ಹೆಚ್ ಡಿಕೆಯ 150 ಕೋಟಿ ಲಂಚ ಪ್ರಕರಣಕ್ಕೆ ಸಾಕ್ಷಿ ವದಗಿಸಲು ರೆಡ್ಡಿಗೆ 3 ವಾರ ಬೇಕಂತೆ !

ಬೆಂಗಳೂರು, ಮೇ 19: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಳ್ಳಾರಿಯ ಗಾಲಿ ಜನಾರ್ಧನ ರೆಡ್ಡಿಯಿಂದ 150 ಕೋಟಿ ರೂ. ಲಂಚ ಪಡೆದಿದ್ದಾರೆ ಎಂದು  ಆರೋಪ ಮಾಡಿದ್ರು. ಈ ಸಂಬಂಧ ವಿಶೇಷ ತನಿಖಾ ದಳ ಅಧಿಕಾರಿಗಳು ನೊಟೀಸ್ ನೀಡಿದ್ದರಿಂದ ರೆಡ್ಡಿ ಅವರ ವಿಚಾರಣೆಗೆ ಹಾಜರಾಗಿದ್ರು.

ಎಸ್ ಐಟಿಗೆ ಸೂಕ್ತ ಸಾಕ್ಷಿ ಒದಗಿಸಲು ಮೂರು ವಾರಗಳ ಕಾಲ ಕಾಲಾವಕಾಶ ಕೋರಿದ್ದೇನೆ. ಎಸ್ ಐಟಿ ಅಧಿಕಾರಗಳು ಇದಕ್ಕೆ ಒಪ್ಪಿದ್ದಾರೆ ಎಂದು ವಿಚಾರಣೆ ಬಳಿಕ ತಿಳಿಸಿದ್ರು. ಚಿತ್ರದುರ್ಗ ಜಿಲ್ಲೆಯ ಜಂತಕಲ್ ಮೈನಿಂಗ್ ಗುತ್ತಿಗೆ ನವೀಕರಣಕ್ಕೆ ಅನುಮತಿ ನೀಡಿದ ಆರೋಪವನ್ನ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕೆ ಎದುರಿಸುತ್ತಿದ್ದಾರೆ.

ಎಸ್‌ಐಟಿ ಐಜಿಪಿ ಚರಣ್ ರೆಡ್ಡಿ ಮುಂದೆ ಹಾಜರಾಗಿದ್ದ  ಜನಾರ್ದನರೆಡ್ಡಿಯನ್ನ 150 ಕೋಟಿ ಗಣಿ ಕೇಸಲ್ಲಿ ಸಾಕ್ಷಿಯಾಗಿದ್ದಾರೆ. ಬಳ್ಳಾರಿ ಗಣಿ ಉದ್ಯಮಿಗಳಿಂದ 2006ರಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ, ಅರಣ್ಯ ಸಚಿವರಾಗಿದ್ದ ಸಿ ಚೆನ್ನಿಗಪ್ಪ ಹಾಗೂ ಗೃಹ ಸಚಿವ ಎಂ.ಪಿ ಪ್ರಕಾಶ್ ಇವರು 150 ಕೋಟಿ ರೂ ಲಂಚ ಪಡೆದಿದ್ದರು ಎಂಬುದು ಇವರ ಆರೋಪವಾಗಿದೆ.

 

 

 

 

Comments are closed.