ಎಲ್ಲಾ ಕ್ಷೇತ್ರದಲ್ಲೂ ಮೋದಿ ವಿಫಲ : ಗಡಿಯಲ್ಲಿ ಉದ್ವಿಗ್ನತೆಗೆ ಕೇಂದ್ರವೇ ನೇರ ಹೊಣೆ ಖರ್ಗೆ ವಾಗ್ದಾಳಿ…

ಬೆಂಗಳೂರು  : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮೂರು ವರ್ಷ ಪೂರೈಸಿದ್ದು, ಎಲ್ಲಾ ಕ್ಷೇತ್ರದಲ್ಲೂ ಅಭಿವೃದ್ದಿ ಸಾಧಿಸುವಲ್ಲಿ ವಿಫಲವಾಗಿದೆ ಎಂದು ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು. ಬೆಂಗಳೂರಿನ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಜಮ್ಮು ಕಾಶ್ಮೀರದ ಘಟನೆಗೆ ಕೇಂದ್ರ ಸರ್ಕಾರವೇ ನೇರ ಹೊಣೆ. ಕೇಂದ್ರದ ವರ್ತನೆಯಿಂದ ಭಾರತೀಯ ಯೋಧರ ನೈತಿಕ ಸ್ಥೈರ್ಯ ಕುಸಿದಿದೆ ಎಂದು ಕಿಡಿಕಾರಿದರು.

ಪ್ರಧಾನಿ ಅಧಿಕಾರಕ್ಕೆ ಬರುವ ಮುನ್ನ ವಿದೇಶದಲ್ಲಿನ ಕಪ್ಪುಹಣ ತರಿಸಿ ಪ್ರತಿಯೊಬ್ಬ ಖಾತೆಗೆ 15ಲಕ್ಷ ಹಣ ಹಾಕುವುದಾಗಿ ಹೇಳಿದ್ದರು. ಅದು ಈಗ ಸುಳ್ಳಾಗಿದೆ. ಅವರು ಈ ಭರವಸೆಯನ್ನ ಈಡೇರಿಸಿಲ್ಲ. ಮೂರು ವರ್ಷದ ಆಡಳಿತಾವಧಿಯಲ್ಲಿ 5 ಲಕ್ಷ ಜನರಿಗೂ ಉದ್ಯೋಗ ನೀಡಿಲ್ಲ. ಅಲ್ಲದೆ ವಿದೇಶಿ ಬಂಡವಾಳವೂ ಸಹ ಹರಿದು ಬರುತ್ತಿಲ್ಲ. ಈ ಮೂಲಕ ಪ್ರಧಾನಿ ಮೋದಿ ಸುಳ್ಳು ಭರವಸೆ ನೀಡಿ ಜನರಿಗೆ ವಂಚಿಸುತ್ತಿದ್ದಾರೆ. ನೋಟ್ ಬ್ಯಾನ್ ಆದ ನಂತರ ಎಷ್ಟು ಹಣ ಸಂಗ್ರಹವಾಯ್ತು. ಈ ಬಗ್ಗೆ ಮಾಹಿತಿ ನೀಡುತ್ತಿಲ್ಲ ಎಂದು ಹರಿಹಾಯ್ದರು. ಮಾತಿನಲ್ಲೆ ಕಾಲ ಕಳೆಯುತ್ತಿದ್ದಾರೆ, ಗೋ ರಕ್ಷಣೆ ಹೆಸರಿನಲ್ಲಿ ಸಮಾಜದಲ್ಲಿ ಅಶಾಂತಿ  ಉಂಟುಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾನೇನು ಅರ್ಜಿ ಹಾಕಿಲ್ಲ….

ಇನ್ನು ಕೆಪಿಸಿಸಿ ಅಧ್ಯಕ್ಷ ಬದಲಾವಣೆ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ. ನಾನೇನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಹಾಕಿ ಕುಳಿತಿಲ್ಲ. ಅದರ ಉಸಾಬರಿಗೂ ನಾನು ಹೋಗಿಲ್ಲ. ಬಿಜೆಪಿಯಲ್ಲಿ ಹೇಳೋರು ಮೋದಿಯೊಬ್ಬರೇ. ಆದ್ರೆ ನಮ್ಮಲ್ಲಿ ಹೈಕಮಾಂಡ್ ಇದೆ. ಮುಂದಿನ ಚುನಾವಣೆಯನ್ನ ಸಾಮೂಹಿಕ ನಾಯಕತ್ವದಲ್ಲಿ ಎದುರಿಸುತ್ತೇವೆ. ಮುಂದಿನ ಸಿಎಂ ಹೈಕಮಾಂಡ್ ನಿರ್ಧರಿಸುತ್ತೆ ಎಂದು ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟನೆ ನೀಡಿದರು.

4 thoughts on “ಎಲ್ಲಾ ಕ್ಷೇತ್ರದಲ್ಲೂ ಮೋದಿ ವಿಫಲ : ಗಡಿಯಲ್ಲಿ ಉದ್ವಿಗ್ನತೆಗೆ ಕೇಂದ್ರವೇ ನೇರ ಹೊಣೆ ಖರ್ಗೆ ವಾಗ್ದಾಳಿ…

 • October 21, 2017 at 1:25 AM
  Permalink

  Terrific post however , I was wondering if you could write a litte
  more on this subject? I’d be very thankful if you could elaborate a little
  bit further. Thanks!

 • October 21, 2017 at 2:42 AM
  Permalink

  Wow, awesome blog layout! How long have you been blogging for?
  you make blogging look easy. The overall look of your
  site is wonderful, let alone the content!

 • October 24, 2017 at 1:42 PM
  Permalink

  I was able to find good advice from your articles.

Comments are closed.

Social Media Auto Publish Powered By : XYZScripts.com