ಬಾಹುಬಲಿಯ ಶಿವುಡು ದೇವಸೇನ ಅನುಷ್ಕಾ ಶೆಟ್ಟಿ ಯನ್ನು ಮದ್ವೆಯಾಗ್ತಾರಂತೆ…?

ಬಾಹುಬಲಿ ಪ್ರಭಾಸ್ ಮತ್ತು ದೇವಸೇನ ಅನುಷ್ಕಾ ಶೆಟ್ಟಿ ಪ್ರೀತಿಲಿ ಮುಳುಗಿದ್ದಾರೆ. ಶೀಘ್ರದಲ್ಲೇ ಮದ್ವೆಯಾಗ್ತಾರಂತೆ ಅನ್ನೋ ಸುದ್ದಿ ಕಳೆದ ಕೆಲದಿನಗಳಿಂದ ಜೋರಾಗಿ ಕೇಳಿಬರ್ತಿದೆ. ಬಾಹುಬಲಿ ಸಿನಿಮಾ ಸೆಟ್‍ನಲ್ಲಿ ಇಬ್ರು ಬಹಳ ಸಮಯ ಕಳೆದಿದ್ದರಿಂದ ಒಬ್ಬರನ್ನೋಬ್ಬರು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಬಿಲ್ಲಾ, ಮಿರ್ಚಿ ಮತ್ತು ಬಾಹುಬಲಿ ಸಿನಿಮಾಗಳಲ್ಲಿ ಇವ್ರಿಬ್ಬರು ಜೊತೆಯಾಗಿ ಕೆಲಸ ಮಾಡಿದ್ದಾರೆ. ಅಭಿಮಾನಿಗಳು ಕೂಡ ಇವರಿಬ್ಬರು ಮದ್ವೆಯಾದ್ರೆ ಚೆನ್ನಾಗಿರುತ್ತೆ ಅಂತ ಆಸೆ ಪಡ್ತಿದ್ದಾರೆ. ಸದ್ಯ ಇವ್ರ ನಡುವಿನ ಆಕರ್ಷಣೆಯನ್ನ ಫೋಕಸ್ ಮಾಡಿ ವೀಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ಲಾಗಿದೆ.

ಪ್ರಭಾಸ್ ವಯಸ್ಸು 40ರ ಸಮೀಪದಲ್ಲಿದ್ರೆ, ಅನುಷ್ಕಾ 35ರ ಹೊಸ್ತಿಲಲ್ಲಿದ್ದಾರೆ. ಹೀಗಿದ್ರೂ ಇಬ್ರೂ ಮದ್ವೆ ಅಂದ್ರೆ ಮಾರು ದೂರ ಓಡುತ್ತಿದ್ದಾರೆ. ಇಬ್ಬರು ಪರಸ್ಪರ ಒಬ್ಬರನ್ನೋಬ್ಬರು ಇಷ್ಟಪಡ್ತಿದ್ದಾರೆ. ಅದೇ ಕಾರಣಕ್ಕೆ ಇಬ್ರೂ ಯಾವುದೇ ಟೆನ್ಷನ್ ಇಲ್ಲದೆ ಖುಷಿಯಾಗಿದ್ದಾರೆ. ಶೀಘ್ರದಲ್ಲೇ ಅಭಿಮಾನಿಗಳಿಗೆ ಸಿಹಿಸುದ್ದಿ ಕೊಡ್ತಾರೆ ಅಂತೆಲ್ಲಾ ಪ್ರಚಾರ ನಡೀತಿದೆ. ಬಾಹುಬಲಿ ಶೂಟಿಂಗ್ ಸಮಯದಲ್ಲಿ ಪ್ರಭಾಸ್ ಫ್ಯಾಮಿಲಿಗೂ ಸ್ವೀಟಿ ಹತ್ತಿರವಾಗಿದ್ದಾಳಂತೆ. ರಾಜಮೌಳಿ ಸಹ ಅನುಷ್ಕಾ ಒಳ್ಳೆ ಹುಡ್ಗಿ ಅಂತ ರೆಕಮಂಡ್ ಮಾಡಿದ್ರಿಂದ ಲೈನ್ ಕಂಪ್ಲೀಟಾಗಿ ಕ್ಲಿಯರ್ ಆಗಿದೆ ಅನ್ನೋ ಗುಸುಗುಸು ಕೇಳಿ ಬರ್ತಿದೆ.

ಬಹಳ ದಿನಗಳಿಂದ ಇಬ್ಬರ ನಡುವೆ ಪ್ರೇಮ ವ್ಯವಹಾರ ನಡೀತಿದ್ರೂ, ಅದು ರಹಸ್ಯವಾಗೇ ಇತ್ತು. ಯಾಕಂದ್ರೆ ಇಬ್ರೂ ಸಾಕಷ್ಟು ಸಮಯವನ್ನ ಬಾಹುಬಲಿ ಸೆಟ್ಟಿನಲ್ಲೇ ಕಳೀತಿದ್ರು. ಇದೀಗ ಬಾಹುಬಲಿ ಸಿನಿಮಾ ರಿಲೀಸ್ ಆಗಿ ಅದ್ಭುತ ಪ್ರದರ್ಶನ ಕಾಣ್ತಿದೆ. ಸಿನಿಮಾ ಪ್ರಮೋಷನ್ ಸಮಯದಲ್ಲಿ ಪ್ರಭಾಸ್, ಅನುಷ್ಕಾ ಶೆಟ್ಟಿ ಜೋಡಿಯನ್ನ ನೋಡಿದವರಿಗೆ ಇಬ್ಬರ ನಡುವೆ ಸಂಥಿಂಗ್ ಸಂಥಿಂಗ್ ನಡೀತಿದೆ ಅನ್ನೋ ಅನುಮಾನ ಮೂಡಿದೆ. ಅದಕ್ಕೆ ಈ ಸ್ಟಿಲ್ಸ್ ಮತ್ತು ವೀಡಿಯೋಸ್ ಬೆಸ್ಟ್ ಎಕ್ಸಾಂಪಲ್ ಅಂತಿದ್ದಾರೆ. ಇಷ್ಟೆಲ್ಲಾ ಸುದ್ದಿಯಾದ್ರೂ, ಇದ್ರ ಬಗ್ಗೆ ಯಾರೋಬ್ರು ಮಾತನಾಡ್ತಿಲ್ಲ ಅಂದ್ರೆ ಅದೇ ನಿಜ ಇರಬಹುದು ಅನ್ನೋದು ಇದ್ದಾರೆ.

Comments are closed.

Social Media Auto Publish Powered By : XYZScripts.com