MES ಮುಖಂಡ ಕಿರಣ್‌ ಠಾಕೂರ್‌ಗೆ ತಾಕತ್ತಿದ್ದರೆ ಚುನಾವಣೆಗೆ ಸ್ಪರ್ಧಿಸಲಿ : ಕನ್ನಡ ಕ್ರಿಯಾ ಸಮಿತಿ ಸವಾಲು

ಬೆಳಗಾವಿ:  ಎಂಇಎಸ್ ಮುಖಂಡ ಕಿರಣ್ ಠಾಕೂರಗೆ ತಾಕತ್ತಿದ್ದರೆ ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಲಿ ಎಂದು ಬೆಳಗಾವಿ ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಸವಾಲು ಹಾಕಿದ್ದಾರೆ.  ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಆಶೋಕ್‌ ಚಂದರಗಿ ,  ಕಂಡವರ ಮಕ್ಕಳನ್ನು ಬಾವಿಗೆ ತಳ್ಳುವುದನ್ನು ಕಿರಣ್‌ ಠಾಕೂರ್‌ ನಿಲ್ಲಿಸಬೇಕು. ಠಾಕೂರ್ ಸ್ಪರ್ಧಿಸಿದ್ರೆ ಅವರ ಠೇವಣಿ ಜಪ್ತಿಯಾಗಲಿದೆ‌.

ಪ್ರಜ್ಞಾವಂತ ಮರಾಠಿಗರು ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದಿದ್ದಾರೆ. ಅಲ್ಲದೆ ಎಂಇಎಸ್‌ ಮೇಲೆ ವಾಗ್ದಾಳಿ ಮುಂದುವರೆಸಿ, ಎಂಇಎಸ್ ನಿಂತ ನೆಲ ಕುಸಿಯುತ್ತಿದೆ. ಆದ್ದರಿಂದಲೇ ಹೊಸ ಕ್ಯಾತೆ ಆರಂಭಿಸಿದ್ದಾರೆ. ಭಾಷಾ ಅಲ್ಪ ಸಂಖ್ಯಾತ ಆಯೋಗದ ನಿಯಮವನ್ನ ಕೇವಲ ಕರ್ನಾಟಕ ಯಾಕೆ ಪಾಲಿಸಬೇಕು. ಮಹಾರಾಷ್ಟ್ರದ ಜತ್ತ, ಅಕ್ಕಲಕೋಟ್, ಸೋಲ್ಲಾಪುರದಲ್ಲಿ ಶೇ 50 ರಷ್ಟು ಕನ್ನಡ ಭಾಷಿಕರಿದ್ದಾರೆ. ಅಲ್ಲಿನ ಕನ್ನಡಿಗರಿಗೆ ಮಹಾರಾಷ್ಟ್ರ ಸರ್ಕಾರ ಕನ್ನಡದಲ್ಲಿ ದಾಖಲೆ ನೀಡಲಿ. ಅಂದಾಗ ಮಾತ್ರ ಬೆಳಗಾವಿ ಮರಾಠಿಗರಿಗೆ ಮರಾಠಿಯಲ್ಲಿ ದಾಖಲೆ ನೀಡುವುದಕ್ಕೆ ನಮ್ಮದು ತಕರಾರಿಲ್ಲ. ಭಾಷಾ ಅಲ್ಪಸಂಖ್ಯಾತ ಆಯೋಗದ ತೀರ್ಪು ಕರ್ನಾಟಕ ಸರ್ಕಾರ ಮಾತ್ರ ಏಕೆ ಪಾಲಿಸಬೇಕು ಎಂದು ಅವರು ಪ್ರಶ್ನಿಸಿದ್ದಾರೆ. ಅಲ್ಲದೆ ಎಂಇಎಸ್ ಬೇಡಿಕೆಯನ್ನು ಜಿಲ್ಲಾಧಿಕಾರಿ ಕಸದ ಬುಟ್ಟಿಗೆ ಹಾಕಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Comments are closed.

Social Media Auto Publish Powered By : XYZScripts.com