Mother’s day : ನಿನ್ನೀ ಪ್ರೀತಿಯ ಮಮತೆಯ ಕೃತ್ಯಕ್ಕೆ ಪ್ರೀತಿಯ ವಂದನೆ ನಿನಗಿದೋ ತಾಯಿ..

“Thomas Alva Edison” wrote is his diary à
“Thomas Alva Edison was an addled child that, by a hero mother, became the genius of the century”
     ಇದರರ್ಥ ಇಷ್ಟೇ, ಮತ್ತೊಬ್ಬರೊಡನೆ ವ್ಯವಹರಿಸಲು ಶಕ್ಯವಿಲ್ಲದ ಮತ್ತು ಜ್ಞಾನವಿಲ್ಲದ ಬಾಲಕನೊಬ್ಬ ತನ್ನ ಜೀವನದ ನಿಜ ನಾಯಕಿ, ತನ್ನ ತಾಯಿಯ ನಿಸ್ವಾರ್ಥ ಸೇವೆಯಿಂದ ಜನವೇ ಅವನ ಕುರಿತು ಬರೆಯುವಂತಾಯಿತು. ಮಾತನಾಡುವಂತಾಯಿತು. ಹೌದು ಇಂದು ಅಮ್ಮಂದಿರ ದಿನ.
     ಉಪ್ಪಿಗಿಂತ ರುಚಿಯಿಲ್ಲ, ತಾಯಿಗಿಂತ ಬಂಧುವಿಲ್ಲ ಎಂಬುದನ್ನು ಕೇಳಿದ್ದೇವೆ. ಓದಿದ್ದೇವೆ ಅನುಭವಿಸಿ ನೋಡಿದ್ದೇವೆ.
     ಜಗತ್ತಿನಲ್ಲಿ ಕೆಟ್ಟ ಮಕ್ಕಳಿರಬಹುದು. ಆದರೆ, ಕೆಟ್ಟ ತಾಯಿ ಇರಲಿಕ್ಕಿಲ್ಲ. ಅದಕ್ಕೆ ಜಾನಪದರು ತಾಯಿ ಕುರಿತು ಈ ರೀತಿ ಹೇಳುತ್ತಾರೆ;
ಹಲ್ಲು ಸುಲಿಯಲು ಬೇಕು
ಒಳ್ಳೆ ವೀಳ್ಯವು ಬೇಕು
ಮಲ್ಲಿಗೆಯು ಬೇಕು ತುರುವಿಗೆ
ಮಲ್ಲಿಗೆಯು ಬೇಕು ತುರುವಿಗೇ ಹಡದಮ್ಮ
ನೀ ಬೇಕು ನನ್ನ ತವರಿಗೆ
ತಾಯಿ ಮಕ್ಕಳ ಜಗಳ ನ್ಯಾಯ ಮಾಡುವರಾದೆ
ವಾಲೆಗೆ ಮುತ್ತು ವಜನೇನೆ
ವಾಲೆಗೆ ಮುತ್ತು ವಜನೇನೆ ಹಡೆದಮ್ಮ
ನಾ ಆಡಿದ ಮಾತು ನಿಜವೇನೆ
ಬೇಸಿಗೆಯ ದಿವಸಕ್ಕೆ ಬೇವಿನ ಮರ ತಂಪು
ಭೀಮರಥಿಯೆಂಬ ನದಿ ತಂಪು
ಭೀಮರಥಿಯೆಂಬ ನದಿ ತಂಪು ಹಡೆದಮ್ಮ
ನೀನಿರಲು ತಂಪು ತವರಿಗೆ
     ತಾಯಿ ಎನ್ನುವ ಪದ ಕೇವಲ ಮನುಷ್ಯ ಜಾತಿಗೆ ಮಾತ್ರ ಸೀಮಿತವಲ್ಲ. ಜಗಜೀವನದ ಎಲ್ಲ ಜೀವಕ್ಕೂ ಅನ್ವಯಿಸುವದು.
     ನಾವು ನಮ್ಮ ಕಣ್ಣೆದುರೇ ಅಂತಹ ಅನೇಕ ಸಂಗತಿಗಳನ್ನು ನೋಡುತ್ತೇವೆ. ಹಕ್ಕಿ ತನ್ನ ಮರಿಗೆ ಗುಟುಕು ಹಾಕುವದು, ಪ್ರಾಣಿಗಳು ತಮ್ಮ ಮರಿಗಳಿಗೆ ಹಾಲುಣಿಸುವದು, ತನ್ನ ಚಿಕ್ಕ ಮರಿಗಳ ರಕ್ಷಣೆ ಮಾಡುವದು, ಎಲ್ಲವೂ ತಾಯಿ ಹೃದಯವನ್ನೇ ತೋರಿಸುತ್ತೇವೆ. ನಮ್ಮ ಕನ್ನಡನಾಡಿನ ಪ್ರಸಿದ್ಧ ಹಾಡು ಪುನ್ಯಕೋಟಿಯಲ್ಲಿ ಹೃದಯಸ್ಪರ್ಶಿ ಘಟನೆಯನ್ನು ನೋಡುತ್ತೇವೆ.
 ಮರಿ ಆಕಳು ತಾಯಿ ಸಾಯಲು ಹೋಗುತ್ತೆನೆಂದಾಗ
ಆರ ಮೊಲೆಯನು ಕುಡಿಯಲಮ್ಮ
ಆರ ಸೇರಿ ಬದುಕಲಮ್ಮ
ಆರ ಬಳಿಯಲಿ ಮಲಗಲಮ್ಮ
ಆರು ನನಗೆ ಹಿತವರು
ಅಮ್ಮ ನೀನು ಸಾಯಲೇಕೆ
ನಮ್ಮ ತಬ್ಬಲಿ ಮಾಡಲೇಕೆ
ಸುಮ್ಮನಿಲ್ಲಿಯೆ ನಿಲ್ಲೆನುತ
ಅಮ್ಮನಿಗೆ ಕರು ಹೇಳಲು
     ಅಂದರೆ ಮಗುವಿಗೆ ತಾಯಿ ಅನಿವಾರ್ಯ ಎಂಬುದು ಪ್ರಕೃತಿಯ ನಿಯಮ ಮಮತೆ ಎಂಬ ಪದ ತಾಯಿಯ ಹೃದಯದಲ್ಲೇ ಇರುತ್ತದೆ.
     ತಾನು ಇನ್ನು ಮುಂದೆ ತನ್ನ ಮಗುವಿಗೆ ಇರುವದಿಲ್ಲ ಎಂದರಿತ ಪುಣ್ಯಕೋಟಿ ತನ್ನ ಸಹ ಗೋವುಗಳಿಗೆ ಹೇಳುವ ಮಾತು ಅಬ್ಬಾ ಎಲ್ಲರಲ್ಲೂ ಕಣ್ಣೀರು ತರಿಸುತ್ತದೆ;
ಮುಂದೆ ಬಂದರೆ ಹಾಯ ಬೇಡಿ
ಹಿಂದೆ ಬಂದರೆ ಒದೆಯ ಬೇಡಿ
ಕಂದ ನಿಮ್ಮನೆಂದು ಕಾಣಿರಿ
ತಬ್ಬಲಿಯನೀ ಕರುವನು
     ಎಂಬಲ್ಲಿ ತನ್ನ ಮಗುವಿಗೆ ಮುಂದೆಯೂ ತಾಯಿ ಪ್ರೀತಿ ಸಿಗಲಿ ಎಂಬುವುದೇ ಆಗಿತ್ತು. ಅಲ್ಲದೇ ತನ್ನ ಮಗುವಿಗೆ ಹೇಳುವ ರೀತಿಯಂತೂ ಕಟುಕನ ಎದೆಯಲ್ಲೂ ಪ್ರೀತಿ ಉಕ್ಕಿಸುವದು:
ತಬ್ಬಲಿ ನೀನಾದೆ ಮನಗೆ
ಹೆಬ್ಬುಲಿಯ ಬಾಯನ್ನು ಹೋಗುವೆನು
ಇಬ್ಬರಾ ಋಣ ತೀರಿತೆಂದು
ತಬ್ಬಿಕೊಂಡಿತು ಕಂದನಾ
     ಇಲ್ಲಿ ಪುಣ್ಯಕೋಟಿಯ ಎರಡು ಪಾತ್ರಗಳನ್ನು ನೋಡಬಹುದು. ತಾಯಿಯಾಗಿ ಗುರುವಾಗಿ ತನ್ನ ಕಂದನಿಗೆ ತಿಳಿಹೇಳುವ ಸರಿ ನಿಜವಾಗಿಯೂ ಎಲ್ಲರ ಮನಸ್ಸನ್ನು ಬಿಂದು ನಿಮಿಷ ಎಚ್ಚರಗೊಳಿಸುವದು.
     ಹೀಗೆ ತಾಯಿ  ಮಗುವಿನ ಕುರಿತು ಹೊಂದಿರುವ ಪರಿಭಾಷೆ ನಮ್ಮ ಜನಪದರ ಬಾಯಲ್ಲಿ ಅತ್ಯಂತ ರಮ್ಯವಾಗಿ ಹೊಮ್ಮಿದೆ.
     ಇದನ್ನು ನೋಡಿ ನಮ್ಮಿಲ್ಲರಿಗೂ ನಮ್ಮ ತಾಯಿ ನೆನಪಾಗದಿರುವಳೇ.
     ಒಂಭತ್ತು ನವಮಾಸ ತನ್ನ ಗರ್ಭದಲ್ಲರಿಸಿ, ಭೂಮಿಗೆ ಬಂದ ನನ್ನನ್ನು ತನ್ನಕ್ಕರೆಯ ತೊಳಬಂದಿಯಲಿ ಹಿಡಿದಿಟ್ಟು, ನಾ ಮಾಡಿದ ಎಲ್ಲ ತುಂಟಾಟಗಳ ಸಹಿಸಿ, ನನ್ನನ್ನು ಅಪ್ಪಿ, ಮುದ್ದಿಸಿ ನನ್ನ ತಪ್ಪುಗಳನ್ನು ತಿದ್ದಿ, ನನ್ನನ್ನು ಒಂದು ಮೂರ್ತಿಯಾಗಿ ಮಾಡಿ, ನಾನು ನನ್ನ ಜೀವನವನ್ನು ಸುಂದರವಾಗಿ ನಿರ್ವಹಿಸುತ್ತಿದ್ದೇನೆ. ಅಂದರೆ ಅದಕ್ಕೆ ಕಾರಣ
ತನ್ನ ತಾಯಿ ಅಲ್ಲವೇ?
ತೊದಲು ನುಡಿ ಕೇಳಿ ಸಂತಸಪಟ್ಟು
ಮತ್ತೆ-ಮತ್ತೆ ಹೇಳಿಸಿ ಚಪ್ಪಾಳೆ ತಟ್ಟಿದವಳು
ನೀನಲ್ಲವೇ? ಅವ್ವ
ನನ್ನ ತೊದಲು ನುಡಿಗೆ ಶ್ರೀಕಾರ ಹಾಕಿ
ನನ್ನ ಜನಧನಿಗೆ ಮುನ್ನುಡಿ ಇಟ್ಟವಳು
ನೀನಲ್ಲವೇ? ಅವ್ವ
ನನ್ನ ಗೆಜ್ಜೆ ಸದ್ದಿನ ಅಂಬೆಗಾಲಿಗೆ
ಮುತ್ತನಿಕ್ಕಿ ಸಂತಸಪಟ್ಟವಳು
ನೀನಲ್ಲವೇ? ಅವ್ವ
ನನ್ನಯ ತಪ್ಪನು, ಒಪ್ಪನು ಮಾಡಿ
ಜೀವಕೆ ಸಂಭ್ರಮ ತಂದವಳು
ನಿನಲ್ಲವೇ? ಅವ್ವ
ನನ್ನೀ ಬದುಕಿನ ಪಯಣದೀ
ನಾ ನಿಂತು ನೋಡಿದಾಗ, ಸಂತಸ
ಸುರಿಮಳೆ ತಂದವಳು/ ನಿನಲ್ಲವೇ?
ಅವ್ವ
ನಿನ್ನೀ ಪ್ರೀತಿಯ ಮಮತೆಯ
ಕೃತ್ಯಕ್ಕೆ ಪ್ರೀತಿಯ
ವಂದನೆ ನಿನಗಿದೋ ತಾಯಿ

10 thoughts on “Mother’s day : ನಿನ್ನೀ ಪ್ರೀತಿಯ ಮಮತೆಯ ಕೃತ್ಯಕ್ಕೆ ಪ್ರೀತಿಯ ವಂದನೆ ನಿನಗಿದೋ ತಾಯಿ..

 • October 18, 2017 at 1:15 PM
  Permalink

  Greetings I am so glad I found your website, I really found you by mistake, while I was looking on Yahoo for something else, Nonetheless I am here now and would just like to say many thanks for a fantastic post and a all round exciting blog (I also love the theme/design), I don’t have time to read through it all at the moment but I have saved it and also added in your RSS feeds, so when I have time I will be back to read much more, Please do keep up the superb job.|

 • October 18, 2017 at 2:44 PM
  Permalink

  A motivating discussion is worth comment. I do believe that you should write more
  about this subject, it might not be a taboo matter
  but generally people don’t discuss these topics.

  To the next! Kind regards!!

 • October 18, 2017 at 2:57 PM
  Permalink

  Do you have a spam problem on this blog; I also am a blogger, and I was wanting to know your situation; many of us have developed some nice procedures and we are looking to swap solutions with other folks, be sure to shoot me an e-mail if interested.|

 • October 18, 2017 at 4:45 PM
  Permalink

  We are a group of volunteers and opening a new scheme in our community. Your site provided us with valuable information to work on. You have done an impressive job and our entire community will be thankful to you.|

 • October 20, 2017 at 6:01 PM
  Permalink

  Nice blog here! Also your site loads up fast! What web host are you using? Can I get your affiliate link to your host? I wish my site loaded up as quickly as yours lol|

 • October 20, 2017 at 10:59 PM
  Permalink

  I’m not sure where you’re getting your info, but good topic.
  I needs to spend some time learning more or understanding more.
  Thanks for excellent info I was looking for this info for my mission.

 • October 21, 2017 at 4:28 AM
  Permalink

  Hi there! Do you know if they make any plugins to help with Search Engine Optimization?
  I’m trying to get my blog to rank for some targeted keywords but I’m not seeing very good success.
  If you know of any please share. Many thanks!

 • October 24, 2017 at 3:47 PM
  Permalink

  Why people still use to read news papers when in this technological globe
  all is available on net?

Comments are closed.

Social Media Auto Publish Powered By : XYZScripts.com