ವಿಶ್ವವನ್ನೇ ಕಾಡುತ್ತಿರವ ವೈರಸ್ ಯಾವುದು, ಏನಿದರ ಮರ್ಮ : ಇಲ್ಲಿದೆ full details…..

ಬ್ರಿಟನ್ ಸೇರಿದಂತೆ ಕೆಲವು ಐರೋಪ್ಯ ದೇಶಗಳ ಬಹುತೇಕ ಆಸ್ಪತ್ರೆಗಳು ಕಳೆದ ಕೆಲವು ದಿನಗಳಿಂದ ಅಕ್ಷರಶಃ ರೋಗಗ್ರಸ್ತವಾಗಿವೆ. ಇದಕ್ಕೆ ಕಾರಣ ಒಂದು ವೈರಸ್. ಇದಕ್ಕೆ ಭಾರತ ಕೂಡಾ ಹೊರತಾಗಿಲ್ಲ.  ಸೈಬರ್ ದಾಳಿ ನಡೆದಿರುವ ಹಿನ್ನಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಎಟಿಎಂಗಳ ಸಾಫ್ಟ್ ವೇರ್ ಅಪ್ ಡೇಟ್ ಮಾಡುವಂತೆ ಎಲ್ಲ ಬ್ಯಾಂಕ್ ಗಳಿಗೆ ಸೂಚನೆ ನೀಡಿದೆ. ಎಟಿಎಂ ಗಳ ಸಿಸ್ಟಂ ಅಪ್ ಡೇಟ್ ಆಗುವವರೆಗೂ ಎಟಿಎಂಗಳಿಗೆ ಹಣ ತುಂಬದಂತೆಯೂ ಸೂಚಿಸಿರುವುದರಿಂದ ಎಟಿಎಂಗಳಲ್ಲಿ ಮತ್ತೆ ಹಣಸಿಗದೇ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಅಂಥಾ ದೇಶಗಳಳಿಗೆ ಒಂದು ಚಿಕ್ಕ ವೈರಸ್ ನ್ನು ಹತ್ತಿಕ್ಕುವುದು ಕಷ್ಟವಾ ಎನ್ನುವ ಆಲೋಚನೆ ಬರಬಹುದು. ಆದ್ರೆ ಇದು ಮನುಷ್ಯ ಅಥವಾ ಪ್ರಾಣಿಗೆ ಖಾಯಿಲೆ ತರಿಸುವ ವೈರಸ್ ಅಲ್ಲ. ಬದಲಿಗೆ ಕಂಪ್ಯೂಟರ್ ಸಿಸ್ಟಮ್ ಗೆ ಯಾರೋ ದುಷ್ಕರ್ಮಿಗಳು ಹರಿಬಿಟ್ಟಿರುವ ವೈರಸ್.

ಈ ವ್ಯರಸ್  12 may 2017 ರಂದು ವಿಂಡೋಸ್ ಆಪರೇಟಿಂಗ್ ಸಿಸ್ಟಮ್ ಅನ್ನು ಟಾರ್ಗೆಟ್ ಮಾಡಿದೆ. ಇದು ಇಗಾಗಲೆ  ಸುಮಾರು 150 ದೇಶದ 230000 ಕಂಪ್ಯೂಟರ್ ಹ್ಯಾಕ್ ಮಾಡಿದೆ. ಇದರ ಮುಖ್ಯ ಉದ್ದೇಶ cryptocurrency bitcoin ಇಂದ ಬಹುಮೊತ್ತ ದ ಹಣ. ಯಾವ ಕಂಪ್ಯೂಟರ್ ಸೆಕ್ಯುರಿಟಿ ಪ್ಯಾಚ್ ಆಗಿರುವುದಿಲ್ಲವೋ ಅದನ್ನೇ ಲಾಭವಾಗಿತ್ತುಕೊಂಡು ಈ ಕೆಲಸಕ್ಕೆ ಕೈ ಹಾಕಿದೆ ದುಷ್ಕರ್ಮಿಗಳು ತಂಡ.

ಸ್ಪೈನ್ ನ ಹಲವು ಸಾಫ್ಟ್ವೇರ್ ಕಂಪನಿಗಳು, ಬ್ರಿಟನ್ನಿನ national health service(NHS), FedEx, LATAM Airlines ಸೇರಿ 99 ದೇಶಗಳನ್ನು ಟಾರ್ಗೆಟ್ ಮಾಡಿದೆ ಈ ತಂಡ. ಇದರಲ್ಲಿ ಭಾರತದಲ್ಲಿ ಆಂದ್ರದ ಪೋಲೀಸ್  ಇಲಾಖೆಯೂ ಸೇರಿದೆ.

ಇಷ್ಟು ಸುಲಭವಾಗಿ  ಹ್ಯಾಕರ್ಸ್ ಹ್ಯಾಕ್ ಮಾಡಲು ಸಾಧ್ಯವಾಗಿದ್ದು  ಮೈಕ್ರೋಸಾಫ್ಟ್ ಕಂಪನಿ XP windows    ವರ್ಷನ್ ಆಪರೇಟಿಂಗ್ ಸಿಸ್ಟಮ್ ಗೆ ಅಪ್ಡೇಟ್ ಮಾಡದೆ ಇದ್ದದ್ದು.  ಮೈಕ್ರೋಸಾಫ್ಟ್ ಕಂಪನಿಯು Windows vista ಹಾಗೂ ಅದರ ಮುಂದಿನ ವರ್ಷನ್ ಆಪರೇಟಿಂಗ್ ಸಿಸ್ಟಮ್ ಗೆ ಅಪ್ಡೇಟ್ ಬಿಟ್ಟಿದ್ದು ಅದೇ ರೀತಿ windows XP ಗೆ ಅಪ್ಡೇಟ್ ಬಿಟ್ಟಿದ್ದರೆ  ಹ್ಯಾಕಾರ್ಸ್ ಇಷ್ಟು ಸುಲಭವಾಗಿ ಇದನ್ನು ಸದುಪಯೋಗ ಪಡೆದುಕೊಳ್ಳಲಾಗುತ್ತಿರಲಿಲ್ಲ.

ಮೈಕ್ರೋಸಾಫ್ಟ್ ಕಂಪನಿಯು critical update patch ಅನ್ನು ಒಂದು ತಿಂಗಳ ಹಿಂದೆಯೇ ಬಿಟ್ಟಿದ್ದರು ಹಲವು ಕಂಪನಿಗಳು ಬರಿ windows vista ಹಾಗೂ windows 8.1ಅನ್ನು ಮಾತ್ರ ಅಪ್ಡೇಟ್ ಮಾಡಿದ್ದಾರೆ. ಇದರಿಂದ ಎಚ್ಚೆತ್ತುಕೊಂಡ ಮೈಕ್ರೋಸಾಫ್ಟ್ ಪುನಃ 14 ಮೇ ಅಂದು windows XP ಕೂಡ ಅಪ್ಡೇಟ್ ಮಾಡಲು ವಿನಂತಿ ಮಾಡಿಕೊಂಡಿದೆ.

Wannacry ವ್ಯರಸ್ ಇಂಗ್ಲೆಂಡ್ ನ ಹಲವು NHS ಮತ್ತು ಸ್ಕ್ಯಾಟ್ಲೆಂಡ್ ನ 70000ಕ್ಕೂ ಅಧಿಕ ಕಂಪ್ಯೂಟರ್, MRI scanner, blood storage refrigerator, operation theatre equipment ಅನ್ನು 12 ಮೇ ಅಂದು ಅಟ್ಯಾಕ್ ಮಾಡಲಾಗಿದೆ. ಇದರಿಂದಾಗಿ NHS ನ ಎಲ್ಲಾ ಕಂಪ್ಯೂಟರ್ ಸ್ಥಗಿತವಾಗಿದ್ದು, ಹಲವು ಅಂಬುಲನ್ಸ್ ದಾರಿ ತಪ್ಪಿ ಬೇರೆಡೆ ತಲುಪ್ಪಿದ್ದು ದೊಡ್ಡ ತಲೆನೋವಾಗಿದೆ.

ಈ  ಭಾರಿ ಹಾಸ್ಪಿಟಲ್ ಅಲ್ಲದೆ ಬ್ರಿಟನ್ನಿನ ಪೊಲೀಸ್ ಇಲಾಖೆ ಅನ್ನು ಅಟ್ಯಾಕ್ ಮಾಡಿದ wannacry ಹಲವು ಸಾಕ್ಷ್ಯಗಳನ್ನು ನಾಶಪಡಿಸಿರುವುದಾಗಿ ವರದಿಯಾಗಿದೆ. ಹಾಗೆಯೇ ಇದರೊಂದಿಗೆ Nissan Motor Manufacturing (UK) ಕಂಪನಿಯ ಕಂಪ್ಯೂಟರ್ ಹ್ಯಾಕ್ ಆಗಿದ್ದು ಕಾರು ಘಟಕ ಕೂಡ ಸಂಪೂರ್ಣವಾಗಿ ಸ್ತಬ್ಧವಾಗಿದೆ.

ಹಾಗಾಗಿ ಯಾವಾಗಲೂ ಸಾಫ್ಟ್ವೇರ್ ಅಪ್ಡೇಟ್ ಮಾಡುವುದು ಒಳ್ಳೆಯದು ಹಾಗೂ ಸುರಕ್ಷಿತ ಎಂಬುದನ್ನು ಯಾವತ್ತಿಗೂ ಮರೆಯಬಾರದು. ಈ ಹಿಂದೆಯೇ ನಾವು ಸಾಫ್ಟ್ವೇರ್ ಅಪ್ಡೇಟ್ ಮಾಡುವುದರ ಲಾಭದ ಬಗ್ಗೆ ನಿಮಗೆ ತಿಳಿಸಿದ್ದೇವೆ. ಇನ್ನಾದರೂ ಎಚ್ಚೆತ್ತುಕೊಂಡರೆ ನಮಗೆ ಒಳಿತು.

 

Comments are closed.

Social Media Auto Publish Powered By : XYZScripts.com