ಆ ಸಿನಿಮಾ ಮಾಡಿದ್ರೆ ಹುಷಾರ್..ರಜಿನಿಕಾಂತ್‍ಗೆ ಖಡಕ್ ವಾರ್ನಿಂಗ್!…

ರಜಿನಿಕಾಂತ್ 2.0 ನಂತ್ರ ಪಾ. ರಂಜಿತ್ ನಿರ್ದೇಶನದ ಹೊಸ ಸಿನಿಮಾದಲ್ಲಿ ನಟಿಸ್ತಿರೋದು ಎಲ್ಲರಿಗೂ ಗೊತ್ತಿದೆ. ಈ ಚಿತ್ರವನ್ನ ಸ್ವತ: ರಜಿನಿ ಅಳಿಯ ಧನುಷ್ ನಿರ್ಮಾಣ ಮಾಡ್ತಿರೋದು ಮತ್ತೊಂದು ವಿಶೇಷ. ಕಬಾಲಿ ಸಿನಿಮಾದಲ್ಲಿ ರಜಿನಿಕಾಂತ್ ಮಲೇಷಿಯಾ ಡಾನ್ ಪಾತ್ರದಲ್ಲಿ ಮಿಂಚಿದ್ರು. ಪಾ. ರಂಜಿತ್ ನಿರ್ದೇಶನದ ಹೊಸ ಸಿನಿಮಾದಲ್ಲಿ ಮುಂಬೈ ಡಾನ್ ಆಗಿದ್ದ ಹಾಜಿ ಮಸ್ತಾನ್ ಪಾತ್ರದಲ್ಲಿ ರಜಿನಿಕಾಂತ್ ಅಭಿನಯಿಸಲಿದ್ದಾರೆ ಅನ್ನೋ ಸುದ್ದಿಯನ್ನ ಹರಿದಾಡ್ತಿತ್ತು. ಇದೀಗ ಆ ಸಿನಿಮಾ ಮಾಡಬಾರದು ಅಂತ ರಜಿನಿಗೆ ಬೆದರಿಕೆ ಪತ್ರ ಬಂದಿದೆಯಂತೆ.

ಹಾಜಿ ಮಸ್ತಾನ್‍ನ ದತ್ತು ಪುತ್ರ ಅಂತ ಹೇಳಿಕೊಳ್ತಿರೋ ಸುಂದರ್ ಶೇಖರ್ ತಮ್ಮ ತಂದೆಯನ್ನ ಸಿನಿಮಾದಲ್ಲಿ ಸ್ಮಗ್ಲರ್ ರೀತಿ ಬಿಂಬಿಸಿದ್ರೆ ಚೆನ್ನಾಗಿರಲ್ಲ ಅಂತ ಬೆದರಿಕೆ ಹಾಕಿದ್ದಾನಂತೆ. ಹಾಜಿ ಮಸ್ತಾನ್ ಒಬ್ಬ ಯಶಸ್ವಿ ವ್ಯಾಪಾರಿ, ಭಾರತೀಯ ಅಲ್ಪ ಸಂಖ್ಯಾತ ಸುರಕ್ಷಾ ಮಹಾಸಂಘದ ಸಂಸ್ಥಾಪಕ. ಇಂತಹವರನ್ನ ಭೂಗತ ಲೋಕದ ದೊರೆ ರೀತಿ ತೋರಿಸಿದರೆ ಮನಹಾನಿ ಮಾಡಿದಂತಾಗುತ್ತದೆ. ಹಾಗಾಗಿ ಅವ್ರ ಜೀವನವನ್ನಾಧರಿಸಿ ಸಿನಿಮಾ ಮಾಡಿದ್ರೆ ಪರಿಸ್ಥಿತಿ ನೆಟ್ಟಗಿರಲ್ಲ ಅಂತ ಬೆದರಿಕೆ ಪತ್ರದಲ್ಲಿ ತಿಳಿಸಲಾಗಿದೆಯಂತೆ.

ತಮಿಳುನಾಡಿನಲ್ಲಿ ಹುಟ್ಟಿದ ಹಾಜಿ ಮಸ್ತಾನ್ ಮುಂದೆ ಮುಂಬೈಗೆ ಹೋಗಿ ನೆಲೆಸಿದ್ರು. ಹಾಗಾಗಿ ಈ ಪಾತ್ರ ರಜಿನಿಕಾಂತ್‍ಗೆ ಸರಿಯಾಗಿ ಹೊಂದುತ್ತೆ, ಅದೇ ಕಾರಣಕ್ಕೆ ಅವ್ರ ಜೀವನ ಚರಿತ್ರೆಯನ್ನ ಸಿನಿಮಾದಲ್ಲಿ ರಜಿನಿಕಾಂತ್ ಅಭಿನಯಿಸೋ ಸುದ್ದಿ ಕಾಲಿವುಡ್ ಅಂಗಳದಲ್ಲಿ ಕೇಳಿ ಬರ್ತಿತ್ತು. ಸಾಮಾನ್ಯವಾಗಿ ಬಯೋಪಿಕ್ ಸಿನಿಮಾ ನಿರ್ಮಾಣ ಶುರು ಮಾಡಿದಾಗ ಇಂತಹ ವಿವಾದಗಳು ಕಾಮನ್. ಆದ್ರೆ ರಜಿನಿಕಾಂತ್ ನಿಜವಾಗ್ಲೂ ಹಾಜಿ ಮಸ್ತಾನ್ ಜೀವನಾಧಾರಿತ ಸಿನಿಮಾದಲ್ಲಿ ನಟಿಸ್ತಿದ್ದಾರೆ. ಅದೇ ನಿಜವಾದ್ರೆ, ಸುಂದರ್ ಶೇಖರ್ ಬೆದರಿಕೆ ಪತ್ರಕ್ಕೆ ಪಾ ರಂಜಿತ್ ಟೀಮ್ ಯಾವ ರೀತಿ ಪ್ರತಿಕ್ರಿಯಿಸುತ್ತೋ ನೋಡ್ಬೇಕು.

Comments are closed.

Social Media Auto Publish Powered By : XYZScripts.com