ಮಳೆ ಶುರುವಾಗ್ತಿದೆ…ಹೂದೋಟ ಮಾಡೋಕೆ ರೆಡಿಯಾಗಿದ್ದೀರಾ ?

ಆಗಾಗ ಬೀಳ್ತಿರೋ ಮಳೆಯಿಂದಾಗಿ ಸಿಲಿಕಾನ್ ಸಿಟಿಯ ಜನ ತಮ್ಮ ಗಾರ್ಡನ್ ಸೆಟ್ ಮಾಡೋಕೆ ತಯಾರಿ ನಡೆಸ್ತಿದ್ದಾರೆ. ಹಾಗಾಗಿ ಎಲ್ಲಾ ಕಡೆ ಹೂ-ಗಿಡ-ಬಳ್ಳಿಗಳಿಗೆ ಸಿಕ್ಕಾಪಟ್ಟೆ ಬೇಡಿಕೆ ಕುದುರುತ್ತಿದೆ.
ಲೈಟಾಗಿ ಎಂಟ್ರಿ ಕೊಟ್ಟಿರೋ ಮಳೆಗಾಲ ಬೆಂಗ್ಳೂರಲ್ಲಿ ಕೈದೋಟ ಮಾಡುವ ಹಂಬಲ ಇರೋರಿಗೆ ಹೊಸ ಹುರುಪು ತಂದಿದೆ. ಹಾಗಾಗಿ ಎಲ್ಲಾ ನರ್ಸರಿಗಳಲ್ಲೂ ತಮ್ಮ ಗಾರ್ಡನ್ಗಾಗಿ ವೈವಿಧ್ಯಮಯ ಗಿಡಗಳನ್ನ ಕೊಳ್ಳೋ ಭರಾಟೆಯಲ್ಲಿ ಇದ್ದಾರೆ ಜನ. ಅದ್ರಲ್ಲೂ ಮನೆಯಂಗಳದಲ್ಲಿ ಬಣ್ಣಬಣ್ಣದ ಹೂಗಳನ್ನು ಅರಳಿಸೋ ಗಿಡಗಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್. ಇನ್ನು ಬೆಂಗ್ಳೂರಲ್ಲಿ ಮನೆಯ ಬಳಿ ಅಷ್ಟೊಂದು ಸ್ಥಳ ಇಲ್ಲದಿರೋದ್ರಿಂದ ಮನೆಯ ಕಾಂಪೌಂಡುಗಳಿಗೆ ಹಬ್ಬಿಸುವಂತ ಹೂಬಳ್ಳಿಗಳನ್ನ ಜನ ಕೇಳಿ ಪಡೀತಿದ್ದಾರೆ ಅಂತಾರೆ ವ್ಯಾಪಾರಿಗಳು. ಡೇಲಿಯಾ, ಇಂಪೇಶಿಯಾ, ಜರೇನಿಯಂ, ಗುಲಾಬಿ, ಸೇವಂತಿಗೆ ಗಿಡಗಳಿಗೆ ಬೇಡಿಕೆ ಹೆಚ್ಚಿದೆ.
ಹೊಸ ಗಿಡಗಳನ್ನ ನೆಡೋದಿಕ್ಕೆ ಇದು ಸೂಕ್ತ ಸಮಯ. ತಂಪು ವಾತಾವರಣ ಮತ್ತು ಮಳೆಯಿಂದಾಗಿ ಈಗ ನೆಟ್ಟ ಗಿಡಗಳು ಚೆನ್ನಾಗಿ ಬೆಳೆದು ನಳನಳಿಸುತ್ತವೆ. ಹಾಗಾಗಿ ಜನ ತಮ್ಮ ಆಸಕ್ತಿಗೆ ತಕ್ಕಂತೆ ಗಿಡಗಳನ್ನ ಕೊಳ್ಳುತ್ತಿದ್ದಾರೆ. ಜೊತೆಗೆ ಗಿಡಗಳ ಬೆಲೆಯೂ ಸಾಕಷ್ಟು ಕಡಿಮೆ ಇರೋದು ವ್ಯಾಪಾರವನ್ನ ಮತ್ತಷ್ಟು ಹೆಚ್ಚಿಸಿದೆ.
ಮನೆಯಂಗಳಕ್ಕೆ ಹೂ-ಹಣ್ಣುಗಳ ಗಿಡ ಕೊಳ್ಳೋರು ಒಂದು ಕಡೆಯಾದ್ರೆ ತೋಟಗಳಲ್ಲಿ ಹೊಸದಾಗಿ ನಾಟಿ ಮಾಡಲು ತೆಂಗು, ಏಲಕ್ಕಿ ಮುಂತಾದ ಬೆಳೆಗಳ ಸಸಿಗಳನ್ನ ಕೊಳ್ಳುವವರೂ ಸಾಕಷ್ಟು ಜನ ಇದ್ದಾರೆ. ಇನ್ನು ಥರೇವಾರಿ ತರಕಾರಿ ಮತ್ತು ಫ್ಯಾನ್ಸಿ ಹೂಗಳ ಬೀಜ, ಗೆಡ್ಡೆಗಳ ವ್ಯಾಪಾರ ಕೂಡ ಜೋರಾಗಿದೆ. ಮಳೆರಾಯ ಮೆಲ್ಲಗೆ ಬರ್ತಿದ್ದ ಹಾಗೆ ಎಲ್ಲ ತಂತಮ್ಮ ಮನೆಯಂಗಳದಲ್ಲಿ ಹಸಿರು ಅರಳಿಸಲು ಸಜ್ಜಾಗ್ತಿದ್ದಾರೆ.

4 thoughts on “ಮಳೆ ಶುರುವಾಗ್ತಿದೆ…ಹೂದೋಟ ಮಾಡೋಕೆ ರೆಡಿಯಾಗಿದ್ದೀರಾ ?

 • October 16, 2017 at 4:47 PM
  Permalink

  You really make it seem so easy with your presentation but I find this topic to be really something which I think I would never understand. It seems too complex and extremely broad for me. I am looking forward for your next post, I’ll try to get the hang of it!

 • October 16, 2017 at 4:53 PM
  Permalink

  Real nice style and design and great written content , practically nothing else we require : D.

 • October 16, 2017 at 5:01 PM
  Permalink

  Hello my family member! I want to say that this article is amazing, nice written and include approximately all significant infos. I would like to see more posts like this.

 • October 24, 2017 at 7:25 PM
  Permalink

  Wow that was strange. I just wrote an incredibly long comment but after I clicked submit my comment didn’t appear. Grrrr… well I’m not writing all that over again. Regardless, just wanted to say superb blog!

Comments are closed.

Social Media Auto Publish Powered By : XYZScripts.com