ಇನ್ಮುಂದೆ ಬಿಎಂಟಿಸಿಯಲ್ಲೂ ಲಭ್ಯವಾಗಲಿದೆ ವೈಫೈ ಸೌಲಭ್ಯ,,,

 ಐಟಿ ಹಬ್ ಅಂತಾನೇ ಕರೆಸಿಕೊಳ್ಳೋ ಬೆಂಗಳೂರಿನಲ್ಲಿ ಎಲ್ಲವ್ಯಾಪಾರ-ವ್ಯೆವಹಾರಗಳ ಪ್ರಮುಖ ಆಕರ್ಷಣೆ ಐಟಿ ಉದ್ಯೋಗಿಗಳು.ಇದಕ್ಕೆ ಬಿಎಂಟಿಸಿ ಕೂಡಾ ಹೊರತಲ್ಲ. ಹೀಗಾಗಿ ಎಸಿ ಕ್ಯಾಬ್​,ಓಲಾ,ಉಬರ್​ಗಳಂತ ಖಾಸಗಿ ಸಾರಿಗೆ ಮೊರೆ ಹೋಗಿರುವ  ಐಟಿ ಉದ್ಯೋಗಿಗಳನ್ನು ಬಿಎಂಟಿಸಿ ಬಸ್ ಗಳತ್ತ‌ ಸೆಳೆಯುವ ನಿಟ್ಟಿನಲ್ಲಿ ಸಾರಿಗೆ ಇಲಾಖೆ ಹೊಸ ಯೋಜನೆ ರೂಪಿಸಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಬಿಎಂಟಿಸಿ ಬಸ್​​ಗಳಲ್ಲಿ ವೈಫೈ ಲಭ್ಯವಾಗಲಿದೆ.  ಹೌದು ಬಿಎಂಟಿಸಿ ಪ್ರಮುಖ ಬಸ್ ನಿಲ್ದಾಣ ಹಾಗೂ ೩೫೦ ಬಸ್ ನಲ್ಲಿ ವೈಫೈ ಸೌಲಭ್ಯ ಒದಗಿಸಲು ಯೋಜನೆ ಸಿದ್ಧಗೊಂಡಿದೆ. ಈಗಾಗಲೇ ಟೆಂಡರ್ ಕರೆಯಲಾಗಿದ್ದು, ಮೊದಲ‌ ಹಂತವಾಗಿ ಏರಪೋರ್ಟ್ ಹಾಗೂ ಸಿಲಿಕಾನ ಸಿಟಿಯ ಐಟಿ ಕಾರಿಡಾರ್ ಗೆ ತೆರಳುವ ೨೦೦ ಬಸ್ ಗಳಿಗೆ ಈ ವೈಫೈ ಅಳವಡಿಕೆಯಾಗುತ್ತದೆ. ಈ  ಬಸ್​ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ವೈಫೈ ಸೌಲಭ್ಯದ ಲಾಭ ಪಡೆಯಲಿದ್ದಾರೆ. ಒಬ್ಬರು ೩೦ ಎಂಬಿ ಡಾಟಾ ಬಳಸಬಹುದಾಗಿದ್ದು,  ೪ ಎಂಬಿಪಿಎಸ್ ವೇಗದಲ್ಲಿ‌ ಡಾಟಾ ಸಂಪರ್ಕ‌ ಸಿಗುತ್ತೆ. ಇನ್ನು . ಏಕಕಾಲದಲ್ಲಿ ೨೫ ಪ್ರಯಾಣಿಕರು ವೈಪೈ ಬಳಸಬಹುದಾಗಿದೆ.
ಸಾರಿಗೆ ಇಲಾಖೆ ಆರಂಭದ ಹಂತದಲ್ಲಿ ೩೫೦ ಬಸ್ ಗಳಲ್ಲಿ ವೈಫೈ  ಅಳವಡಿಸುವ ಚಿಂತನೆ ಹೊಂದಿದ್ದರೂ ಪ್ರಾಯೋಗಿಕವಾಗಿ  ೨೦೦ ಬಸ್ ಗಳಲ್ಲಿ‌ ವೈಫೈ ಅಳವಡಿಸಲಾಗುತ್ತಿದೆ. ಮೆಜೆಸ್ಟಿಕ್,ಯಶ್ವಂತಪುರ,ಶಿವಾಜಿನಹರ,ಶಾಂತಿ ನಗರ, ಕೆಂಗೇರಿ ಸೇರಿದಂತೆ ೧೨ ಬಸ್ ನಿಲ್ದಾಣದಲ್ಲೂ ವೈಫೈ ಅಳವಡಿಸಲಾಗುತ್ತದೆ. ಈ ಯೋಜನೆ ಮೂಲಕ ಬಿಎಂಟಿಸಿ ಒಂದು ರೂಪಾಯಿ ಬಂಡವಾಳ ಹೂಡದೇ ಲಕ್ಷಾಂತರ ರೂಪಾಯಿ ಆದಾಯ ಗಳಿಸಲಿದೆ.
ವೈಪೈ ಒದಗಿಸುವ ಕಂಪನಿಗಳೇ ಬಿಎಂಟಿಸಿ‌ ಬಸ್ ನಿಲ್ದಾಣಕ್ಕೆ‌ ಬಾಡಿಗೆ‌ ಸೇರಿದಂತೆ‌ ವಿವಿಧ ರೂಪದಲ್ಲಿ ಸಾರಿಗೆ ಇಲಾಖೆಗೆ ಹಣ‌ಪಾವತಿಸಲಿದೆ.ಒಟ್ಟಿನಲ್ಲಿ ಕೆಲ ವರ್ಷಗಳಿಂದ ನಷ್ಟದಲ್ಲಿದ್ದ  ಬಿಎಂಟಿಸಿ ಈ ಭಾರಿ  ಐಟಿ ಉದ್ಯೋಗಿಗಳನ್ನು ಬಿಎಂಟಿಸಿಯತ್ತ ಸೆಳೇಯಲು ಸಖತ್ ಸರ್ಕಸ್​ ನಡೆಸಿದ್ದು, ಈ ಯೋಜನೆ ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಎಂಬುದು ಸಧ್ಯದ ಕುತೂಹಲ.

6 thoughts on “ಇನ್ಮುಂದೆ ಬಿಎಂಟಿಸಿಯಲ್ಲೂ ಲಭ್ಯವಾಗಲಿದೆ ವೈಫೈ ಸೌಲಭ್ಯ,,,

 • October 20, 2017 at 7:16 PM
  Permalink

  I’m really enjoying the design and layout of your blog. It’s a very easy on the eyes which makes it much more enjoyable for me to come here and visit more often. Did you hire out a developer to create your theme? Excellent work!|

 • October 20, 2017 at 11:04 PM
  Permalink

  I got this web page from my friend who shared with me
  regarding this website and at the moment this time I
  am browsing this web page and reading very informative posts
  here.

 • October 21, 2017 at 4:09 AM
  Permalink

  I’ve been exploring for a little bit for any high-quality articles or blog posts in this sort of area . Exploring in Yahoo I eventually stumbled upon this web site. Reading this info So i am satisfied to express that I have an incredibly good uncanny feeling I discovered just what I needed. I so much undoubtedly will make certain to don?t fail to remember this site and provides it a look on a continuing basis.|

 • October 24, 2017 at 1:32 PM
  Permalink

  Wow that was strange. I just wrote an really long comment but after I clicked submit my comment didn’t appear.
  Grrrr… well I’m not writing all that over again. Anyhow, just wanted to say excellent blog!

 • October 24, 2017 at 2:49 PM
  Permalink

  I’ve been surfing on-line more than 3 hours these days,
  yet I never discovered any interesting article like yours.

  It’s pretty worth sufficient for me. Personally, if all website owners and
  bloggers made good content as you probably did, the internet shall be a lot more
  useful than ever before.

Comments are closed.