6 ಮದುವೆಯಾಗಿದ್ದ ನಾಗ ವಿಷನೀಡಿ ಮೊದಲನೇ ಪತ್ನಿಯನ್ನ ಕೊಲೆ ಮಾಡಿದ್ನಂತೆ : ಮಾಹಿತಿ ನೀಡಿದ ಸಂಬಂಧಿಕರು

ಬೆಂಗಳೂರು: ಬ್ಲಾಕ್‌ ಅಂಡ್‌ ವೈಟ್‌ ದಂಧೆಯ ಕ್ರಿಮಿನಲ್‌ ಬಾಂಬ್  ನಾಗ ತನ್ನ ಮೊದಲ ಪತ್ನಿಗೆ ಎರಡು ಹೆಣ್ಣು ಮಕ್ಕಳು ಹುಟ್ಟಿವೆ ಎಂಬ ಕಾರಣಕ್ಕೆ ಆಕೆಗೆ ವಿಷ ಕೊಟ್ಟು ಕೊಲೆ ಮಾಡಿದ್ದ,  ನಂತರ ಲಕ್ಷ್ಮಿ ಮತ್ತು ಪುಷ್ಪಾ ಸೇರಿದಂತೆ 6 ಮದುವೆಯಾಗಿದ್ದ ಎಂಬ ಮಾಹಿತಿ ಬಹಿರಂಗಗೊಂಡಿದೆ. ಬ್ಲಾಕ್ ಅಂಡ್ ವೈಟ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ರೌಡಿ ಶೀಟರ್ ನಾಗನ ವಿಚಾರಣೆಯನ್ನು ಚುರುಕುಗೊಳಿಸಿದ್ದು, ಬಾಂಬ್  ನಾಗನ ದೊಡ್ಡ ಅಳಿಯ ಬಾಯಪ್ಪ ಮತ್ತು ತಂಗಿ ರುಕ್ಮಿಣಿಯನ್ನು ಶನಿವಾರ ವಿಚಾರಣೆ ನಡೆಸಿದ್ದು, ವಿಚಾರಣೆ ವೇಳೆ ಅವರು ಸ್ಫೋಟಕ ಮಾಹಿತಿ ನೀಡಿದ್ದಾರೆ.
ಪುಷ್ಪ ಮೂಲತಃ ಮೈಸೂರು ಜಿಲ್ಲೆಯವಳಾಗಿದ್ದು,  ಹೊಲಿಗೆ ತರಬೇತಿ ಕೇಂದ್ರದಲ್ಲಿ ಆಕೆ ಶಿಕ್ಷಕಿಯಾಗಿದ್ದಳು.  ಮೈಸೂರಿನಿಂದ ಆಗಾಗ ಪುಷ್ಪ ಮತ್ತು ಅವಳ ತರಬೇತಿ ತಂಡ ಬೆಂಗಳೂರಿಗೆ ಬರುತ್ತಿತ್ತು, ಈ ಸಮಯದಲ್ಲಿ ಕಾರ್ಪೊರೇಟರ್ ಆಗಿದ್ದ ಬಾಂಬ್  ನಾಗ, ಅವರಿಗೆ ಉಚಿತವಾಗಿ ಹೊಲಿಗೆ ಯಂತ್ರ ಕೊಡಿಸಿದ್ದನಂತೆ. ತರಬೇತಿಗೆ ಬರುತ್ತಿದ್ದ ಹೆಣ್ಣು ಮಕ್ಕಳ ಜೊತೆ ಲೈಂಗಿಕ ಸಂಪರ್ಕ ಇಟ್ಟುಕೊಳ್ಳುತ್ತಿದ್ದ  ಆತನಿಗೆ ಪುಷ್ಪ ಕೂಡ ಗಂಟುಬಿದ್ದಿದ್ದಳು. ಈ ಮೊದಲೇ ಮದುವೆಯಾಗಿದ್ದ ಪುಷ್ಪಾಳಿಗೆ ಡೈವೋರ್ಸ್‌ ಕೊಡಿಸಿ ನಾಗ ತಾನೇ ಮದುವೆಯಾದನಂತೆ.  ಅತ್ಯಂತ ಚಾಣಾಕ್ಷಳಾಗಿದ್ದ ಪುಷ್ಪ, ಲಕ್ಷ್ಮಿಗಿಂತ ನಾಗನ ಕ್ರಿಮಿನಲ್ ಚಟುವಟಿಕೆಗಳಿಗೆ ಹಾಗೂ ಬ್ಲಾಕ್ ಅಂಡ್ ವೈಟ್ ದಂಧೆಗೆ ಸಹಕರಿಸುತ್ತಿದ್ದಳು ಎಂದು ಅಳಿಯ ಬಾಯಪ್ಪ ಮತ್ತು ತಂಗಿ ರುಕ್ಮಿಣಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಶನಿವಾರ ನಾಗನ ಪರ್ಸನಲ್‌ ಅಸಿಸ್ಟಂಟ್‌ ಆಗಿದ್ದ ಸೌಂದರ್ಯಳನ್ನು ಪೊಲೀಸರು ವಿಚಾರಣೆ ನಡೆಸಲಿದ್ದು, ಆಕೆ ಕೂಡ ನಾಗನ ಕ್ರಿಮಿನಲ್‌ ಚಟುವಟಿಕೆಗಳಿಗೆ ಸಹಕರಿಸುತ್ತಿದ್ದಳು ಎನ್ನಲಾಗಿದೆ.

Comments are closed.