ಮತ್ತೊಬ್ಬ ಐಎಎಸ್ ಅಧಿಕಾರಿಯ ನಿಗೂಢ ಸಾವು: ಕರ್ನಾಟಕದಲ್ಲಿ ಏನಾಗ್ತಿದೆ ?

ಲಕ್ನೋ: ತರಬೇತಿಗೆಂದು ಹೋಗಿದ್ದ ಕರ್ನಾಟಕ ಕೇಡರ್ ನ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಉತ್ತರಪ್ರದೇಶದ ರಾಜಧಾನಿ ಲಕ್ನೋದ ರಸ್ತೆಯಲ್ಲಿ ಇವರ ಶವ ಮತ್ತೆಯಾಗಿದ್ದು, ಸಾವಿಗೆ ಕಾರಣ ಇನ್ನೂ ತಿಳಿದು ಬಂದಿಲ್ಲ. ಆದ್ರೆ ಲಕ್ನೋ ಪೊಲೀಸರು ಮಾತ್ರ ಇದು ಅನುಮಾನಾಸ್ಪದ ಸಾವು ಅಂತಲೇ ಹೇಳಿದ್ದಾರೆ.

ಬೀದರ್ ಡಿಸಿಯಾಗಿದ್ದ ಅನುರಾಗ್ ತಿವಾರಿ  ಕಳೆದ ಜನವರಿ ತಿಂಗಳಲ್ಲಿ  ಆಹಾರ ಇಲಾಖೆಯ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿದ್ದರು. ಮೂರು ತಿಂಗಳ ಕಾಲ ಈ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಬಳಿಕ ಏಪ್ರಿಲ್ ನಲ್ಲಿ ಇವರನ್ನ ಹೆಚ್ಚಿನ ತರಬೇತಿಗಾಗಿ ಸರ್ಕಾರವೇ ಉತ್ತರ ಪ್ರದೇಶಕ್ಕೆ ಕಳುಹಿಸಿಕೊಟ್ಟಿತ್ತು. ಇವರೊಂದಿಗೆ ಕರ್ನಾಟಕದ ಬೇರೆ ಬೇರೆ ಇಲಾಖೆಯಿಂದ  ಇನ್ನೂ ಆರು ಮಂದಿ ಐಎಎಸ್ ಅಧಿಕಾರಿ ತೆರಳಿದ್ರು. ಇಪ್ಪತ್ತೈದು ದಿನಗಳ ಕಾಲ ತರಬೇತಿ ಪಡೆದ ಬಳಿಕ ಮೇ 08ರಿಂದ ಜೂನ್ 03ನೇ ತಾರೀಕಿನವರೆಗೆ ರಜೆ ಕೊಡುವಂತೆ ಮನವಿ ಮಾಡಿದ್ರು ಎನ್ನಲಾಗಿದೆ.

ಆದ್ರೆ ಡಿಪಿಆರ್ ರಜೆಯನ್ನ ಮಂಜೂರು ಮಾಡದ ಹಿನ್ನೆಲೆಯಲ್ಲಿ ಮತ್ತೆ ಸೇವೆಗೆ ಹಾಜರಾಗುವುದರಲ್ಲಿದರು. ಅಷ್ಟರೊಳಗೆ ಅವರು ನಿಗೂಢವಾಗಿ ಸಾವನ್ನಪ್ಪಿದ್ದು ಅನುಮಾನ ಹೆಚ್ಚುವಂತೆ ಮಾಡಿದೆ. 2007ನೇ ಬ್ಯಾಚ್ ನ ಐಎಎಸ್ ಆಧಿಕಾರಿಯಾಗಿದ್ದ ಅನುರಾಗ್ ತಿವಾರಿ ಯುಪಿ ಹಜ್ರತ್ ಗಂಜ್ ನ ಮೀರಾಬಾಯಿ ಗೆಸ್ಟ್ ಹೌಸ್ ನಲ್ಲಿ ತಂಗಿದ್ದರು. ಇವ್ರೊಂದಿಗೆ ಅವ್ರ ಬ್ಯಾಚ್ ಮೇಟ್ ಪ್ರಭು ನರೇನ್ ಸಿಂಗ್ ಕೂಡ ನೆಲೆಸಿದ್ರು. ಪ್ರಭು ಬೆಳಗ್ಗೆ ಎದ್ದು ಬ್ಯಾಡ್ಮಿಂಟನ್ ಆಡಲು ಹೋದಾಗ ಹಾಸಿಗೆಯ ಮೇಲೆ ತಿವಾರಿ ಇರಲಿಲ್ಲ. ಹೀಗಾಗಿ ರೂಂ ಕೀಯನ್ನ ರೆಸೆಪ್ಷನ್ ನಲ್ಲಿ ಕೊಟ್ಟು ಹೋಗಿದ್ದಾರೆ ಹೇಳಿದ್ದಾರೆ. ಇವರ ಹೇಳಿಕೆಯನ್ನ ಪಡೆದು ಬಾಡಿಯನ್ನ ಪೋಸ್ಟ್ ಮಾರ್ಟಮ್ ಗೆ ಕಳುಹಿಸಲಾಗಿದ್ದು, ರಾಜ್ಯ ಸರ್ಕಾರ ತಮ್ಮ ಅಧಿಕಾರಿಗಳನ್ನ ಕಳುಹಿಸಿಕೊಡಲಿದೆ.

ನಮ್ಮ ಇಲಾಖೆಯಲ್ಲಿ ನಿಷ್ಟಾವಂತ ಅಧಿಕಾರಿಯಾಗಿದ್ರು. ಅಲ್ಲಿಂದ ಬಂದ ವರದಿಯ ಪ್ರಕಾರ ಹೃದಯಾಘಾತದಿಂದ ಮೃತಪಟ್ಟಿರಬಹುದು ಅನ್ನೋ ಅನುಮಾನ ವ್ಯಕ್ತಪಡಿಸಿದ್ದಾರೆ. ಆದ್ರೆ  ಮರಣೋತ್ತರ ವರದಿ ಬಂದ ಬಳಿಕವಷ್ಟೇ ಹೆಚ್ಚಿನ ವಿಷಯ ತಿಳಿಯಲಿದೆ. ಹೀಗಾಗಿ ಇಲ್ಲಿಂದ ನಮ್ಮ ಇಲಾಖೆಯಿಂದ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಅಧಿಕಾರಗಳನ್ನ ಕಳುಹಿಸಿಕೊಡಲಾಗುತ್ತೆ ಎಂದು ಆಹಾರ ಮತ್ತು ನಾಗರೀಕ ಸರಬರಾಜು ಮಂತ್ರಿ ಯು ಟಿ ಖಾದರ್ ಹೇಳಿದ್ದಾರೆ.

ಅನುರಾಗ್ ತಿವಾರಿ ಬದುಕಿದ್ದರೆ ಇಂದು 37ನೇ ಹುಟ್ಟುಹಬ್ಬವನ್ನ ಆಚರಿಸಿಕೊಳ್ಳುತ್ತಿದ್ರು. ಅಷ್ಟರೊಳಗೆ ಈ ಘಟನೆ ನಡೆದು ಹೋಗಿದೆ. ಇದ್ರೊಂದಿಗೆ ಯುಪಿ ಪೊಲೀಸ್ ಅಧಿಕಾರಿಗಳು ಕೂಡ ಸಂಶಯ ವ್ಯಕ್ತಪಡಿಸಿರೋದು ನೋಡಿದ್ರೆ, ಮತ್ತೊಬ್ಬ ಐಎಎಸ್ ಅಧಿಕಾರಿ ಬಲಿ ಆಯ್ತಾ ಅನ್ನೋ ಅನುಮಾನ ಮೂಡುತ್ತೆ.

 

Comments are closed.

Social Media Auto Publish Powered By : XYZScripts.com