ಟ್ವಿಟ್ಟರ್‌ನಲ್ಲಿ ಕನ್ನಡಿಗರಿಗೆ ಅವಮಾನ : ಕನ್ನಡಿಗರ ಆತ್ಮಗೌವರವನ್ನೇ ಪ್ರಶ್ನಿಸಿದ ರಾಮ್‌ಗೋಪಾಲ್‌ ವರ್ಮಾ

ಮುಂಬೈ:  ಬಾಲಿವುಡ್‌ನ ಹೆಸರಾಂತ ನಿರ್ದೇಶಕ ರಾಮ್‌ಗೋಪಾಲ್‌ ವರ್ಮ ಕನ್ನಡಿಗರ ಆತ್ಮಗೌರವವನ್ನೇ ಪ್ರಶ್ನಿಸಿ ಟೀಕಿಸಿದ್ದಾರೆ.  ಶುಕ್ರವಾರ ಟ್ವಿಟ್ಟರ್‌ನಲ್ಲಿ ಕನ್ನಡಿಗರನ್ನ ಛೇಡಿಸಿ ಟ್ವಿಟ್ಟೀಕರಿಸಿರುವ ಅವರು, ಕನ್ನಡಿಗರ ಕನ್ನಡ ಪ್ರೀತಿಯನ್ನೇ ಅನುಮಾನಿಸಿದ್ದಾರೆ.
ತಮ್ಮದೇ ಕನ್ನಡ ಸಿನಿಮಾಗಳನ್ನ ನೋಡುವುದಕ್ಕಿಂತ ಹೆಚ್ಚುಬಾರಿ ಬಾಹುಬಲಿ ೨ ಸಿನಿಮಾವನ್ನ ನೋಡಿದ ಕನ್ನಡಿಗರ ಮೇಲೆ ಕನ್ನಡಿಗರೇ ಪ್ರತಿಭಟನೆ ಮಾಡಬೇಕು, ಕನ್ನಡದ ಸೂಪರ್‌ಹಿಟ್‌ ಸಿನಿಮಾಗಳು ದುಡಿದ ಹಣಕ್ಕಿಂತ ಹೆಚ್ಚು ಕನ್ನಡದ ನೆಲದಲ್ಲಿ ತೆಲುಗು ಚಿತ್ರ ದುಡಿಯುತ್ತಿದೆ ಅಂದರೆ ಡಬ್ಬಿಂಗ್‌ನ್ನ ವಿರೋಧಿಸುವ ಕನ್ನಡಿಗರ ಹೋರಾಟಕ್ಕೆ ಅರ್ಥವೇನು ಎಂಬರ್ಥದಲ್ಲಿ ವರ್ಮಾ ವಿಡಂಬಿಸಿದ್ದಲ್ಲದೆ, ಕನ್ನಡದ ನೆಲದಲ್ಲಿ ಬಾಹುಬಲಿ ಕಂಡಿರುವ ಯಶಸ್ಸು ಕನ್ನಡಿಗರಿಗೆ ಆತ್ಮಗೌರವೇ ಇಲ್ಲ ಅನ್ನೋದನ್ನ ಸಾಬೀತುಪಡಿಸುತ್ತದೆ ಎಂದು ಕಟುವಾಗಿ ಟೀಕಿಸಿದ್ದಾರೆ.
ಕಟ್ಟಪ್ಪ ಪಾತ್ರಧಾರಿ ಸತ್ಯರಾಜ್‌ರಿಂದ ಕನ್ನಡಿಗರಿಗೆ ಅವಮಾನವಾದ ಹಿನ್ನೆಲೆಯಲ್ಲಿ ಬಾಹುಬಲಿ ೨ ಚಿತ್ರದ ಬಿಡುಗಡೆಗೆ ಅವಕಾಶ ಕೊಡುವುದೇ ಇಲ್ಲ ಎಂದು ಹೋರಾಟಕ್ಕಿಳಿದ ಕನ್ನಡದ ಹೋರಾಟಗಾರರು, ಬಾಲಿವುಡ್‌ನ ಖ್ಯಾತ ನಿರ್ದೇಶಕನ ಈ ಟೀಕೆಗೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದು ಸಧ್ಯದ ಕುತೂಹಲ.

Comments are closed.

Social Media Auto Publish Powered By : XYZScripts.com