ಬಳ್ಳಾರಿ : ಸಿಡಿಲು ಸಹಿತ ಮಳೆಗೆ ಇಬ್ಬರು ಮಕ್ಕಳು ಸಾವ, ಗುಡಿಸಲು ಬೆಂಕಿಗಾಹುತಿ..

ಬಳ್ಳಾರಿ : ಗಣಿನಾಡು ಬಳ್ಳಾರಿಯಲ್ಲಿ ಸಿಡಿಲು ಸಹಿತ ಮಳೆಗೆ ಇಬ್ಬರು ಮಕ್ಕಳು ಸಾವನ್ನಪ್ಪಿದ್ದರೆ, ಈರುಳ್ಳಿ ದಾಸ್ತಾನು ಮಾಡಿದ್ದ ಗುಡಿಸಲು ಬೆಂಕಿಗಾಹುತಿಯಾಗಿದೆ. ಇಂದು ಸಂಜೆ ಸಂಡೂರು ತಾಲೂಕಿನ ಬಂಡ್ರಿ ಬಳಿಯ ಗೊಲ್ಲರಹಟ್ಟಿ ಗ್ರಾಮದಲ್ಲಿ ಸುರಿದ ಸಿಡಿಲಿಗೆ ಆಟವಾಡುತ್ತಿದ್ದ ಒಂದೇ ಕುಟುಂಬದ ಆಕಾಶ್, ಪುಟ್ಟರಾಜ್ ಸಾವನ್ನಪ್ಪಿದ್ದಾರೆ. ಸಿಡಿಲು ಹೊಡೆಯುದನ್ನು ನೋಡಿದ ಅದೇ ಕುಟುಂಬದ ಯಶೋಧಾ ಗಾಬರಿಗೊಂಡು ಪ್ರಜ್ಞೆ ತಪ್ಪಿದ್ದಾಳೆ.

ಕೂಡ್ಲಿಗಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಹೊಸಪೇಟೆ ತಾಲೂಕಿನ ಗುಂಡ್ಲುವದ್ದಿಕೇರಿ ಗ್ರಾಮದ ಕೇಶವಮೂರ್ತಿ ಅವರರು ಹೊಲದಲ್ಲಿ ದಾಸ್ತಾನು ಮಾಡಿದ್ದ ಈರುಳ್ಳಿ ಗುಡಿಸಲಿಗೆ ಬೆಂಕಿಗೆ ಬಿದ್ದಿದೆ. ಸಿಡಿಲಿನ ಹೊಡೆತಕ್ಕೆ ಬೆಂಕಿ ಕಾಣಿಸಿಕೊಂಡಿದ್ದು ಕೆಲ ಹೊತ್ತಿನಲ್ಲಿ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಮಳೆಯ ಪರಿಣಾಮ ಹೊಸಪೇಟೆ, ಕೂಡ್ಲಿಗಿ ತಾಲೂಕಿನಲ್ಲಿ ಹಲವೆಡೆ ಮರಗಳು ನೆಲಕ್ಕುರುಳಿವೆ. ವಿಶ್ವಪ್ರಸಿದ್ಧ ಹಂಪಿಯ ರಸ್ತೆಯುದ್ದಕ್ಕೂ ಗಿಡಮರಗಳು ನೆಲಕ್ಕುರುಳಿವೆ. ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ವರುಣರಾಯ ಇಂದು ಸಂಜೆ ತಂಪೆರಿದಿದ್ದಾನೆ. ಜಿಲ್ಲೆಯಲ್ಲಿ ಅರ್ದ ಗಂಟೆ ಉತ್ತಮ ಮಳೆಯಾದ ಹಿನ್ನೆಲೆ ವಿಶ್ವಪ್ರಸಿದ್ಧ ಹಂಪಿಯಲ್ಲಿ ತಂಪನೆಯ ವಾತಾವರಣವಿತ್ತು.

Comments are closed.

Social Media Auto Publish Powered By : XYZScripts.com