ಆಹಾರ ವೇಸ್ಟ್ ಮಾಡಿದರೇ ಕೇಸ್ ಬೀಳುತ್ತೆ ಹುಶಾರ್ : ಆಹಾರ ಇಲಾಖೆ …

ಬೆಂಗಳೂರಿನಲ್ಲಿ ಅದ್ದೂರಿ ಮದ್ವೆಗಳದ್ದೆ ಕಾರುಭಾರು. ಜನರು ಸ್ವರ್ಗವನ್ನೆ ಧರೆಗಿಳಿಸಿದಷ್ಟು ಆಡಂಬರದಲ್ಲಿ ಮದುವೆ ಮಾಡುತ್ತಾರೆ. ಇಂಥ‌ ಮದುವೆಗಳಲ್ಲಿ ಊಟವೂ ಅದ್ದೂರಿಯೇ. ಆದರೇ ಈ ಸಿದ್ಧವಾದ ಭಕ್ಷ್ಯಗಳಲ್ಲಿ ಬಹುಪಾಲು ಮಿಕ್ಕಿ ಕಸದ ತೊಟ್ಟಿ ಸೇರುತ್ತದೆ. ಆದರೇ ಇದೀಗ ಈ ಪದ್ಧತಿಗೆ ಕಡಿವಾಣ ಬೀಳಲಿದೆ‌.
ಈ ರೀತಿ  ಆಹಾರ ವೆಚ್ಚದ ಪ್ರವೃತ್ತಿಗೆ ಕಡಿವಾಣ ಹಾಕಲು ಆಹಾರ ಇಲಾಖೆ ಚಿಂತನೆ ನಡೆಸಿದೆ. ಹೀಗಾಗಿ ಇನ್ನು ಮುಂದೇ ಶುಭ ಸಮಾರಂಭ ಆಯೋಜಕರೇ  ಸಮಾರಂಭದಲ್ಲಿ ಮಿಕ್ಕಿದ ಆಹಾರದ ನಿರ್ವಹಣಾ ವೆಚ್ಚವನ್ನು ಭರಿಸಬೇಕು ಎಂದು ಸೂಚಿಸಿದೆ.
ಇದಲ್ಲದೇ ಮದುವೆ,ಮುಂಜಿ, ಹುಟ್ಟುಹಬ್ಬದಂತಹ ಶುಭಕಾರ್ಯ ಆಯೋಜಿಸುವ ಕಲ್ಯಾಣ ಮಂಟಪ ಗಳು ಉಳಿದ ಆಹಾರ ಪದಾರ್ಥ ಸಂಗ್ರಹಿಸಿಡಲು  ರೆಫ್ರಿಜರೇಟರ್ ಹೊಂದುವುದು ಕಡ್ಡಾಯ. ಸಮೀಕ್ಷೆಯೊಂದರ ಪ್ರಕಾರ ನಗರದಲ್ಲಿ ಆಯೋಜಿತವಾಗುವ ಶುಭಸಮಾರಂಭಗಳಲ್ಲಿ ಶೇಕಡಾ 25 ರಷ್ಟು ಆಹಾರ ಪದಾರ್ಥಗಳು ಮಿಕ್ಕಿ ತಿಪ್ಪೆ  ಸೇರುತ್ತಿದೆ. ಈ ನಿಟ್ಟಿನಲ್ಲಿ ಆಹಾರ ಇಲಾಖೆ ಈ ಯೋಜನೆ ರೂಪಿಸಿದ್ದು, ಮೊದಲ ಹಂತವಾಗಿ  ಬೆಂಗಳೂರಿನಲ್ಲಿ ಈ ಯೋಜನೆ ಜಾರಿಗೆ ಬರಲಿದೆ.
ಈ ಕಾನೂನಿನ ಪ್ರಕಾರ ನಗರದ  ಕಲ್ಯಾಣಮಂಟಪಗಳು 100 ರಿಂದ 1 ಸಾವಿರ ಜನರಿಗೆ ಅಗತ್ಯವಿರುವಷ್ಟು ಆಹಾರ ಸಂಗ್ರಹಿಸುವ ರೇಫ್ರಿಜರೇಟರ್​ ಇಟ್ಟು ಕೊಳ್ಳಬೇಕು. ಬಳಿಕ ಈ ಆಹಾರವನ್ನು  ತಮ್ಮ ವ್ಯಾಪ್ತಿಯಲ್ಲಿರುವ ಎನ್​ಜಿಓ ಅಥವಾ ಕೊಳಚೆಮಂಡಳಿ,ಭಿಕ್ಷುಕರ ಕಾಲೋನಿ,ಅನಾಥಾಶ್ರಮಗಳಿಗೆ ವಿತರಿಸಬೇಕು.
ಮಿಕ್ಕಿದ  ಆಹಾರವನ್ನು ಕೊಳಚೆಮಂಡಳಿ,ಭಿಕ್ಷುಕರ ಕಾಲೋನಿ,ಎನ್​ಜಿಓಗಳಿಗೆ ವಿತರಿಸುವ ವಾಹನಗಳ ವೆಚ್ಚವನ್ನು ಕೂಡಾ ಕಲ್ಯಾಣಮಂಟಪಗಳ ಮಾಲಿಕರೇ ಭರಿಸಬೇಕು. ಮಾಲೀಕರು ಈ ವೆಚ್ಚವನ್ನು ಕಾರ್ಯಕ್ರಮ ಆಯೋಜಕರಿಂದಲೂ ಕೂಡಾ ಸಂಗ್ರಹಿಸಬಹುದು. ಒಂದೊಮ್ಮೆ ಈ ನಿಯಮ ಉಲ್ಲಂಘಿಸಿದಲ್ಲಿ  2 ಲಕ್ಷ ರೂಪಾಯಿವರೆಗೆ ದಂಡ ವಿಧಿಸಲು ಆಹಾರ ಇಲಾಖೆ ಚಿಂತನೆ ನಡೆಸಿದೆ. ಒಟ್ಟಿನಲ್ಲಿ ಜನರು ಆಡಂಬರಕ್ಕೆ ಬ್ರೇಕ್ ಹಾಕಲು ಆಹಾರ ಇಲಾಖೆ ಯೋಜನೆ ಸಿದ್ದಪಡಿಸಿದ್ದು ಜನರು ಹೇಗೆ ಸ್ಪಂದಿಸುತ್ತಾರೆ ಕಾದು ನೋಡಬೇಕಿದೆ.

One thought on “ಆಹಾರ ವೇಸ್ಟ್ ಮಾಡಿದರೇ ಕೇಸ್ ಬೀಳುತ್ತೆ ಹುಶಾರ್ : ಆಹಾರ ಇಲಾಖೆ …

  • October 21, 2017 at 4:26 AM
    Permalink

    Periet Medication Sold In Canada Levitra Zum Testen viagra Mrsa Cephalexin Online Dutasteride 0.5mg Secure

Comments are closed.