ಆಗಷ್ಟ್‌ನಲ್ಲಿ ಬೆಂಗಳೂರಿಗೆ ಅಮಿತ್‌ಷಾ : ಉ.ಪ ಮಾದರಿಯಲ್ಲಿ ಅಭ್ಯರ್ಥಿಗಳ ಆಯ್ಕೆ : ಬಿಎಸ್‌ವೈ

ಚಿತ್ರದುರ್ಗ: ಆಗಷ್ಟ್ 3ರಿಂದ ಮೂರುದಿನಗಳ ಕಾಲ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಬೆಂಗಳೂರಿಗೆ ಆಗಮಿಸಲಿದ್ದಾರೆ, ಅಂದು ಕರ್ನಾಟಕ ಅಭ್ಯರ್ಥಿಗಳ ಪಟ್ಟಿ ಅಮಿತ್ ಷಾ ಮುಂದಿಡಲಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ತಿಳಿಸಿದ್ದಾರೆ. ಚಿತ್ರದುರ್ಗದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಕರ್ನಾಟಕದಲ್ಲಿ ಉತ್ತರಪ್ರದೇಶದ ಮಾದರಿಯಲ್ಲಿ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಜನರ ಅಭಿಪ್ರಾಯದ ಮೂಲಕ ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ ಎಂದಿದ್ದಾರೆ. ರಾಜ್ಯ ಪ್ರವಾಸದ ವೇಳೆ ದಲಿತ ಕೇರಿಗೆ ಮೊದಲ ಭೇಟಿ ನೀಡುತ್ತೇವೆ,  ಇನ್ನುಮುಂದೆ ದಲಿತ ಕೇರಿ ಭೇಟಿ ಬಳಿಕವೇ ಮುಂದಿನ ಕಾರ್ಯಕ್ರಮಕ್ಕೆ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಬಿಎಸ್‌ವೈ ತಿಳಿಸಿದ್ದಾರೆ.
ಭದ್ರಾ ಮೇಲ್ದಂಡೆ ಯೋಜನೆಯ ಕುರಿತು ಮಾತನಾಡಿದ ಅವರು, ಯೋಜನೆ ನಿಧಾನಗತಿಯಲ್ಲಿ ಸಾಗಿದೆ, ಇದಕ್ಕಾಗಿ ಬಿಡುಗಡೆಯಾಗಿರುವ ಹಣ ಇತರೆ ಕಾಮಗಾರಿಗಳಿಗೆ ಬಳಕೆ ಮಾಡಲಾಗಿದೆ.  ಚಿತ್ರದುರ್ಗ ನಗರಾಭಿವೃದ್ಧಿಗೆ ನನ್ನ ಅವಧಿಯಲ್ಲಿ 30ಕೋಟಿ ನೀಡಿದ್ದೆ, ಆದರೆ, ಈಗಿನ ಸರ್ಕಾರದ ಬೇಜವಬ್ದಾರಿಯಿಂದ ಈವರೆಗೆ ಅಭಿವೃದ್ಧಿ ಆಗಿಲ್ಲ ಎಂದರು.

Comments are closed.