Mother’s Day : ನಿನಗೆ ಬೇರೆ ಹೆಸರು ಬೇಕೆ ! ಅಮ್ಮ ಎಂದರೆ ಅಷ್ಟೆ ಸಾಕೆ…..!

we never know the love of our parents for us; till we become parents.
ಅದ್ದರಿಂದ ಮೊದಲು ನಮ್ಮ ತಂದೆ-ತಾಯಿಯನ್ನು ಪ್ರೀತಿಸೋಣ.
          ನನ್ನವ್ವ ನನ್ನ ತಾಯಿ
          ಹಣ್ಣು ಹಾಗಲಕಾಯಿ
          ಸುಮ್ಮನೆ ಬೈದ ಗರತಿಗೆ/ ಹಡೆದವ್ವ
          ಉಣ್ಣೆಳ ಕಾಲ ಹಿಡಿದೆನ
     ಪ್ರಪಂಚದಲ್ಲಿ ನಾವು ಅನೇಕ ರೀತಿಯ ವೈರುದ್ಧ್ಯ ಮನಸ್ಸಿನ ವ್ಯಕ್ತಿ ಕಾಣುತ್ತೇವೆ. ಅವರು ಒಳ್ಳೆಯವರಿರಬಹುದು, ಕೆಟ್ಟವವರಿರಬಹುದು. ಎಲ್ಲರೂ ತಾಯಿ ಗರ್ಭದಿಂದಲೇ ಜನಿಸುತ್ತಾರೆ. ವ್ಯಕ್ತಿ ಎಷ್ಟೇ ಒಳ್ಳೆಯವನಾಗಿರಲೇ, ಯಾರ ಮನ-ನೋಯಿಸದೇ ಜೀವನ ಸಾಗಿಸಿದ, ಈಗಲೂ ಸಾಗಿಸುತ್ತಿರುವ, ಮತ್ತೆ ಮುಂದೆಯೂ ಸಾಗಿಸುವ ಭರವಸೆ ಹೊಂದಿರುವ ವ್ಯಕ್ತಿ, ಕೂಡಾ ತಾನು ಜನ್ಮ ಪಡೆಯುವ ವೇಳೆ ತಾಯಿಯನ್ನು ನೋಯಿಸಿಯೇ ಭೂಮಿಗೆ ಬರುತ್ತಾನೆ. ಆ ಕ್ಷಣಕ್ಕೆ ಅವಳು ಅದು ನೋವೆನಿಸಿದರೂ ಮಗುವಿನ ಬೆಳವಣಿಗೆಯಲ್ಲಿ ಅವಳುಂಡ ನೋವು ಅವಳಿಗೆ ನೋವೆ ಅನ್ನಿಸುವುದಿಲ್ಲ. ಅದಲ್ಲವೇ ಮಾತೃ ಹೃದಯ.
     ಕುವೆಂಪುರವರು ಸ್ತ್ರೀ ಕುರಿತು ಹೇಳುವಾಗ ಈ ರೀತಿ ಹೇಳುತ್ತಾರೆ;
ನಿನ್ನಿಂದಲೇ ಈ ಇಳೆ ತಾಳುತ್ತದೆ ಬಾಳುತ್ತವೆ ಹಾಗಾಗಿ ನೀ ನಮ್ಮನ್ನು ನಿಜ ಮತದಲಿ, ಋಜು ಪಥದಲ್ಲಿ ನಡೆಸು ಋತುದರ್ಶಿನಿ
ಅದು ಒಬ್ಬ ವ್ಯಕ್ತಿಗೆ ತಾಯಿಯಾದವಳು ಗೆಳತಿಯಾಗಿ, ಗುರುವಾಗಿ ನಡೆಸುವ ಮಾರ್ಗ. ಅದಕ್ಕೊಂದು ದೃಷ್ಟಾಂತ ಐನ್‌ಸ್ಟನ್ ಒಬ್ಬ ಬುದ್ದಿಮಾಂಧ್ಯ ವಿದ್ಯಾರ್ಥಿ ಯಾವ ಶಾಲೆಯೂ ಅವನು ಶಾಲೆಗೆ ಸೇರಲೂ ಅನರ್ಹ ಎಂದು ಪರಿಗಣಿಸಿದ್ದವು ಅಂತಹ ಐನ್‌ಸ್ಟನ್ ಇಂದಿಗೂ ಅಮರವಾಗಿ ನಮ್ಮೆಲ್ಲರ ಬಾಯಲ್ಲಿ ತನ್ನತನ ಉಳಿಸಲು ಬೇರಾರಲ್ಲ ಅವನ ತಾಯಿ ಶ್ರಮ & ಅವಳ ಮಗುವಿನ ಬಗ್ಗೆ ಅವಳಿಗಿದ್ದ ಪ್ರೀತಿ & ಆರೈಕೆ ಮಾತ್ರ.
 ಬಿತ್ತಿದಂತೆ ಬೆಳೆ ಎಂಬಂತೆ ತಾಯಿ ನೀಡುವ ಸಂಸ್ಕಾರ ಮಗುವಿಗೆ ಬಹಳ ಮುಖ್ಯವಾದದ್ದು. ಅಂತಹ ಮಾತೆ ಆತ್ಮದುದ್ಧಾರಕ್ಕೆ ಅಥವಾ ಮಕ್ಕಳಿಗೆ ನೋವಾದಾಗ ಮಿಡಿಯುವ ಪರಿ ಬಹು ಅಂತಃಕರಣಪೂರಿತವಾದದ್ದು. ಅಂತಹದೊಂದು ದೃಶ್ಯವನ್ನು ಶ್ರೀ ಕುವೆಂಪುರವರ ಬೆರಳ್ಗೆ-ಕೊರಳ್ ಕೃತಿಯಲ್ಲಿ ನೋಡಬಹುದು. ಅದು ಅತ್ಯಂತ ಕರುಣಾಜನಕ ಜೊತೆಗೆ ಮಾತೃ-ಹೃದಯದ ಅತ್ಯಂತಿ ಕತೆಯನ್ನು ತೋರಿಸುವ ಒಂದು ನಿದರ್ಶನ.
ಆರ್‍ಗೊ ಬಲಿ ನನ್ನ ಕಂದನ ಬೆರಳ್
ಬಲಿಯಕ್ಕೆ ಆ ಪಾಪಿಯ ಕೊರಳ್ |
ಎಂದು ಶಪಿಸುತ್ತಾಳೆ
     ಹೌದು, ಮಹಾಭಾರತದ ಏಕಲವ್ಯನ ತಾಯಿ ಶಾಪದನುಸರಣೀಯವೋ ಏನೋ ಎಂಬಂತೆ. ಅಂದರೆ ಇದ ಒಬ್ಬನೇ ಮಗನಿಗೋಸ್ಕರ ಕಾಡು-ಮೇಡುಗಳಲ್ಲಿ ಕಾಡಿನ ಜೇನು, ಬಾಳೆ, ಇತರೆ ಎಲ್ಲ ಪದಾರ್ಥಗಳನ್ನು ಅತ್ಯಂತ ಪ್ರೀತಿಯಿಂದ ತಾಯ್ ಅಂತಃಕರಣದಿಂದ ತಂದಾಗ, ಅಲ್ಲಿ ಮಗನ ಅಂದರೆ ಏಕಲವ್ಯನ ಹೆಬ್ಬೆರಳು ಇನ್ನು ಗುರುದಕ್ಷಣೆಯಾಗಿ ಪಡೆದ ದ್ರೋಣಾಚಾರ್‍ಯರಿಗೆ ಅವರ ಕೊರಳ್ ಬಲಿ ಎಂದು ಶಪಿಸುತ್ತಾಳೆ ಆ ತಾಯಿ ಅದೇ ಮುಂದಿನ ಮಹಾಭಾರತ ಯುದ್ಧದಲ್ಲಿ ಸುಳ್ಳಾಗದೇ ಹೋಗದು. ಇಂತಹ ಅಪೂರ್ವ ಪ್ರಸಂಗಳನ್ನು ನಿರರ್ಗಳವಾಗಿ ಭಾಷ ಪ್ರೌಢಮೆಯೊಂದಿಗೆ ಅವರು ನಿರೂಪಿಸಲು ಅವರಿಗೆ ಬಂದಿರುವ ಶಕ್ತಿಯಾದರೂ ಎಲ್ಲಿಯದೂ ಅದಕ್ಕೆ ಮುಖ್ಯ ಕಾರಣ ಅವಳು ಮಾತೃ ದೇವತೆಯ ಕೃಪಾರ್ಶಿವಾದ ಎಂದು ತಮ್ಮ ಬಾಲ್ಯದ ಘಟನೆಯನ್ನು ಹೃದಯ ಸ್ಪರ್ಶಯಾಗಿ ವಿವರಿಸುತ್ತಾರೆ ಕುವೆಂಪು.
ಒಂದು ಸಲ ಬಾಲಕ ಕುವೆಂಪು ಆಟದಲ್ಲಿ ತೋಳಿಗೆ ಪೆಟ್ಟಾಗಿ ಸ್ವಾಧೀನತೆಯನ್ನು ಕಳೆದುಕೊಂಡ ಸಂದರ್ಭದಲ್ಲಿ ಅವರಿಗಾದ ದೈಹಿಕ ಯಾತನೆಗಿಂತ ಅವರ ತಾಯಿಗಾದ ಮಾನಸಿಕ ಯಾತನ ನೂರ್ಮಡಿಯಾಯಿತಂತೆ. ತಾನು ನಿತೃವೂ ಪೂಜಿಸುತ್ತಿದ್ದ ಆ ತುಳಸಿ ಕಟ್ಟೆಗೆ ಕೈ ಮುಗಿದು ತನ್ನದುಃಖವನ್ನು ನೂರ್ಮಡಿಸಿ ಅತ್ತರಂತೆ ಅವರ ಗಂಡನನ್ನು ಕಳೆದುಕೊಂಡು ಇದ್ದೊಬ್ಬ ಮಗನಿಗೆ ಹೀಗಾಯ್ತಲ್ಲ ಎಂದು ತಮ್ಮ ಹಣೆಯನ್ನು ಕಲ್ಲಗೆ ದಡ್-ದಡ್ ಎಂದು ಕುಟ್ಟಿದಾಗ ನೆತ್ತರ ತೊಟ್ಟಕ್ಕಿದಾಗ, ಆ ಕಲ್ಲು ವಿಕಂಪಿಸಿ ಭಾಗವಚ್ಚರಣವಾಗಿ, ದೇವದೇವನ ಹೃದಯ ಕಮಲದಲ್ಲಿ ಕರುಣಾನುಕಂಪವಾದ ಮಾತೃಭಕ್ತಿಯ ತಪಶಕ್ತಿ, ಆ ದೈವಕೃಪೆಯಿಂದ ಆಶೀರ್ವಾದ ಮುದ್ರೆಯಾಗಿ ಕುವೆಂಪು ಶಿರದಲ್ಲಿ ಆಶೀರ್ವಾದ ಮುದ್ರೆಯಾಗಿ ಅವರ ಈ ವಿದ್ವತ್ತಿಗೆ ಕಾರಣವಾಯಿತಂತೆ. ತೊಟ್ಟಿಲ ತೂಗುವ ಕೈ ಜಗತ್ತನ್ನೇ ತೂಗ ಬಲ್ಲದು ಎಂಬುಂದನ್ನು ನಾವು ಶಿವಾಜಿ ಕಥೆಯಲ್ಲಿ
     ತಾಯಿಯ ರಕ್ತ ಮಾಂಸಗಳಿಂದಲೇ ನಮ್ಮ ದೇಹ ತಯಾರಾಗಿರುತ್ತದೆ. ಆಕೆಯ ಮೊಲೆಹಾಲು ಕುಡಿದು ಬೆಳೆದಿರುತ್ತೇವೆ ಆಕೆಯ ಮುದ್ದುಂಡು ಚೆಲುವಾಗಿರುತ್ತೇನೆ ಆಕೆಯ ಮೈದಡವಿ ನಮ್ಮ ಬೆನ್ನಿಗೆ ಭೀಮರಕ್ಷೆ ಇರಿಸಿದ್ದಾಳೆ ಆಕೆ ಹಸಿವೆ ನೀರಡಕೆ ಹೇಸಿ ಮೊದಲಾದವನ್ನು
ಕಣ್ಣೆಂಜಲ ಕಾಡಿಗಿ ಬಾಯಂಜಲ ವೀಳ್ಯದ
ಯಾರೆಂಜಲುಂಡು ನವಮನವೇ ಹಡೆದವ್ವ
ಬಾಯೆಂಜಲುಂಡು ಬೆಳೆದೆನ
ತಾಯಿ-ತಾಯಿಯಾದಾಗ ಅವಳ ಮಾತೃ ಹೃದಯ ಕರಗುವಾಗ, ಅತ್ತೆಯಾದಾಗ ಅವಳ ರೀತಿಯೇ ಬದಲಾಗಲು ಕಾರಣವೆನಿಸಿರಬಹುದು ?
     ಇಲ್ಲಿ ಮನಸ್ಥಿತಿಯೇ ಮುಖ್ಯಕಾರಣ ನಾನಾಗಲೇ ಹೇಳವಂತೆ, ಮಗ-ಮಗಳು ಅವಳ ಕರುಳ ಸಂಬಂಧವಾದರೆ ಅದು ಹೊರಗಿನಿಂದ ಬಂದವಳೆ ತನ್ನ ಮಗನನ್ನು ಅವಳ ಕಸಿಯುತ್ತಾಳೆಂಬ ಭಾವ ಸೂಸೆಯೂ ಕೂಡಾ ತನ್ನ ಅತ್ತೆಯನ್ನು ತಾಯಿಯಂತೆ ಕಾಣಬೇಕು.
ಸ್ವಾಮಿ ವಿವೇಕಾನಂದ :
     ತಾಯಿಯನ್ನು ಪೂಜಿಸದ ಪಾಪಿ ಯಾವನೊಬ್ಬ ಕೀರ್ತಿವಂತನಾಗಿಲ್ಲ. ಈ ಭರತ ಖಂಡದಲ್ಲಿ ಪೂಜ್ಯಳಾದ ಮಾತೆಗೇ ಅಗ್ರಸ್ಥಾನ ದೊರೆತಿದೆ ಮಾತೆಯೇ ದೇವರು ಎಂದು ತಿಳಿಯಿರಿ ಏಕೆಂದರೆ ಎಂತಹ ಪಾಪಿ ಕೂಡಾ ನೋವಾದಾಗ ಕರೆಯುವ ಶಬ್ದ ಅಮ್ಮಾ ಎಂದು ಎಲ್ಲರಿಗೂ ತಾಯಿಂದಿರ ದಿನದ ಶುಭಾಶಯಗಳು

3 thoughts on “Mother’s Day : ನಿನಗೆ ಬೇರೆ ಹೆಸರು ಬೇಕೆ ! ಅಮ್ಮ ಎಂದರೆ ಅಷ್ಟೆ ಸಾಕೆ…..!

Comments are closed.

Social Media Auto Publish Powered By : XYZScripts.com