ಹೊಸ ವೈನ್ ಬಂದಿದೆ ನೋಡಿ, ಯಾವುದರಿಂದ ಮಾಡಿದ್ದು ಅಂತ ಗೊತ್ತಾದ್ರೆ ನಿಜಕ್ಕೂ ಆಶ್ಚರ್ಯ ಪಡ್ತೀರಾ !

ಹಣ್ಣುಗಳಲ್ಲಿ ವೈನ್ ತಯಾರಿಸೋದು ಕಾಮನ್. ದ್ರಾಕ್ಷಿಯ ವೈನ್ ಬಹುತೇಕ ಎಲ್ಲರಿಗೂ ಪರಿಚಿತ. ಆದ್ರೆ ಮನೆಯ ಹಿತ್ತಲಲ್ಲಿ ಬೆಳೆಯುವ, ಜನ ಅಷ್ಟೇನೂ ಆಸಕ್ತಿ ವಹಿಸದ ಹಣ್ಣೊಂದ್ರಲ್ಲಿ ಟೇಸ್ಟಿ ವೈನ್ ತಯಾರಿಸಿ ಯಶಸ್ವಿಯಾಗಿದ್ದಾರೆ ನಮ್ ವಿಜ್ಞಾನಿಗಳು.
ಅಂದ್ಹಾಗೆ ಇದರದ್ದು ಕ್ಲಿಯರ್ ಹಳದಿ ಬಣ್ಣ. ನಾವ್ಯಾರೂ ಅಷ್ಟೇನೂ ಮಹತ್ನ ಕೊಡದ ಹಲಸಿನಹಣ್ಣಿನಿಂದ ತಯಾರಿಸಿರೋ ವೈನ್ ಇದು. ವರ್ಷಕ್ಕೊಮ್ಮೆ ಫಸಲು ಕೊಡೋ ಹಲಸಿನಹಣ್ಣಿನಲ್ಲೂ ವೈನ್ ಮಾಡೋ ಪ್ರಯತ್ನ ಮಾಡಿ ಯಶಸ್ವಿಯಾಗಿದೆ ಗಾಂಧಿ ಕೃಷಿ ವಿಶ್ವವಿದ್ಯಾಲಯದ ಸಂಶೋಧಕರ ತಂಡ.
ಈ ವೈನ್ನಲ್ಲಿ ಹಲಸಿನ ಹಣ್ಣಿನ ಘಮ ಹಾಗೇ ಇರುತ್ತೆ ಅನ್ನೋದು ಪ್ಲಸ್ ಪಾಯಿಂಟ್. ಅಲ್ಲದೇ ಹಣ್ಣಿನಲ್ಲಿ ಹೇರಳವಾಗಿರುವ ವಿಟಮಿನ್ ಎ ವೈನ್ನಲ್ಲಿ ದುಪ್ಪಟ್ಟಾಗಿರುತ್ತಂತೆ. ಬೇರೆಲ್ಲಾ ಬಗೆಯ ವೈನ್ಗಳಿಗೆ ಹೋಲಿಸಿದ್ರೆ ಇದರ ಟೇಸ್ಟ್ ವಿಭಿನ್ನವಾಗಿದೆ ಅಂತಾರೆ ರುಚಿ ನೋಡಿದವ್ರು.
ದ್ರಾಕ್ಷಿಯ ವೈನಿನಲ್ಲಿ ಸುಮಾರು 12 ರಿಂದ 14 ಪರ್ಸೆಂಟ್ನಷ್ಟು ಆಲ್ಕೊಹಾಲ್ ಅಂಶ ಇರುತ್ತೆ. ಆದ್ರೆ ಹಲಸಿನ ವೈನಿನಲ್ಲಿ 7 ರಿಂದ 8 ಪರ್ಸೆಂಟ್ ಮಾತ್ರ ಆಲ್ಕೊಹಾಲ್ ಇರುತ್ತೆ. ಹಾಗಾಗಿ ಆರೋಗ್ಯಕ್ಕೆ ಇದು ಬಹಳ ಒಳ್ಳೆಯದು. ಆದ್ರೆ ಸದ್ಯ ಹಲಸಿನ ವೈನ್ ಮಾರುಕಟ್ಟೆಯಲ್ಲಿ ಸಿಗ್ತಾ ಇಲ್ಲ. ವೈನ್ ಬೋರ್ಡ್ ಮತ್ತು ಸರ್ಕಾರ ಮುಂದೆ ಬಂದು ಇದರ ತಯಾರಿಕೆ, ಸಂಸ್ಕರಣೆ ಮತ್ತು ಮಾರುಕಟ್ಟೆಯ ಬಗ್ಗೆ ಆಸಕ್ತಿ ವಹಿಸಿದ್ರೆ ಜನರಿಗೆ ಆರೋಗ್ಯಪೂರ್ಣ ಹಣ್ಣಿನ ವೈನ್ ರುಚಿ ನೋಡೋ ಅವಕಾಶ ಸಿಕ್ಕಂತಾಗುತ್ತೆ.

4 thoughts on “ಹೊಸ ವೈನ್ ಬಂದಿದೆ ನೋಡಿ, ಯಾವುದರಿಂದ ಮಾಡಿದ್ದು ಅಂತ ಗೊತ್ತಾದ್ರೆ ನಿಜಕ್ಕೂ ಆಶ್ಚರ್ಯ ಪಡ್ತೀರಾ !

 • October 20, 2017 at 8:41 PM
  Permalink

  Definitely believe that which you said. Your favorite justification appeared to be on the net the simplest thing to be aware of. I say to you, I definitely get annoyed while people think about worries that they plainly don’t know about. You managed to hit the nail upon the top and also defined out the whole thing without having side effect , people can take a signal. Will probably be back to get more. Thanks|

 • October 21, 2017 at 2:10 AM
  Permalink

  What’s up every one, here every person is sharing these familiarity, therefore it’s pleasant
  to read this blog, and I used to visit this blog
  all the time.

 • October 24, 2017 at 3:57 PM
  Permalink

  Greetings! Very useful advice in this particular post!

  It is the little changes that produce the most important changes.
  Thanks for sharing!

Comments are closed.

Social Media Auto Publish Powered By : XYZScripts.com