Black & white : ಬಾಂಬ್ ನಾಗ ಮತ್ತು ಇಬ್ಬರು ಪುತ್ರರು 10 ದಿನಗಳ ಪೊಲೀಸರ ವಶಕ್ಕೆ…

ಬೆಂಗಳೂರು : ಅಪಹರಣ ದರೋಡೆ ಪ್ರಕರಣದಲ್ಲಿ ತಲೆಮರಿಸಿಕೊಂಡು ನಿನ್ನೆಯಷ್ಟೆ ಪೊಲೀಸರ ಬಲೆಗೆ ಬಿದ್ದ ರೌಡಿ ಶೀಟರ್ ಬಾಂಬ್ ನಾಗ ಮತ್ತವನ ಇಬ್ಬರು ಮಕ್ಕಳಾದ ಗಾಂಧಿ ಮತ್ತು ಶಾಸ್ತ್ರಿಯನ್ನ ಬೆಂಗಳೂರಿನ 11ನೇ ಎಸಿಎಂಎಂ ನ್ಯಾಯಾಲಯ 10 ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಿದೆ. ಅಪಹರಣ ದರೋಡೆ ಪ್ರಕರಣದಲ್ಲಿ ಪೊಲೀಸರು ಬಂಧಿಸಲು ತೆರಳಿದ್ದ ವೇಳೆ ಮನೆಯಿಂದ ಪರಾರಿಯಾಗಿದ್ದ ಬಾಂಬ್ ನಾಗ ಮತ್ತು  ಮಕ್ಕಳು ಗಾಂಧಿ ಹಾಗೂ ಶಾಸ್ತ್ರಿ ಅಜ್ಞಾತ ಸ್ಥಳದಲ್ಲಿದ್ದುಕೊಂಡು ಐಪಿಎಸ್ ಆಫಿಸರ್ ಮತ್ತು ಸಚಿವರ ಮೇಲೆ ಆರೋಪಗಳನ್ನ ಹೊರಿಸಿ ಸಿಡಿ ಬಿಡುಗಡೆ ಮಾಡುತ್ತಿದ್ದರು.

ಇವರನ್ನ ಬಂಧಿಸಲು ತಜ್ಞರ ತಂಡ ಕಾರ್ಯಚರಣೆ ನಡೆಸುತ್ತಿತ್ತು. ಈ ನಡುವೆ ಗುರುವಾರ ಎಸಿಪಿ ರವಿಕುಮಾರ್ ನೇತೃತ್ವದ ವಿಶೇಷ ತಂಡ ಈ ಮೂವರನ್ನ ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಆರ್ಕಟ್ ನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಈ ಮೂವರನ್ನ ಇಂದು ಕೋರ್ಟ್ ಗೆ ಹಾಜರುಪಡಿಸಿದ್ದರು.

ಮೂವರು ಆರೋಪಿಗಳನ್ನ 15 ದಿನಗಳ ಕಾಲ ಕಸ್ಟಡಿಗೆ ಒಪ್ಪಿಸುವಂತೆ ಕೋರ್ಟ್ ಪೊಲೀಸರು ಮನವಿ ಮಾಡಿದ್ದರು. ಹಾಗೆಯೇ ನಾಗನ ಪರ ವಕೀಲ 3ರಿಂದ ನಾಲ್ಕು ದಿನ ಮಾತ್ರ ಪೊಲೀಸರಿಗೆ ಒಪ್ಪಿಸಿ ಎಂದು ಮನವಿ ಮಾಡಿದ್ದರು. ಇಬ್ಬರು ಮನವಿ ಆಲಿಸಿದ 11ನೇ ಎಸಿಎಂಎಂ ನ್ಯಾಯಾಲಯ ಮೂವರು ಆರೋಪಿಗಳಿಗೆ 10 ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಿ ಆದೇಶಿಸಿದೆ. ಉಳಿದ ಆರೋಪಿಗಳನ್ನು 4 ದಿನಗಳ ಕಾಲ ಪೊಲೀಸರ ವಶಕ್ಕೆ ನಿಡಲಾಗಿದೆ.

5 thoughts on “Black & white : ಬಾಂಬ್ ನಾಗ ಮತ್ತು ಇಬ್ಬರು ಪುತ್ರರು 10 ದಿನಗಳ ಪೊಲೀಸರ ವಶಕ್ಕೆ…

  • October 18, 2017 at 11:44 AM
    Permalink

    Have you ever thought about including a little bit more than just your articles? I mean, what you say is important and everything. However imagine if you added some great visuals or videos to give your posts more, “pop”! Your content is excellent but with pics and video clips, this blog could undeniably be one of the best in its field. Superb blog!

  • October 18, 2017 at 12:32 PM
    Permalink

    I’ve recently started a blog, the information you provide on this web site has helped me tremendously. Thanks for all of your time & work. “Yield not to evils, but attack all the more boldly.” by Virgil.

  • October 24, 2017 at 7:13 PM
    Permalink

    I do believe all the concepts you have introduced in your post. They’re very convincing and will certainly work. Still, the posts are very short for novices. May just you please extend them a bit from next time? Thanks for the post.

Comments are closed.

Social Media Auto Publish Powered By : XYZScripts.com