ಸಿದ್ದರಾಮಯ್ಯ ಮತ್ತು ಮಲ್ಲಿಕಾರ್ಜುನ ಖರ್ಗೆಯವರಿಗೆ ಮಾನ ಮರ್ಯಾದಿಯೇ ಇಲ್ಲ : ಗೋವಿಂದ ಕಾರಜೋಳ

 ಬಾಗಲಕೊಟೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆಯವರಿಗೆ ಮಾನ ಮರ್ಯಾದೆಯೇ ಇಲ್ಲ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ. ಸೋಮವಾರ ಬಾಗಲಕೋಟೆಯಲ್ಲಿ ನಡೆದ ಜನಸಂಪರ್ಕ ಅಭಿಯಾನದಲ್ಲಿ ಪಾಲ್ಗೊಂಡು ನಂತರ ಮಾತನಾಡಿದ ಅವರು,  ದಲಿತರ ಮನೆ ಊಟದಲ್ಲಿ ಕಾಂಗ್ರೆಸ್ ಕೀಳು ರಾಜಕಾರಣ ಮಾಡುತ್ತಿದೆ,   ಸಿಎಂ ಸ್ವಂತ ಜಿಲ್ಲೆಯಲ್ಲಿಯೇ ಅಸ್ಪೃಶ್ಯತೆ ತಾಂಡವವಾಡುತ್ತಿದೆ ಆದರೂ ಎಲ್ಲವೂ ಗೊತ್ತಿದ್ದು ಗೊತ್ತಿಲ್ಲದಂತಿದ್ದಾರೆ ಎಂದಿದ್ದಾರೆ.
ಅಲ್ಲದೆ, ತಮ್ಮ ಅಭಿಯಾನವನ್ನ ಸಮರ್ಥಿಸಿಕೊಳ್ಳುತ್ತಾ,   ದಲಿತರ ಮನೆಯ ಊಟವನ್ನೇ ನಾವು ಮಾಡಿದ್ದು, ಹೆಚ್ಚಿನ ಜನರಿಗೆ ಬೇಕಾದಾಗ ಮಾತ್ರ ಹೊಟೇಲಿನಿಂದ ತರಿಸಿದ್ದೇವೆ. ಆದರೆ ನಮಗೆ ದಲಿತರ ಮನೆಯ ಊಟವನ್ನೇ ನೀಡಿದ್ದಾರೆ ಎಂದರು.  ಅಂಬೇಡ್ಕರ್ ಸಾವಿನಲ್ಲಿ ರಾಜಕಾರಣ ಮಾಡಿದ ಕಾಂಗ್ರೆಸ್ ನಲ್ಲಿ ಖಗೆ೯ 1 ತಾಸು ಕೂಡ ಇರೋದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿರುವ ಅವರು, ತಮ್ಮ ಉಪಹಾರದ ಬಗ್ಗೆ ಕೆಲವು ಮಾಧ್ಯಮಗಳು ಸುಳ್ಳು ಸುದ್ದಿ ಬಿತ್ತರಿಸಿದ್ದು ಸರಿಯಲ್ಲ ಎಂದಿದ್ದಾರೆ. ⁠⁠⁠⁠

Comments are closed.

Social Media Auto Publish Powered By : XYZScripts.com