ಪಾರ್ವತಮ್ಮ ರಾಜಕುಮಾರ್ ಗುಣಮುಖರಾಗಲಿ ಎಂದು ಪ್ರಾರ್ಥಿಸಿ ವಿಶೇಷ ಪೂಜೆ..

ಮೈಸೂರು: ಹಿರಿಯ ಚಲನಚಿತ್ರ ನಿರ್ಮಾಪಕಿ ಹಾಗೂ ಕನ್ನಡದ ವರನಟ ದಿವಂಗತ ಡಾ. ರಾಜಕುಮಾರ್ ಅವರ ಪತ್ನಿ ಪಾರ್ವತಮ್ಮ ರಾಜಕುಮಾರ್ ಆನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದು, ಅವರು ಶೀಘ್ರ ಗುಣಮುಖರಾಗಿ ಮರಳಲಿ ಎಂದು ಪ್ರಾರ್ಥಿಸಿ, ಮೈಸೂರಿನ ಶಕ್ತಿಧಾಮ ಸ್ವಯಂ ಸೇವಾ ಸಂಸ್ಥೆಯಲ್ಲಿ ಶುಕ್ರವಾರ ವಿಶೇಷ ಪೂಜೆ ನೆರವೇರಿದೆ.
ನಿರ್ಗತಿಕ ಮಹಿಳೆಯರು ಹಾಗೂ ಮಕ್ಕಳಿಗೆ ಆಶ್ರಯ ನೀಡಿರುವ ಶಕ್ತಿಧಾಮ ಸ್ವಯಂ ಸೇವಾ ಸಂಸ್ಥೆಯಲ್ಲಿಯ ಎಲ್ಲ ಸಂತ್ರಸ್ಥರು ಮತ್ತು ಕಾರ್ಯಕರ್ತರು ಪಾರ್ವತಮ್ಮನವರ ಆರೋಗ್ಯ ಸುಧಾರಣೆಗಾಗಿ ಪೂಜೆ ನಡೆಸಿ ದೇವರನ್ನ ಪ್ರಾರ್ಥಿಸಿದ್ದಾರೆ.  ಶಕ್ತಿಧಾಮ ಸ್ವರ್ಯ ಸೇವಾ ಸಂಸ್ಥೆ ಸ್ವತಃ ಪಾರ್ವತಮ್ಮ ರಾಜಕುಮಾರ್ ಅವರು ಸ್ಥಾಪಿಸಿರುವ ಸಂಸ್ಥೆಯಾಗಿದೆ.

Comments are closed.

Social Media Auto Publish Powered By : XYZScripts.com