ಸಾಲಬಾಧೆಗೆ ರೈತನ ಆತ್ಮಹತ್ಯೆ : ಬೆಳೆನಷ್ಟದಿಂದ ಮನನೊಂದು ಸಾವಿಗೆ ಶರಣಾದ ರೈತ

ಮೈಸೂರು: ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣ ಮುಂದುವರೆಯುತ್ತಲೇ ಇದ್ದು,  ಮೈಸೂರಿನ ರೈತನೊಬ್ಬ ಸಾಲದ ಬಾಧೆ ತಾಳಲಾರದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆ ಮಾಡಿಕೊಂಡ ರೈತ 40 ವರ್ಷ ವಯಸ್ಸಿನ ದಯಾನಂತ ಎಂಬಾತನಾಗಿದ್ದು,  ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕಿನ ಕರ್ತಾಳು ಗ್ರಾಮದವನಾಗಿದ್ದ.
ತನ್ನ 30 ಗುಂಟೆ ಜಮೀನಿನಲ್ಲಿ ಮುಸುಕಿನ ಜೋಳ ಬೆಳೆದಿದ್ದ ಈತ,  ಮಳೆಯಿಂದ ಬೆಳೆ ನಷ್ಟವಾದ ಹಿನ್ನೆಲೆಯಲ್ಲಿ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ.  ಹನಸೋಗೆ ಕೃಷಿಪತ್ತಿನ ಸಹಕಾರ ಸಂಘದಲ್ಲಿ 30 ಸಾವಿರ ಸಾಲ ಸೇರಿದಂತೆ 3 ಲಕ್ಷಕ್ಕೂ ಅಧಿಕ ಕೈಸಾಲ ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ. ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ⁠⁠⁠⁠

2 thoughts on “ಸಾಲಬಾಧೆಗೆ ರೈತನ ಆತ್ಮಹತ್ಯೆ : ಬೆಳೆನಷ್ಟದಿಂದ ಮನನೊಂದು ಸಾವಿಗೆ ಶರಣಾದ ರೈತ

  • October 16, 2017 at 4:52 PM
    Permalink

    Excellent web site. A lot of useful information here. I am sending it to some pals ans also sharing in delicious. And naturally, thanks in your effort!

  • October 24, 2017 at 7:35 PM
    Permalink

    I’ve recently started a site, the info you offer on this site has helped me greatly. Thanks for all of your time & work.

Comments are closed.

Social Media Auto Publish Powered By : XYZScripts.com