ದಲಿತರ ಮನೆಯಲ್ಲಿ‌ ಊಟದ ವಿಚಾರವನ್ನ ಪ್ರಚಾರಕ್ಕಾಗಿ ಬಳಸುವುದು ದಲಿತರಿಗೆ ಮಾಡುವ ಅಪಮಾನ : ಖರ್ಗೆ

ಚಿತ್ರದುರ್ಗ:  ಬಸವಣ್ಣನವರ ಕಾಲದಲ್ಲಿ ದಲಿತರು ಸವರ್ಣಿಯರ‌ ಮದುವೆ ಮಾಡಿಸಿದ್ದರು. ಆದರೆ, ಈಗಿನ ಬಿಜೆಪಿ ನಾಯಕರು ದಲಿತರ ಮನೆಯಲ್ಲಿ ಊಟ‌ ಮಾಡುವುದನ್ನು ದೊಡ್ಡ ಸುದ್ದಿ ಮಾಡುತ್ತಿದ್ದಾರೆ.  ದಲಿತರ ಮನೆಯಲ್ಲಿ‌ ಊಟ ಮಾಡುವುದೇ ಸುದ್ದಿಯಾಗುವುದಾದರೆ ಅದು ಅವರಿಗೆ ಮಾಡಿದ ಅವಮಾನ ಎಂದು ಲೋಕಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿದ್ದಾರೆ. ಚಿತ್ರದುರ್ಗದ ಹಿರಿಯೂರಿನಲ್ಲಿ ಮಾತನಾಡಿದ ಅವರು, ಇದರಿಂದ ಬಿಜೆಪಿ ದೃಷ್ಟಿಯಲ್ಲಿ ದಲಿತರು ಇನ್ನೂ ಹಿಂದೂಗಳಲ್ಲ ಎಂಬ ಧೋರಣೆಯಲ್ಲಿದೆ ಎಂಬತಾಗುತ್ತದೆ.
ಇದು ನಾಚಿಕೆಗೇಡಿನ ಸಂಗತಿ ಎಂದು ಅಭಿಪ್ರಾಯಪಟ್ಟರು. ನಂತರ ಕೇಂದ್ರ ಸರ್ಕಾರದ ಬಗ್ಗೆ ಮಾತನಾಡುತ್ತಾ,  ಕೇಂದ್ರ ಸರ್ಕಾರ ಅಧಿಕಾರಕ್ಕೆ ಬರುವಾಗ ನೀಡಿದ್ದ ಆಶ್ವಾಸನೆಗಳಲ್ಲಿ ಒಂದೂ ಈಡೇರಿಲ್ಲ. ಹಿಂದಿನ ಸರ್ಕಾರದ ಯೋಜನೆಗಳಿಗೆ ಹೊಸ ಹೆಸರುಗಳನ್ನಿಟ್ಟಿದ್ದೇ ಸಾಧನೆಯಾಗಿದೆ. ಮೂರು ವರ್ಷದ ಅಧಿಕಾರದ ಅವಧಿಯಲ್ಲಿ ಮೋದಿ‌ ನೇತೃತ್ವದ ಸರ್ಕಾರ ವಿಫಲವಾಗಿದೆ ಎಂದು ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

Comments are closed.

Social Media Auto Publish Powered By : XYZScripts.com