Mysore ; ಅರಮನೆಯಲ್ಲಿರುವ ಎಟಿಎಂ ಕೇಂದ್ರದಲ್ಲಿ ಅಗ್ನಿ ಅವಘಡ…..

ಮೈಸೂರು  : ವಿಶ್ವವಿಖ್ಯಾತ ಮೈಸೂರು ಅರಮನೆಯಲ್ಲಿರುವ ಎಟಿಎಂ ಕೇಂದ್ರದಲ್ಲಿ ಅಗ್ನಿ ಅವಘಡ ಸಂಭವಿಸಿರುವ ಘಟನೆ ನಡೆದಿದೆ. ಅರಮನೆಯ ದ್ವಾರದ ಬಳಿಯಿರುವ ಟಿಕೆಟ್ ಕೌಂಟರ್ ಬಳಿ ಧಿಡೀರ್ ಬೆಂಕಿ ಕಾಣಿಸಿಕೊಂಡು ಆತಂಕ ಎದುರಾಗಿತ್ತು. ಬೆಂಕಿಯ ಕಿನ್ನಾಲಿಗೆ ವ್ಯಾಪಿಸಿ ಅರಮನೆ ಟಿಕೇಟ್ ಕೌಂಟರ್ ಬಳಿ ಎಸ್‌ಬಿಐ ಎಟಿಎಂ ಕೇಂದ್ರ ಹೊತ್ತಿ ಉರಿದಿದೆ. ಶಾರ್ಟ್‌ ಸರ್ಕ್ಯೂಟ್‌ನಿಂದಾಗಿ ಅವಘಡ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ.

ನಿನ್ನೆಯಷ್ಟೆ ಎಟಿಎಂ ದುರಸ್ತಿಗಾಗಿ ಯಂತ್ರವನ್ನು ಸಿಬ್ಬಂದಿಗಳು ಕೊಂಡೊಯ್ಯಿದಿದ್ದರು. ಇಂದು ಬೆಳಗ್ಗೆ ಇದೇ ಎಟಿಎಂ ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಇನ್ನು, ಅವಘಡದಿಂದಾಗಿ ಅರಮನೆಯ ಗೋಡೆಗಳಿಗೂ ಹಾನಿಯಾಗಿದೆ. ಸುಟ್ಟು ಭಸ್ಮವಾಗಿರುವ ಎಟಿಎಂ ಕೇಂದ್ರದ ಬೆಂಕಿಯಿಂದ ಅರಮನೆ ಗೋಡೆಗೂ ಹಾನಿಯಾಗಿದೆ. ಅರಮನೆ ಭದ್ರತಾ ಪೊಲೀಸ್ ಸಿಬ್ಬಂದಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ.

Comments are closed.

Social Media Auto Publish Powered By : XYZScripts.com