Sandalwood ; ಏಳು ಕಥೆಗಳ ಸಂಗಮ..ಇದು ರಿಶಬ್ ಶೆಟ್ಟಿಯ ಹೊಸ ಸಿನಿಮಾ!

ಕಿರಿಕ್ ಪಾರ್ಟಿ ನಂತ್ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಥೆ ಹೇಳ್ತೀನಿ ಅಂದಿದ್ದ ರಿಶಬ್ ಶೆಟ್ಟಿ ಆ ಗ್ಯಾಪ್‍ನಲ್ಲಿ ಕಥಾಸಂಗಮ ಅನ್ನೋ ಮತ್ತೊಂದು ಸಿನಿಮಾ ಮಾಡೋದಾಗಿ ಹೇಳಿದ್ರು. ಪುಟ್ಟಣ್ಣ ಕಣಗಾಲ್ ಅವ್ರ ಕಥಾ ಸಂಗಮ ಚಿತ್ರಕ್ಕೂ ಇದಕ್ಕೂ ಏನು ಸಂಬಂಧ ಇಲ್ಲ. ಆದ್ರೆ ಟೈಟಲ್ ಜೊತೆಗೆ ಪುಟ್ಟಣ್ಣ ಕಣಗಾಲ್ ರೀತಿಯಲ್ಲೇ ವಿಭಿನ್ನ ಪ್ರಯೋಗ ಮಾಡ್ತಿದ್ದಾರೆ ನಿರ್ದೇಶಕರು. 1975ರಲ್ಲಿ ಪುಟ್ಟಣ್ಣ ಕಣಗಾಲ್ ಮೂರು ಕಥೆಗಳನ್ನ ಕಥಾ ಸಂಗಮ ಚಿತ್ರದಲ್ಲಿ ಕಟ್ಟಿಕೊಟ್ಟಿದ್ರು. ರಿಶಬ್ ಶೆಟ್ಟಿಯ ಕಥಸಂಗಮದಲ್ಲಿ ಏಳು ಒಟ್ಟು ಕಥೆಗಳಿವೆ.

ಕಥಾ ಸಂಗಮ ಚಿತ್ರದಲ್ಲಿ ರಿಶಬ್ ಶೆಟ್ಟಿ 7 ಕಥೆಗಳನ್ನ ಹೇಳೋಕೆ ಹೊರಟಿದ್ದು, 7 ಕಥೆಗಳನ್ನ ಏಳು ಮಂದಿ ನಿರ್ದೇಶಕರು ನಿರ್ದೇಶನ ಮಾಡ್ತಿರೋದು ವಿಶೇಷ. ಈ ಏಳು ನಿರ್ದೇಶಕರ ಕೆಲಸವನ್ನ ರಿಶಬ್ ನಿರ್ದೇಶಿಸಲಿದ್ದಾರೆ. ಏಳು ಕಥೆಗಳಿಗೆ ಏಳು ಮಂದಿ ಸಂಗೀತ ನಿರ್ದೇಶಕರು ಮ್ಯೂಸಿಕ್ ಕಂಪೋಸ್ ಮಾಡ್ತಿದ್ರೆ, 7 ಮಂದಿ ಛಾಯಾಗ್ರಾಹಕರು ಆ ಏಳು ಕಥೆಗಳನ್ನ ಸೆರೆಹಿಡಿಯಲಿದ್ದಾರೆ. ಕಥಾ ಸಂಗಮ ಚಿತ್ರವನ್ನ ಪುಟ್ಟಣ್ಣ ಕಣಗಾಲ್ ಅವರಿಗೆ ಅರ್ಪಿಸುತ್ತಿರುವ ಚಿತ್ರತಂಡ ಚಿತ್ರದ ಪೋಸ್ಟರ್ ರಿಲೀಸ್ ಮಾಡಿದೆ. ಈ ಚಿತ್ರಕ್ಕೆ ಮತ್ತೊಬ್ಬ ನಿರ್ಮಾಪಕರ ಜೊತೆ ಸೇರಿ ಸ್ವತ: ನಿರ್ದೇಶಕರೇ ಬಂಡವಾಳ ಹಾಕ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಕಥೆಗಳನ್ನ ಆಹ್ವಾನಿಸಿ ಅದ್ರಲ್ಲಿ ಉತ್ತಮವಾದ 7 ಕಥೆಗಳನ್ನ ಈ ಕಥಾಸಂಗಮ ಚಿತ್ರಕ್ಕೆ ಆಯ್ಕೆ ಮಾಡಿಕೊಳ್ತಿದ್ದಾರೆ. ಕಥಾ ಸಂಗಮ ಸಿನಿಮಾ ಪೋಸ್ಟರ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ಲಾಗಿದ್ದು, ಪೋಸ್ಟರ್ ನೋಡಿದವರು ರಿಶಬ್ ಶೆಟ್ಟಿ ಪ್ರಯತ್ನಕ್ಕೆ ಶುಭಾಶಯ ಕೋರುತ್ತಿದ್ದಾರೆ. 7 ಕಥೆಗಳ ಪಾತ್ರಗಳನ್ನ ಪೋಸ್ಟರ್‍ನಲ್ಲಿ ತೋರಿಸುವ ಪ್ರಯತ್ನ ಮಾಡಿದಂಎತ ಕಾಣ್ತಿದ್ದು, ಪೋಸ್ಟರ್ ಕುತೂಹಲ ಕೆರಳಿಸುವಂತಿದೆ. ಹಾಲಿವುಡ್ ಸಿನಿಮಾ ಪೋಸ್ಟರ್ ರೀತಿ ಇದೆ ಅಂತ ಕೆಲವರು ಪ್ರಶಂಸೆ ವ್ಯಕ್ತಪಡಿಸ್ತಿದ್ದಾರೆ.

Comments are closed.

Social Media Auto Publish Powered By : XYZScripts.com