ಪ್ರಕೃತಿಯ ಅಂದ ಹೆಚ್ಚಿಸುವ, ಎದೆಯನ್ನು ನಡುಗಿಸುವ ಸಿಡಿಲು ಏಕೆ ಬೀಳುತ್ತವೆ…?

ಪ್ರಕೃತಿಯ ಅಂದ ಹೆಚ್ಚಿಸಲು ಗುಡುಗು, ಸಿಡಿಲು, ಮಿಂಚುಗಳು ಬೇಕು. ಆದರೆ ಇವುಗಳ ವೈಪರೀತ್ಯದಿಂದ ಜನಜೀವನ ಅಸ್ತವ್ಯಸ್ತವಾಗುವುದಲ್ಲದೇ, ಪ್ರಾಣಿ ಹಾನಿಗಳೂ ಸಾಕಷ್ಟು ಆಗುತ್ತಲಿವೆ. ಸಿಡಿಲಿನಿಂದಾಗಿ ಸಾಕಷ್ಟು ಮನೆಗಳು, ಗಿಡಗಳು, ಜನರು ಸಾವನ್ನಪ್ಪಿದ್ದಾರೆ. ಹಾಗಿದ್ದರೆ ಸಿಡಿಲು ಏಕೆ ಬೀಳುತ್ತವೆ?

 

ಭೂಮಿಗೆ ಅಪ್ಪಳಿಸುವ ಸಿಡಿಲು  ಅಗಾಧ ಶಕ್ತಿ ಮತ್ತು ಸಾಮರ್ಥ್ಯ ಹೊಂದಿರುತ್ತದೆ. ಬೇಸಗೆಯ ಬಿಸಿ ಗಾಳಿ ಮತ್ತು ವಾತಾವರಣದಲ್ಲಿನ ತೇವಾಂಶ ಭೂಮಿಯ ಮೇಲ್ಭಾಗದ ತಂಪು ಜಾಗದಲ್ಲಿ ಸಂಧಿಸುತ್ತವೆ. ಇದರಿಂದ ಮೋಡಗಳು ಉಂಟಾಗುತ್ತವೆ. ಹೀಗೆ ಉಂಟಾಗುವ ಮೋಡಗಳು ಗಾಳಿಯೊಂದಿಗೆ ವೇಗವಾಗಿ ಚಲಿಸುತ್ತವೆ. ಪರಸ್ಪರ ಡಿಕ್ಕಿ ಹೊಡೆದಾಗ ಭಾರಿ ಪ್ರಮಾಣದ ವಿದ್ಯುತ್‍ ಕಣಗಳು ಉತ್ಪತ್ತಿ ಆಗುತ್ತವೆ. ಧನಾತ್ಮಕ ಮತ್ತು ಋಣಾತ್ಮಕ ವಿದ್ಯುತ್‍ ಕಣಗಳಿಂದ ವಿದ್ಯುತ್‍ಶಕ್ತಿ ಉತ್ಪತ್ತಿಯಾಗುತ್ತದೆ. ಈ ವಿದ್ಯುತ್‍ಶಕ್ತಿ ವಾತಾವರಣಕ್ಕಿಂತ ಹೆಚ್ಚು ಪ್ರಬಲವಾಗಿದ್ದು, ಗಾಳಿಯಲ್ಲಿನ ಕಣಗಳು ಅಯಾನ್‍ ಕಣಗಳಾಗಿ ಬದಲಾಗುತ್ತವೆ. ಆಗ ಧನಾತ್ಮಕ ವಿದ್ಯುತ್‍ ಸಿಡಿಲಾಗಿ ಪರಿವರ್ತನೆ ಹೊಂದಿ ವಾತಾವರಣವನ್ನು ಭೇದಿಸಿ ಭೂಮಿಗೆ ಅಪ್ಪಳಿಸುತ್ತದೆ.

ಪ್ರಖರ ಸೂರ್ಯನಿಗಿಂತಲೂ ಹೆಚ್ಚು ಸಾಮರ್ಥ್ಯವನ್ನು ಸಿಡಿಲು ಹೊಂದಿರುತ್ತದೆ. ಸಿಡಿಲು ಬೀಳುವಾಗ ವಾತಾವರಣ ಬೆಂಕಿಯುಂಡೆಯಂತಾಗುತ್ತದೆ. ಭೂಮಿಗೆ ಅಪ್ಪಳಿಸುವ ಸಿಡಿಲು 500 ಕೋಟಿ ಔಲ್ಸ್ ವಿದ್ಯುತ್ ಉತ್ಪತ್ತಿ ಮಾಡುತ್ತದೆ. ಇದು 1000ವ್ಯಾಟ್ ವಿದ್ಯುತ್ಗೆ ಸಮವಾಗಿರುತ್ತದೆ.

ಹೀಗೆ ಭೂಮಿಗೆ ಅಪ್ಪಳಿಸುವ ಸಿಡಿಲು ಮಾರಣಾಂತಿಕವಾಗಿದ್ದರೂ ಸಹ ವಾತಾವರಣದ ಚೆಂದಕ್ಕೆ ಕಾರಣವಾಗುತ್ತದೆ. ಪ್ರಕೃತಿಯ ಪುನಃಶ್ಚೇತನವಾಗುತ್ತದೆ. ಎದೆಯನ್ನು ನಡುಗಿಸುವ ಸಿಡಿಲಿನ ಆರ್ಭಟಕ್ಕೆ ಎದೆ ಬಡಿತವೇ ನಿಂತು ಹೋಗುತ್ತದೆ. ಎಲ್ಲಿಂದಲೋ ಗರ್ಜಿಸಿ, ಭೂಮಿಗೆ ಅಪ್ಪಳಿಸುವ ಸಿಡಿಲು ಜೀವಸಂಕುಲ ಮತ್ತು ಪ್ರಕೃತಿಯ ಕೇಂದ್ರದಂತಿದೆ.

Comments are closed.

Social Media Auto Publish Powered By : XYZScripts.com