೧೦೦೦ ಕೋಟಿ ಮಹಾಭಾರತಕ್ಕೆ ಎದುರಾಗಿ ೫೦೦ ಕೋಟಿ ಬಂಡವಾಳದಲ್ಲಿ ರಾಮಾಯಣ ಸಿನಿಮಾ

ಜಾನಪದ ಕಥಾಹಂದರದ ಬಾಹುಬಲಿ ಸಿನಿಮಾ ಸೂಪರ್ ಹಿಟ್ಟಾಗಿ ಭಾರತ ಚಿತ್ರರಂಗದ ಖ್ಯಾತ ಫಿಲ್ಮ್ ಮೇಕರ್ಸ್ ಐತಿಹಾಸಿಕ, ಪೌರಾಣಿಕ ಸಿನಿಮಾಗಳನ್ನ ತೆರೆಮೇಲೆ ತರೋಕೆ ಉತ್ಸುಕರಾಗುವಂತೆ ಮಾಡಿದೆ. ಬಾಹುಬಲಿ ಸಿನಿಮಾ ಬಿಡುಗಡೆಗೂ ಮೊದ್ಲೆ ಮಾಲಿವುಡ್ ಅಂಗಳದಲ್ಲಿ ೧೦೦೦ ಕೋಟಿ ಬಂಡವಾಳದಲ್ಲಿ ಮಹಾಭಾರತ ಸಿನಿಮಾ ಅನೌನ್ಸ್ ಆಗಿ ದೊಡ್ಡದಾಗಿ ಸುದ್ದಿಯಾಯ್ತು. ಇದೀಗ ತೆಲುಗಿನ ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ೫೦೦ಕೋಟಿ ಸುರಿದು ರಾಮಾಯಣ ಮಹಾಕಾವ್ಯವನ್ನ ತೆರೆಗೆ ತರೋ ಸಾಹಸಕ್ಕೆ ಕೈ ಹಾಕಿದ್ದಾರೆ. ಈಗಾಗಲೇ ರಾಮಾಯಣ ಕಾವ್ಯವನ್ನು ಆಧರಿಸಿ ಸಿನಿಮಾ, ಕಿರುತರೆ ಧಾರಾವಾಹಿಗಳು ಬಂದಿದ್ರೂ, ಅದೆಲ್ಲಾಕ್ಕಿಂತ ವಿಭಿನ್ನವಾಗಿ ಈ ಚಿತ್ರವನ್ನ ತೆರೆಗೆ ತರೋ ಆಲೋಚನೆಯಲ್ಲಿದ್ದಾರೆ ನಿರ್ಮಾಪಕರು.

ಬಾಹುಬಲಿ ಸಿನಿಮಾ ೩೫೦ ಕೋಟಿ ಬಂಡವಾಳದಲ್ಲಿ ತಯಾರಾಗಿ ೧೦೦೦ ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡ್ತಿದೆ. ಸರಿಯಾದ ಪ್ಯ್ಲಾನಿಂಗ್ ಇದ್ರೆ ೫೦೦ ಕೋಟಿ ಬಂಡವಾಳ ಹಾಕಿದ್ರೂ ವಾಪಸ್ ಪಡೀಬಹುದು ಅನ್ನೋ ನಂಬಿಕೆಯನ್ನ ಬಾಹುಬಲಿ ಸಿನಿಮಾ ಮೂಡಿಸಿದೆ. ಅದೇ ಕಾರಣಕ್ಕೆ ಅಲ್ಲು ಅರವಿಂದ್ ರಾಮಾಯಣ ಕಾವ್ಯವನ್ನ ಮೂರು ಭಾಗಗಳಾಗಿ ತೆರೆಗೆ ತರೋಕೆ ಹೊರಟಿದ್ದಾರೆ. ಮಾಲಿವುಡ್ ಮಂದಿ ಸಾವಿರ ಕೋಟಿ ಬಂಡವಾಳ ಹಾಕೊ ಸಾಹಸ ಮಾಡಿದ್ದಾರೆ ಅಂದ್ಮೇಲೆ ೫೦೦ ಕೋಟಿ ಏನು ದೊಡ್ಡದ್ದಲ್ಲ ಅನ್ನಲಾಗ್ತಿದೆ. ಅಲ್ಲದೇ ನಿರ್ಮಾಪಕರಾದ ಅರವಿಂದ್ ಈಗಾಗಲೇ ಸಾಕಷ್ಟು ಬಿಗ್ ಬಡ್ಜೆಟ್ ಸಿನಿಮಾ ನಿರ್ಮಿಸಿ ಗೆದ್ದಿದ್ದಾರೆ. ಅವರಿಗಿರುವ ಅನುಭವಕ್ಕೆ ೫೦೦ ಕೋಟಿ ಬಂಡವಾಳ ಹಾಕಿ ಸಿನಿಮಾ ಮಾಡಿ ಗೆಲ್ಲೋದು ಕಷ್ಟವಾಗಲ್ಲ.

ಅಲ್ಲು ಅರವಿಂದ್ ಮಾತ್ರ ಇಷ್ಟು ದೊಡ್ಡ ಸಿನಿಮಾಗೆ ಕೈ ಹಾಕಿಲ್ಲ. ನಿರ್ಮಾಪಕರಾದ ಮಧು ಮಂಟೀನ ಮತ್ತು ನಮಿತ್ ಮಲ್ಹೋತ್ರಾ ಇವರಿಗೆ ಸಾಥ್ ಕೊಡ್ತಿದ್ದಾರೆ. ಮೂವರು ಸೇರಿ ರಾಮಾಯಣ ಕಾವ್ಯವನ್ನ ಬೆಳ್ಳಿ ತೆರೆಮೇಲೆ ತೋರಿಸುವ ಸಾಹಸ ಮಾಡ್ತಿದ್ದಾರೆ. ಈಗಾಗಲೇ ಚಿತ್ರಕಥೆ ಸ್ಕ್ರಿಪ್ಟ್ ಕೆಲಸಗಳು ನಡೀತಿದ್ದು, ಶೀಘ್ರದಲ್ಲೆ ಚಿತ್ರವನ್ನ ಅಫೀಷಿಯಲ್ಲಾಗಿ ಅನೌನ್ಸ್ ಮಾಡಲಿದ್ದಾರೆ ನಿರ್ಮಾಪಕರು. ಅಂದಹಾಗೆ ರಾಮಾಯಣ ಚಿತ್ರವನ್ನ ಥ್ರಿಡಿಯಲ್ಲಿ ತೆರೆಗೆ ತರಲು ಮುಂದಾಗಿರೋದು ವಿಶೇಷ.

One thought on “೧೦೦೦ ಕೋಟಿ ಮಹಾಭಾರತಕ್ಕೆ ಎದುರಾಗಿ ೫೦೦ ಕೋಟಿ ಬಂಡವಾಳದಲ್ಲಿ ರಾಮಾಯಣ ಸಿನಿಮಾ

Comments are closed.