ಮೇ 29ಕ್ಕೆ ರಾಜ್ಯಕ್ಕೆ ಮುಂಗಾರು ಪ್ರವೇಶ ! ಈ ಬಾರಿ ಉತ್ತಮ ಮಳೆ ಗ್ಯಾರಂಟಿ

ಕಳೆದ ಹಲವು ವರ್ಷಗಳಲ್ಲಿ ಮಳೆಯ ಅಭಾವ ರಾಜ್ಯದ ಜನರನ್ನು ಕಂಗೆಡಿಸಿದೆ. ಅದ್ರಲ್ಲೂ ಹೋದ ವರ್ಷವಂತೂ ರೈತ ಅಕ್ಷರಶಃ ಕಣ್ಣೀರಲ್ಲೇ ಕೈತೊಳೆದಿದ್ದಾನೆ. ಆದ್ರೆ ಈ ಬಾರಿ ಭುವಿಯನ್ನು ತಂಪು ಮಾಡುವ ಮಳೆ ಉತ್ತಮವಾಗಿ ಬರಲಿದ್ಯಂತೆ.

ಹಾಗಂತ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಮಂಡಳಿ ತಿಳಿಸಿದೆ. ಈ ಬಾರಿಯ ಮುಂಗಾರು ಆಶಾದಾಯಕವಾಗಿದ್ದು ಅನ್ನದಾತನಿಗೆ ವರದಾನವಾಗಲಿದೆ ಎಂದಿದೆ.

ಸಾಮಾನ್ಯವಾಗಿ 63 ಸೆಂಟಿಮೀಟರ್ ಮಳೆಯನ್ನು ಉತ್ತಮ ಎಂದು ಪರಿಗಣಿಸಲಾಗುತ್ತದೆ. ಆದ್ರೆ ಈ ವರ್ಷ ಸುಮಾರು 59 ಸೆಂಟಿಮೀಟರ್ ಗಳಷ್ಟು ಮಳೆ ಸುರಿಯುವ ಅಂದಾಜಿದೆ. ಕಳೆದ ವರ್ಷ 26%ನಷ್ಟು ಮಳೆಯ ಅಭಾವ ಉಂಟಾಗಿತ್ತು.

ಆದ್ರೆ ಈ ಬಾರಿ ಉತ್ತಮ ಮಳೆಯಾಗುವ ಎಲ್ಲಾ ಲಕ್ಷಣಗಳು ಕಂಡುಬಂದಿದೆ. ಮೇ 29ರಂದು ಮುಂಗಾರು ರಾಜ್ಯವನ್ನು ಪ್ರವೇಶಿಸಲಿದೆ. ಹಾಗಾಗಿ ಜೂನ್, ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ ಆರಂಬದವರೆಗೂ ಉತ್ತಮ ಮಳೆಯಾಗುವ ನಿರೀಕ್ಷೆಯಿದೆ. ಇದರಿಂದಾಗಿ ರಾಜ್ಯದ ಜನ ನಿಟ್ಟುಸಿರು ಬಿಡುವಂತಾಗಿದೆ.

2 thoughts on “ಮೇ 29ಕ್ಕೆ ರಾಜ್ಯಕ್ಕೆ ಮುಂಗಾರು ಪ್ರವೇಶ ! ಈ ಬಾರಿ ಉತ್ತಮ ಮಳೆ ಗ್ಯಾರಂಟಿ

Comments are closed.

Social Media Auto Publish Powered By : XYZScripts.com