ಈ ತಂತ್ರಜ್ಞಾನದ ಬಗ್ಗೆ ತಿಳಿದು ನೀವು ಬೆರಗಾಗುವುದು ಖಂಡಿತ…!! ಕೈ ಬೆರಳೆ ರಿಸಿವರ್ ..


ಇಂದಿನ ಆಧುನೀಕ ಯುಗದಲ್ಲಿ ಫೋನ್ ಎನ್ನುವುದು ಅತ್ಯವಶ್ಯಕ ವಸ್ತುಗಳಲ್ಲಿ ಒಂದಾಗಿದ್ದು, ಅಲ್ಲದೇ ಇತ್ತೀಚೆಗೆ ಅದು ಸ್ಮಾರ್ಟ್ ಆಗಿದ್ದು, ನಮ್ಮ ಜೀವನದ ಅವಿಭಾಜ್ಯ ಅಂಗವೇ ಆಗಿದೆ. ಅದೇ ಮಾದರಿಯಲ್ಲಿ ಕಾಲ್ ಮಾಡ ಬಳಸುತ್ತಿದ್ದ ಫೋನ್ ಇಂದು ಸ್ಮಾರ್ಟ್ ವಾಚಿನ ತನಕ ಬಂದಿದೆ.

ಈಗ ಅದೇ ಸ್ಮಾರ್ಟ್‌ವಾಚ್ ನಿಮ್ಮ ಕೈ ಬೆರಳನ್ನೆ ಪೋನ್ ಆಗಿ ಬದಲಾಯಿಸಲಿದೆ. ಹೌದು ಹೊಸದೊಂದು ತಂತ್ರಜ್ಞಾನವೊಂದು ಅಭಿವೃದ್ಧಿಯ ಹಂತದಲ್ಲಿದ್ದು, ಇದು ನಿಮ್ಮ ಕೈ ಬರಳನ್ನು ಕಿವಿಯ ಒಳಗೆ ಇಟ್ಟುಕೊಂಡರೆ ಸಾಕು ಅದೇ ಸ್ಪೀಕರ್ ಮಾದರಿಯಲ್ಲಿ ಕಾರ್ಯ ನಿರ್ವಹಿಸಲಿದೆ.

ನಿಮ್ಮ ಕೈ ಬೆರಳು ರಿಸಿವರ್ ಕೆಲಸ ಮಾಡುತ್ತೆ:
ನಿಮ್ಮ ಕೈ ಬೆರಳನ್ನು ರೀಸಿವರ್ ಆಗಿ ಬದಲಾಯಿಸಲಿರುವ ಬಾಡಿ ಕನೆಕ್ಷನ್ ಡಿವೈಸ್ ವೊಂದನ್ನು ಅಭಿವೃದ್ಧಿ ಪಡಿಸಲು ಮುಂದಾಗಿದ್ದು, ಇದು ನಿಮ್ಮ ಫೋನಿನೊಂದಿಗೆ ಕನೆಕ್ಟ್ ಆಗಲಿದ್ದು, ಬ್ಲೂಟೂತ್ ಮೂಲಕ ಕಾರ್ಯನಿರ್ವಹಿಸಲಿದೆ. ಅಲ್ಲದೇ ನಿಮ್ಮ ಬೆರಳಿನ ಮೂಲಕವೇ ಧ್ವನಿಯೂ ಕೇಳುವಂತೆ ಮಾಡಲಿದೆ.

ಎಲ್ಲವೂ ಒಂದು ಸಣ್ಣ ಬಟನ್ ಅಲ್ಲಿ ಅಡಗಿದೆ:
ಸಣ್ಣ ಬಟನ್ ಮಾದರಿಯ ಡಿವೈಸ್ ಅನ್ನು ರಿಸ್ಟ್ ಬ್ಯಾಂಡ್ ಇಲ್ಲವೇ ನಿಮ್ಮ ವಾಚಿಗೆ ಕನೆಕ್ಟ್ ಮಾಡಿಕೊಂಡರೆ ಸಾಕು. ಇದು ನಿಮ್ಮ ಫೋನಿಂದ ಕರೆ ಸ್ವೀಕರಿಸಿ ‘ಬಾಡಿ ಕನೆಕ್ಷನ್ ಡಿವೈಸ್’ ಮಾತನಾಡಲು ಅವಕಾಶ ಮಾಡಿಕೊಡಲಿದೆ.

ಬೆರಳೊಂದೆ ಸಾಕು:
ಪೋನಿನಲ್ಲಿ ಮಾತನಾಡಲು ಇನ್ನು ಮುಂದೆ ಮಾತನಾಡಲು ಬ್ಲೂಟೂತ್ , ಇಯರ್ ಫೋನ್ ಆಗಲಿ ಬೇಕಾಗಿಯೇ ಇಲ್ಲಿ ಕರೆ ಬಂದರೆ ನಿಮ್ಮ ಬೆರಳನ್ನು ಕಿವಿಯಲ್ಲಿ ಇಟ್ಟುಕೊಂಡರೆ ಸಾಕು ಹಾಗೇ ಮಾತನಾಡಿಕೊಂಡು ಓಡಾಡಬಹುದು.

ವಿಡಿಯೋ ನೋಡಿ:
ಸದ್ಯ ಈಗಾಗಲೇ ಪ್ರಯೋಗಿಕವಾಗಿ ಇದನ್ನು ಪರೀಕ್ಷಿಸಲಾಗಿದ್ದು, ನೀವೆ ವಿಡಿಯೋ ನೋಡಿ ಹೇಗೆ ಕಾರ್ಯನಿರ್ವಹಿಸಲಿದೆ ಎನ್ನವುದನ್ನು.

Comments are closed.

Social Media Auto Publish Powered By : XYZScripts.com