ಬಾಲಿವುಡ್ ನ ಅಚ್ಚು ಮೆಚ್ಚಿನ ‘ಅಮ್ಮ’ ರೀಮಾ ಲಾಗೂ ನಿಧನ

ಮುಂಬೈ: ಬಹುಶ: ದಕ್ಷಿಣ ಭಾರತ ಸಿನಿಮಾ ಪ್ರಿಯರಿಗೆ  ರೀಮಾ ಲಾಗೂ ಅಂದ್ರೆ ನೆನಪಿಗೆ ಬರಲಿಕ್ಕೆ ಇಲ್ಲ. ಆದ್ರೆ ಮುಖ ನೋಡಿದ್ಕೂಡ್ಲೇ ಅವ್ರನ್ನ ಗುರುತು ಹಿಡಿಯುವಷ್ಟು ಫೇಮಸ್. ಬಾಲಿವುಡ್ ನ ಸೂಪರ್ ಸ್ಟಾರ್ ಗಳಿಗೆ ಮಧ್ಯ ವಯಸ್ಸಿನ ತಾಯಿಯ ಪಾತ್ರ ನಿರ್ವಹಿಸಿದ್ರು. ಈ ನಟಿ ಇಂದು ಬೆಳಗ್ಗೆ ಹಠಾತ್ತನೇ ವಿಧಿವಶರಾಗಿದ್ದಾರೆ.

ಬಿಟೌನ್ ನ ಎವರ್ ಗ್ರೀನ್ ಸಿನಿಮಾ ಮೈನೇ ಪ್ಯಾರ್ ಕಿಯಾ, ಆಶಿಕಿ, ಹಮ್ ಆಪ್ ಕೆ ಹೈ ಕೌನ್, ಕುಚ್ ಕುಚ್ ಹೋತಾ ಹೈ ನಂತಹ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ಕೆಲಸ ಮಾಡಿದ್ರು. ಶಾರೂಕ್ ಖಾನ್, ಸಲ್ಮಾನ್ ಖಾನ್, ಅಕ್ಷಯ್ ಕುಮಾರ್ ನಟಿಸಿದ ಬಹುತೇಕ ಚಿತ್ರಗಳಲ್ಲಿ ಇವ್ರು ತಾಯಿಯ ರೋಲ್ ಮಾಡಿದ್ರು. ಕೇವಲ ಹಿಂದಿಯಷ್ಟೇ ಅಲ್ಲದೆ, ಮರಾಠಿ ಚಿತ್ರರಂಗದಲ್ಲೂ ಇವ್ರ ಸೇವೆ ದೊಡ್ಡದಿದೆ.

ಇಂದು ಬೆಳಗ್ಗೆ 1 ಗಂಟೆಯ ಹೊತ್ತಿಗೆ ರೀಮಾ ಲಾಗೂ ಅವ್ರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣವೇ ಇವ್ರನ್ನ ಮುಂಬೈನ ಅಂದೇರಿಯಲ್ಲಿರೋ ಕೋಕಿಲಾ ಬೇನ್ ಆಸ್ಪತ್ರೆಗೆ ಕರೆದೊಯ್ಯಲಾಯ್ತು. ವೈದ್ಯರ ಹರಸಾಹಸದ ಬಳಿಕವೂ 59 ವರ್ಷದ ರೀಮಾ ಅವ್ರನ್ನ ಬದುಕಿಸಿಕೊಳ್ಳಲಾಗಲಿಲ್ಲ. ಸರಿಸುಮಾರು ಬೆಳಗ್ಗೆ 3.15ಕ್ಕೆ ಕೊನೆಯುಸಿರೆಳೆದ್ರು. ಇವರ ನಿಧನಕ್ಕೆ ಅಮಿತಾಬ್ ಬಚ್ಚನ್, ಪ್ರಿಯಾಂಕ ಛೋಪ್ರಾ ಮತ್ತಿತರರು ಸಂತಾಪ ಸೂಚಿಸಿದ್ದಾರೆ.

 

3 thoughts on “ಬಾಲಿವುಡ್ ನ ಅಚ್ಚು ಮೆಚ್ಚಿನ ‘ಅಮ್ಮ’ ರೀಮಾ ಲಾಗೂ ನಿಧನ

 • October 20, 2017 at 7:43 PM
  Permalink

  Hi it’s me, I am also visiting this website on a regular basis,
  this web site is really good and the viewers are truly sharing pleasant thoughts.

 • October 20, 2017 at 9:01 PM
  Permalink

  We stumbled over here coming from a different page and thought I may as well check things out. I like what I see so now i’m following you. Look forward to looking at your web page repeatedly.|

 • October 24, 2017 at 2:14 PM
  Permalink

  We’re a group of volunteers and opening a new scheme in our
  community. Your web site offered us with valuable info to
  work on. You’ve done an impressive job and our entire community will be grateful to you.

Comments are closed.