Mandya : ಜಿಲ್ಲಾಕಾರಗೃಹದಲ್ಲಿ ಕೈದಿ ಅನುಮಾನಸ್ಪದ ಸಾವು, ಮತ್ತೊಬ್ಬ ಕೈದಿ ಆಸ್ಪತ್ರೆಯಲ್ಲಿ ಸಾವು..

ಮಂಡ್ಯ :   ಒಬ್ಬ ಕೈದಿ ಅನುಮಾನಸ್ಪದವಾಗಿ  ಜಿಲ್ಲಾ ಕಾರಾಗೃಹದಲ್ಲಿ ಸಾವನ್ನಪ್ಪಿದರೆ,  ಮತ್ತೊಬ್ಬ ಕೈದಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪ್ರಾಣಕಳೆದುಕೊಡಿದ್ದಾರೆ.   ಮಂಡ್ಯ ತಾಲೂಕು ಹೆಚ್. ಮಲ್ಲಿಗೆರೆ ಗ್ರಾಮದ ಆನಂದ್ ಮೃತಪಟ್ಟ ಕೈದಿ. ಆನಂದ್ ಫೋಸ್ಕೋ ಕಾಯ್ದೆಯಡಿ ಬಂಧಿಯಾಗಿದ್ದ ವಿಚಾರಣಾಧೀನ ಕೈದಿಯಾಗಿದ್ದನು. ಅನಾರೋಗ್ಯದ ಕಾರಣ ನಿನ್ನೆ ಮೈಸೂರಿನ ಕೆ.ಆರ್.ಅಸ್ಪತ್ರೆಯಲ್ಲಿ ಆನಂದ ಸಾವನ್ನಪ್ಪಿದ್ದರು.

ಈ ಸಂಬಂಧ ಕೈದಿಯ ಸಾವನ್ನ ಖಂಡಿಸಿ ಮಂಡ್ಯ ಕಾರಾಗೃದಲ್ಲಿ 500ಕ್ಕೂ ಹೆಚ್ಚು ಕೈದಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಕೈದಿ ಅನುಮಾನಾಸ್ಪದವಾಗಿ ಸಾಯಲು ಕಾರಾಗೃಹ ಸಿಬ್ಬಂದಿಯೇ ಕಾರಣ. ಅನಾರೋಗ್ಯ ಪೀಡಿತರಾದಾಗ ಸೂಕ್ತ ಚಿಕಿತ್ಸೆ, ಆಹಾರ ಕೊಡುತ್ತಿರಲಿಲ್ಲ. ಜೈಲಿನಲ್ಲಿ ಯಾವ ಸೌಲಭ್ಯವೂ ಇಲ್ಲ. ಇದರಿಂದ ಇವತ್ತು ಕೈದಿಯೊಬ್ಬನ ಜೀವ ಹೋಗಿದೆ ಎಂದು ಕೈದಿಗಳು ಆರೋಪಿಸಿದ್ದಾರೆ. ಅಲ್ಲದೆ ಮೂಲಭೂತ ಸೌಕರ್ಯಕ್ಕಾಗಿ ಕೈದಿಗಳು ಒತ್ತಾಯಿಸಿದ್ದಾರೆ

ಮತ್ತೊಬ್ಬ ಕೈದಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ, ಮಂಡ್ಯ ಜೈಲಿನಲ್ಲಿದ್ದ ವಿಚಾರಣಾಧೀನ ಕೈದಿ. ಮದ್ದೂರು ತಾಲ್ಲೂಕಿನ ಮೆಳ್ಳಹಳ್ಳಿಯ ಬೋರಯ್ಯ(75) ಮೃತ ದುರ್ದೈವಿ. ಬೆಳಿಗ್ಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಮಂಡ್ಯ ಜೈಲಿಂದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. 2ತಿಂಗಳ ಹಿಂದೆ ಪೋಸ್ಕೋ ಕಾಯ್ದೆಯಡಿ ಬಂಧಿಯಾಗಿದ್ದ ಬೋರಯ್ಯ. ಒಂದೇ ದಿನ ನಡೆದ ಎರಡನೇ ಪ್ರಕರಣ ಇದಾಗಿದೆ.

Comments are closed.