ಶಾಸಕ ಮುನಿರತ್ನರಿಂದ ಶ್ರೀಗಳೇ ರಕ್ಷಿಸಬೇಕು,ಇಲ್ಲವಾದ್ರೆ ಮಠದ ಮುಂದೆ ಪ್ರಾಣ ಬಿಡುತ್ತೇನೆ : ಆಶಾ ಸುರೇಶ

ಬೆಂಗಳೂರು: ಶಾಸಕ ಮುನಿರತ್ನ ಬೆಂಬಲಿಗರು ನಡೆಸುತ್ತಿರುವ ಹಲ್ಲೆ ಆರೋಪ ವಿಚಾರವಾಗಿ, ಬಿಬಿಎಂಪಿಯ ಮೂವರು ಮಹಿಳಾ ಸದಸ್ಯರು ಆದಿಚುಂಚನಗಿರಿ ಮಠಕ್ಕೆ ಭೇಟಿ, ಶ್ರೀಗಳ ಮುಂದೆ ಈ ಕುರಿತು ದೂರು ನೀಡಲಾಗುವುದು, ಮಹಿಳೆಯರ ರಕ್ಷಣೆಗೆ ಶ್ರೀಗಳು ಮುಂದಾಗಬೇಕು,  ಶ್ರೀಗಳೇ ಈ ವಿಚಾರವನ್ನು ಬಗೆಹರಿಸಬೇಕು, ಇಲ್ಲವಾದ್ರೆ ಮಠದ ಮುಂದೆ ವಿಷ ಸೇವನೆ ಮಾಡಿ ಪ್ರಾಣ ಬಿಡುತ್ತೇನೆ ಎಂದು ಪಾಲಿಕೆ ಸದಸ್ಯೆ ಆಶಾ ಸುರೇಶ ಎಚ್ಚರಿಸಿದ್ದಾರೆ. ⁠⁠⁠⁠
ಶಾಸಕ ಮುನಿರತ್ನ ಮತ್ತು ಅವರ ಬೆಂಬಲಿಗರು ನಿರಂತರವಾಗಿ ಅವರ ಕ್ಷೇತ್ರದ ಒಕ್ಕಲಿಗ ಮಹಿಳಾ ಪಾಲಿಕೆ ಸದಸ್ಯರ ಮೇಲೆ ಹಲ್ಲೆ ನಡೆಸುತ್ತಿರುವ ಬಗ್ಗೆ ಆದಿಚುಂಚನಗಿರಿ ಮಠಾಧೀಶ ನಿರ್ಮಲಾನಂದರಿಗೆ  ದೂರು ನೀಡುವ ಸಲುವಾಗಿ  ವಿಜಯನಗರ ಮಠಕ್ಕೆ ಭೇಟಿ ನೀಡಿದ್ದ BBMP ಸದಸ್ಯರಾದ ಆಶಾಸುರೇಶ್, ಮಮತಾ ವಾಸುದೇವ್ ಮತ್ತು ಮಂಜುಳಾ ನಾರಾಯಣಸ್ವಾಮಿ ಮತ್ತು ರಾಮಚಂದ್ರ ಅವರು ಮಾಧ್ಯಮಗಳೊಂದಿಗೆ ಮಾತನಾಡಿ ಈ ವಿಚಾರ ತಿಳಿಸಿದ್ದಾರೆ.
ಮೂರು ತಿಂಗಳ ಹಿಂದೆ ಈ ವಿಚಾರವಾಗಿ ಶಾಸಕ ಮುನಿರತ್ನ ಅವರನ್ನು ಶ್ರೀಗಳು ಕರೆದು ಬುದ್ಧಿವಾದ ಹೇಳಿದ್ದರು,  ಶ್ರೀಗಳ ಮುಂದೆ ಶಾಸಕ ಮುನಿರತ್ನ ಶಿಷ್ಟಾಚಾರ ಪಾಲಿಸುವುದಾಗಿ ಒಪ್ಪಿಗೆ ನೀಡಿದ್ದರು,  ಇದೀಗ ಮತ್ತೆ ನಮ್ಮ ಮೇಲೆ ವಿನಾಕಾರಣ ಹಲ್ಲೆ ಮತ್ತು ಕೇಸ್ ದಾಖಲು ಮಾಡುತ್ತಿದ್ದಾರೆ ಎಂದು ಸದಸ್ಯರು ದೂರಿದ್ದಾರೆ.
ಮಾಜಿ ಪಾಲಿಕೆ ಸದಸ್ಯ ನಾರಾಯಣಸ್ವಾಮಿ ಈ ಕುರಿತು ಹೇಳಿಕೆ ನೀಡಿ,  ಶಾಸಕ ಮುನಿರತ್ನರನ್ನು ನಿಮ್ಹಾನಸ್  ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಬೇಕು ಎಂದು ವ್ಯಂಗ್ಯಮಿಶ್ರಿತ ಅಸಮಾಧಾನವನ್ನ ವ್ಯಕ್ತಪಡಿಸಿದ್ದಾರೆ. ಅಲ್ಲದೆ  ಸಿಎಂ ಸಿದ್ದರಾಮಯ್ಯ ಮುನಿರತ್ನ ವಿರುದ್ಧ ಕ್ರಮ ಕೈಗೊಳ್ಳಬೇಕು, ಸಿಎಂ ಸಿದ್ದರಾಮಯ್ಯ ನೊಂದವರ ಪರವಾಗಿ ಇರರ್ಬೇಕು ಎಂದು ಆಗ್ರಹಿಸಿದ್ದಾರೆ.

4 thoughts on “ಶಾಸಕ ಮುನಿರತ್ನರಿಂದ ಶ್ರೀಗಳೇ ರಕ್ಷಿಸಬೇಕು,ಇಲ್ಲವಾದ್ರೆ ಮಠದ ಮುಂದೆ ಪ್ರಾಣ ಬಿಡುತ್ತೇನೆ : ಆಶಾ ಸುರೇಶ

 • October 18, 2017 at 2:20 PM
  Permalink

  Great blog here! Also your website loads up fast! What host are you using? Can I get your affiliate link to your host? I wish my site loaded up as quickly as yours lol|

 • October 20, 2017 at 7:50 PM
  Permalink

  Amazing! Its truly amazing article, I have got much clear idea concerning from this post.|

 • October 25, 2017 at 10:04 AM
  Permalink

  Hello everyone, it’s my first pay a visit at this site,
  and piece of writing is really fruitful for me, keep up posting these
  posts.

Comments are closed.