು ಎಂಬ ನಿಶ್ಚಯ ಮಾಡಿದ್ದರೂ ಕೂಡ, ಅವರ ಡಯಟೀಶಿಯನ್‌ ರುಜುತಾ ದಿವೇಕರ್‌ ಅವರ ಸಲಹೆಗಳ ಪ್ರಕಾರ ಆರೋಗ್ಯವಂತ ಡಯಟ್‌ ಕ್ರಮಗಳನ್ನ ಅವರು ಅನುಸರಿಸುತ್ತಿದ್ದಾರೆ. ಅಲ್ಲದೆ ಪೋಸ್ಟ್‌ ಪ್ರೆಗ್ನೆನ್ಸಿ ವೇಟ್‌ಲಾಸ್‌ ಕುರಿತು ತಮ್ಮ ಡಯಟ್‌ ಬಗ್ಗೆ ಅವರು ಮಾತನಾಡಿದ್ದಾರೆ. ವೇಟ್‌ಲಾಸ್‌ ಡಯಟ್‌ ಬಗ್ಗೆ ಕರೀನಾ ಕೊಟ್ಟ ಸಲಹೆಗಳು ಹೀಗಿವೆ ನೋಡಿ.
1. ಕರೀನಾ ಕಪೂರ್‌ ಪ್ರಕಾರ,  ‘ನಮ್ಮ ಗುರಿ ಕೇವಲ ತೂಕ ಇಳಿಸಿಕೊಳ್ಳುವುದು ಮಾತ್ರ ಆಗಿರಬಾರದು. ಅದಕ್ಕೋಸ್ಕರ ದಿನರಾತ್ರಿ ಕಷ್ಟಪಟ್ಟು ಆರೋಗ್ಯವನ್ನ ಕೆಡಿಸಿಕೊಳ್ಳಬಾರದು. ವೇಟ್‌ಲಾಸ್‌ ಕ್ರಮದಿಂದ ನಮಗೆ ಖುಷಿ, ನೆಮ್ಮದಿ, ಪುನಃಶ್ಚೇತನ ಸಿಗುವಂತಿರಬೇಕು. ಕ್ವಿಕ್‌ ವೇಟ್‌ ಲಾಸ್‌ ಡಯಟ್‌ಗಳನ್ನ ನಾನು ಇಷ್ಟಪಡೋದಿಲ್ಲ ಮತ್ತು ನನ್ನ ಡಯಟೀಶಿಯನ್‌ ಕೂಡ ಅದನ್ನ ಸೂಚಿಸೋದಿಲ್ಲ’
2. ದಿನವೂ ರಾತ್ರಿ ಒಂದು ದೊಡ್ಡ ಗ್ಲಾಸ್‌ನ ತುಂಬ ಹಾಲನ್ನ ತಪ್ಪದೇ ಕುಡಿಯುತ್ತೇನೆ. ಏಕೆಂದರೆ, ಐದುವರ್ಷಗಳ ಕ್ಯಾಲ್ಸಿಯಂನ್ನ ಗರ್ಭಿಣಿ ತನ್ನ ಒಂದು ಗರ್ಭಾವಸ್ಥೆಯಲ್ಲಿ ಕಳೆದುಕೊಂಡಿರುತ್ತಾಳೆ. ಹೀಗಾಗಿ ಪ್ರಸವದ ನಂತರದ ಡಯಟ್‌ನಲ್ಲಿ ಕ್ಯಾಲ್ಸಿಯಂಪೂರಿತ ಆಹಾರ ಅತೀ ಮುಖ್ಯ. ಹೀಗಾಗಿ ನನ್ನ ಡಯಟೀಶಿಯನ್‌ ರುಜುತಾ ದಿವೇಕರ್‌ ಹಾಲನ್ನ ಖಂಡಿತವಾಗಿ ಸೇವಿಸಲು ಹೇಳುತ್ತಾರೆ.
3. ಪ್ರಸವದ ನಂತರ ಕಣ್ಣಿನ ಸುತ್ತ ಡಾರ್ಕ್‌ ಸರ್ಕಲ್‌ ಮೂಡುವುದು ಅತೀ ಸಾಮಾನ್ಯ. ಇದು ದೇಹದಲ್ಲಿಯ ಕಬ್ಬಿಣಾಂಶ ಕೊರತೆಯಂದ ಉಂಟಾಗುವ ತೊಂದರೆ. ಹೀಗಾಗಿ ನಾನು ಕಬ್ಬಿಣಾಂಶ ಮತ್ತು ವಿಟಾಮಿನ್‌ ಬಿ12 ಸತ್ವಹೊಂದಿರುವ ಮೊಸರು, ಮಜ್ಜಿಗೆ, ತಾಜಾ ಉಪ್ಪಿನಕಾಯಿಗಳನ್ನ ಸೇವಿಸುತ್ತೇನೆ. ಅಲ್ಲದೆ ಕಬ್ಬಿಣಾಂಶಗಳನ್ನ ಅಪಾರವಾಗಿ ಹೊಂದಿರುವ ತೆಂಗಿನ ಕಾಯಿ, ಎಳ್ಳು ಮತ್ತು ಬೆಲ್ಲದ ಮಿಶ್ರಣವನ್ನ ಡಯಟೀಶಿಯನ್‌ ಸಲಹೆಯ ಮೇರೆಗೆ ಸೇವಿಸುತ್ತೇನೆ.
4. ತಾನು ಅನ್ನವನ್ನ ಸೇವಿಸುವುದಕ್ಕೆ ಹಿಂಜರಿಯುತ್ತಿದ್ದೆ, ಆದರೆ ನನ್ನ ಡಯಟೀಶಿಯನ್‌ ಅನ್ನವನ್ನ ಸೇವಿಸಲೇಬೇಕು ಎಂದು ಸೂಚಿಸಿದ್ದಾರೆ. ಹೀಗಾಗಿ ಮಿತ ಪ್ರಮಾಣದಲ್ಲಿ ದಿನಕ್ಕೆ ಎರಡುಬಾರಿ ಅನ್ನ ಸೇವಿಸುತ್ತೇನೆ. ಗರ್ಭಾವಸ್ಥೆಯಲ್ಲಿ ನಮ್ಮ ದೇಹ ಕಳೆದುಕೊಂಡಿರುವ ಅಪಾರ ಪ್ರಮಾಣದ ಗುಡ್‌ಬ್ಯಾಕ್ಟೇರಿಯಾವನ್ನ ಪುನಃ ಪಡೆಯಲು ಅನ್ನ ಸಹಕಾರಿ ಎನ್ನುತ್ತಾರೆ ಕರೀನಾ.
5. ಅತಿಯಾದ ಸ್ಟ್ರಿಕ್ಟ್‌ ಡಯಟ್‌ ಮಾಡುವಂತಿಲ್ಲ ಎಂದು ಡಯಟೀಶಿಯನ್ ದಿವೇಕರ್‌ ತಾಕೀತು ಮಾಡಿದ್ದಾರೆ, ಇದರಿಂದ ಪ್ರಗ್ನೆನ್ಸಿ ಥೈರಾಯಿಡ್‌ ಮುಂದುವರೆಯುವ ಸಾಧ್ಯತೆ ಇರುತ್ತದೆ ಮತ್ತು ಲೈಫ್‌ಸ್ಟೈಲ್‌ ಡಿಸ್‌ಆರ್ಡರ್‌ ಸಮಸ್ಯೆ ಎದುರಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಹೀಗಾಗಿ ತಿನ್ನುವ ಆಹಾರದ ಕ್ಯಾಲೋರಿ ಲೆಕ್ಕಾಚರವಷ್ಟೇ ಪಾಲಿಸುತ್ತೇನೆ ಎನ್ನುತ್ತಾರೆ ಬೇಬೋ
6. ಕರೀನಾ ಪ್ರಕಾರ, ತೆಳ್ಳಗಾಗುವುದು ಅಂದರೆ ಬೇಡದ ಕೊಬ್ಬನ್ನ ಇಳಿಸುವುದು ಅಷ್ಟೆ.  ದೇಹವನ್ನ ಸಣ್ಣ ಮಾಡುವುದರ ಜೊತೆಜೊತೆಗೆ ಎಲುಬುಗಳ ಸಾಮರ್ಥ್ಯಗಳನ್ನೂ ಹೆಚ್ಚಿಸಿಕೊಂಡು, ಮಾಂಸಖಂಡಗಳನ್ನೂ ಬೆಳೆಸಬೇಕು ಅನ್ನುತ್ತಾರೆ. ಮಾಂಸವಿಲ್ಲದ ಸಣಕಲು ದೇಹ ಆಕರ್ಷಕವಾಗಿರುವುದಿಲ್ಲ ಎಂದಿರುವ ಅವರು ಅತೀ ಎಚ್ಚರಿಕೆಯಿಂದ ಡಯಟ್‌ ಮಾಡುತ್ತಾರಂತೆ.
7. ಡಯಟೀಶಿಯನ್‌ ರುಜುತಾ ಜೊತೆಗೆ ಕರೀನಾ ವಾಕ್‌ ಮಾಡುತ್ತಾರಂತೆ. ರುಜುತಾ ಪ್ರಕಾರ ವಾಕಿಂಗ್‌ನಲ್ಲಿ ಒಳ್ಳೆಯ ಮತ್ತು ಸುಲಭದ ವ್ಯಾಯಾಮ ಪ್ರಪಂಚದಲ್ಲಿ ಬೇರೆ ಯಾವುದೂ ಇಲ್ಲ. ದಿನದಲ್ಲಿ 20ರಿಂದ 30ನಿಮಿಷ ನಡೆದಾಡುವುದರಿಂದ ದೇಹವನ್ನ ಆರೋಗ್ಯವಾಗಿ ಇರಿಸಿಕೊಳ್ಳಲು ಸಾಧ್ಯ ಅಂತ ಕರೀನಾ ಸಲಹೆ ನೀಡುತ್ತಾರೆ.
ಪ್ರಗ್ನೆನ್ಸಿ ನಂತರ ತೂಕ ಇಳಿಸಲು ಹೊರಟಿರುವ ಹೊಸ ತಾಯಿಯರಿಗೆ ಡಯಟ್‌ ಕುರಿತಾದ ತಮ್ಮ ಧೋರಣೆಯನ್ನ ತಿಳಿಸಿರುವ ಕರೀನಾ ಸೂಕ್ತ ಸಲಹೆ ನೀಡಿದ್ದಲ್ಲದೆ, ಅನಾರೋಗ್ಯಕರ ರೀತಿಯಲ್ಲಿ ಡಯಟ್‌ ಮಾಡಿ ತಮ್ಮ ಆರೋಗ್ಯ ಕೆಡಿಸಿಕೊಳ್ಳಬೇಡಿ ಎಂದು ತಮ್ಮ ಮಾತಿನ ಕೊನೆಯಲ್ಲಿ ಮತ್ತೊಂದು ಬಾರಿ ಎಚ್ಚರಿಸಿದ್ದಾರೆ.

2 thoughts on “ತೆಳ್ಳಗಾಗಲು ಬೇಬೋ ಕಸರತ್ತು :ಕರೀನಾ ಕಪೂರ್‌‌ ಅನುಸರಿಸುತ್ತಿರುವ ಹೆಲ್ದಿ ಡಯಟ್‌ ಪ್ಲಾನ್‌ ಏನು ಗೊತ್ತಾ..?

  • October 24, 2017 at 12:15 PM
    Permalink

    I know this if off topic but I’m looking into starting my own weblog and was curious what all is needed to get set up? I’m assuming having a blog like yours would cost a pretty penny? I’m not very internet savvy so I’m not 100 sure. Any recommendations or advice would be greatly appreciated. Many thanks

Comments are closed.

Social Media Auto Publish Powered By : XYZScripts.com