ಶಾಸಕ ಎಸ್‌.ಟಿ ಸೋಮಶೇಖರ್‌ ರಿಂದ 98 ಕೋಟಿ ಅನುದಾನ ದುರ್ಬಳಕೆ – ಎನ್.ಆರ್ ರಮೇಶ್

ಬೆಂಗಳೂರು: ಯಶವಂತಪುರ ಶಾಸಕ ಎಸ್ ಟಿ ಸೋಮಶೇಖರ್ ಮೇಲೆ ವಿಶೇಷ ಅನುದಾನ ದುರ್ಬಳಕೆ ಮಾಡಿದ ಆರೋಪ ಬಂದಿದೆ, ಘನತ್ಯಾಜ್ಯ ಸಂಸ್ಕರಣೆಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಬಿಡುಗಡೆಯಾದ 98,20,16,904 ರೂಪಾಯಿಗಳನ್ನ ದುರ್ಬಳಕೆ ಮಾಡಿದ್ದಾರೆ ಎಂದು ಬೆಂಗಳೂರು ನಗರ ಬಿಜೆಪಿ ವಕ್ತಾರ ಎನ್.ಆರ್ ರಮೇಶ್ ಗಂಭೀರ ಆರೋಪ ಮಾಡಿದ್ದಾರೆ. ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎನ್‌.ಆರ್‌ ರಮೇಶ್‌, ಎಸ್‌.ಟಿ ಸೋಮಶೇಖರ್‌ ವಿರುದ್ಧ ನೀಡಿದ ಆರೋಪ ಪಟ್ಟಿ ಈ ಕೆಳಗಿನಂತಿದೆ
 
* ತಾವರೆಕೆರೆ – ರಾಮೋಹಳ್ಳಿ – ಕೆರೆ ಚೂಡನ ಹಳ್ಳಿ – ಕಗ್ಗಲೀಪುರ ಗ್ರಾಮಗಳ ವ್ಯಾಪ್ತಿಯಲ್ಲಿ ಖಾಸಗಿ ಬಡಾವಣೆಗಳನ್ನು ಶಾಸಕ S.T. ಸೋಮಶೇಖರ್ ನಿರ್ಮಿಸುತ್ತಿದ್ದಾರೆ.
* ಕೇಂದ್ರ ಸರ್ಕಾರದ ವಿಶೇಷ ಅನುದಾನ P – 2200 ಲೆಕ್ಕ ಶೀರ್ಷಿಕೆಯಡಿಯಲ್ಲಿ 18,23,62,000/- ರೂಪಾಯಿಗಳ ದುರ್ಬಳಕೆ ಮಾಡಿದ್ದಾರೆ
* ಕೇಂದ್ರ ಸರ್ಕಾರದ ವಿಶೇಷ ಅನುದಾನ P – 2200 ಲೆಕ್ಕ ಶೀರ್ಷಿಕೆಯಡಿಯಲ್ಲಿ ಹದಿನೆಂಟು ಕೋಟಿ ಇಪ್ಪತ್ತಮೂರು ಲಕ್ಷದ ಅರವತ್ತೆರಡು ಸಾವಿರ ರೂಪಾಯಿಗಳ ದುರ್ಬಳಕೆ ಮಾಡಿದ್ದಾರೆ
* P – 3162 ಅಡಿಯಲ್ಲಿ 19,76,54,904/- ರೂಪಾಯಿಗಳನ್ನ ದುರ್ಬಳಕೆ ಮಾಡಿದ್ದಾರೆ
* P-3158 ರ ಅಡಿಯಲ್ಲಿ 60,20,00,000/- ರೂಪಾಯಿಗಳು S.T. ಸೋಮಶೇಖರ್‌ರಿಂದ ದುರ್ಬಳಕೆಯಾಗಿದೆ
* 2016-17 ರ ಸಾಲಿನಲ್ಲಿ ರಾಜ್ಯ ಸರ್ಕಾರ 12 ತ್ಯಾಜ್ಯ ಸಂಸ್ಕರಣಾ ಘಟಕಗಳ ಸುತ್ತಲಿನ ಪ್ರದೇಶಗಳ ಅಭಿವೃದ್ಧಿಗೆ 100 ಕೋಟಿ ರೂಪಾಯಿಗಳ ವಿಶೇಷ ಅನುದಾನವನ್ನು ಬಿಡುಗಡೆ ಮಾಡಿದ್ದು, ಈ ಪೈಕಿ ಕೇವಲ ಯಶವಂತಪುರ ಕ್ಷೇತ್ರದ ನಾಲ್ಕು ಘಟಕಗಳಿಗೆ ಮಾತ್ರವೇ 60,20,00,000/- ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ.
ಕನ್ನಹಳ್ಳಿ, ಸೀಗೇಹಳ್ಳಿ, ಸುಬ್ಬರಾಯನ ಪಾಳ್ಯ ಮತ್ತು ಲಿಂಗಧೀರನ ಹಳ್ಳಿ ಗಳಲ್ಲಿರುವ ಒಟ್ಟೂ 04 ತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ ಹಣ ಬಿಡುಗಡೆಯಾಗಿದೆ ಎಂದು ದಾಖಲಾಗಿದೆ ಆದರೆ, ನಾಲ್ಕು ಗ್ರಾಮಗಳಿಗೂ ತ್ಯಾಜ್ಯ ಸಂಸ್ಕರಣ ಘಟಕಗಳಿಗೂ ಯಾವ ಸಂಬಂಧವೂ ಇಲ್ಲ ಎಂದಿದ್ದಾರೆ.  ಅಲ್ಲದೆ ತ್ಯಾಜ್ಯ ಸಂಸ್ಕರಣ ಘಟಕಗಳಿರುವ ಗ್ರಾಮಗಳು ಮತ್ತು ಅವುಗಳ ಸುತ್ತಲಿನ ಪ್ರದೇಶಗಳ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಬಿಡುಗಡೆಯಾಗಿದ್ದ ವಿಶೇಷ ಅನುದಾನಗಳನ್ನ ಸದ್ಭಳಕೆ ಮಾಡದೆ,  ಸ್ವಂತಕ್ಕೆ ಉಪಯೋಗಿಸಿಕೊಂಡಿದ್ದಾರೆ ಎಂಬ ಆರೋಪ ಎಸ್‌.ಡಿ  ಸೋಮಶೇಖರ್‌ ಮೇಲೆ ಕೇಳಿಬರುತ್ತಿದೆ.  ಈ ಘಟಕಗಳ ಸುತ್ತಲಿನ ಪ್ರದೇಶಗಳ ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಬಿಡುಗಡೆಯಾಗಿದ್ದ ಅನುದಾನಗಳನ್ನೂ ಶಾಸಕರು ದುರ್ಬಳಕೆ ಮಾಡಿದ್ದಾರೆ ಎನ್ನಲಾಗಿದೆ.
ತ್ಯಾಜ್ಯ ಸಂಸ್ಕರಣಾ ಘಟಕಗಳಿರುವ ಗ್ರಾಮಗಳ ರಸ್ತೆಗಳು ಮತ್ತು ಚರಂಡಿಗಳ ಅಭಿವೃದ್ಧಿಗಾಗಿ ಮತ್ತು ಪರಿಸರ ಸಂರಕ್ಷಣೆ ಕಾರ್ಯಗಳಿಗಾಗಿ ಮಾತ್ರ ಈ ವಿಶೇಷ ಅನುದಾನಗಳನ್ನು ಬಳಸಬೇಕಿತ್ತು.  ಆದರೆ,  ವಿಶೇಷ ಅನುದಾನಗಳ ದುರ್ಬಳಕೆ ಮಾಡಿದವರ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ಎನ್‌.ಆರ್‌ ರಮೇಶ್‌ ಸುದ್ದಿಗೋ಼ಷ್ಠಿಯಲ್ಲಿ ತಿಳಿಸಿದ್ದಾರೆ.

Comments are closed.

Social Media Auto Publish Powered By : XYZScripts.com