ಯಡಿಯೂರಪ್ಪ ನಮ್ಮ ಲೀಡರ್ : ಸಣ್ಣ ಪುಟ್ಟ ಗೊಂದಲಗಳಿವೆ ಅಷ್ಟೇ -ಕೆಎಸ್ ಈಶ್ವರಪ್ಪ…

ಬಾಗಲಕೋಟೆ  : ಬಿಎಸ್ ಯಡಿಯೂರಪ್ಪ ನಮ್ಮ ಲೀಡರ್. ನಮ್ಮ ಮಧ್ಯೆ ಸಣ್ಣಪುಟ್ಟ ಸಮಸ್ಯೆಗಳಿವೆ. ಅವು ಶೀಘ್ರವೇ ಬಗೆಹರಿಯಲಿದೆ ಎಂದು ಪರಿಷತ್ ವಿಪಕ್ಷ ನಾಯಕ ಕೆ.ಎಸ್ ಈಶ್ವರಪ್ಪ ತಿಳಿಸಿದರು. ಬಾಗಲಕೋಟೆಯಲ್ಲಿ ಇಂದು ಮಾತನಾಡಿದ ಕೆಎಸ್ ಈಶ್ವರಪ್ಪ, ನಮ್ಮ ನಡುವಿನ ಗೊಂದಲ ಚುನಾವಣೆಗೂ ಮುನ್ನ ಬಗೆಹರಿಯಬಹುದು. ಅಥವಾ ಚುನಾವಣೆಗೂ ಮುಂದುವರೆಯಬಹುದು.

ನಾವು ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆಯನ್ನ ಎದುರಿಸುತ್ತೇವೆ. ಬಿಎಸ್ ಯಡಿಯೂರಪ್ಪ ಅವರೇ ಮುಂದಿನ ಮುಖ್ಯಮಂತ್ರಿ ಎಂದು ಸ್ಪಷ್ಟನೆ ನೀಡಿದರು. ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಬ್ರಿಗೇಡ್ ಯಾವುದೇ ಕಾರಣಕ್ಕೂ ನಿಲ್ಲಲ್ಲ. ದಲಿತರ ಹಿಂದುಳಿದವರ ಅಭಿವೃದ್ದಿಗೆ ಮುಂದುವರೆಯುತ್ತದೆ ಎಂದು ತಿಳಿಸಿದರು.

Comments are closed.

Social Media Auto Publish Powered By : XYZScripts.com