ಕಿಲ್ಲರ್ ಬಿಎಂಟಿಸಿಗೆ ಸೈಕಲ್ ಸವಾರ ಬಲಿ, ಬಸ್ ರಸ್ತೆಯಲ್ಲೇ ಬಿಟ್ಟು ಚಾಲಕ ಪರಾರಿ

ಕಿಲ್ಲರ್ ಬಿಎಂಟಿಸಿ ಎನ್ನುವ ತನ್ನ ಹಣೆಪಟ್ಟಿಯನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಉಳಿಸಿಕೊಂಡಂತಿದೆ. ಸೈಕಲ್ ಸವಾರನೊಬ್ಬನಿಗೆ ಬಿಎಂಟಿಸಿ ಬಸ್ಸು ಗುದ್ದಿದ ಪರಿಣಾಮವಾಗಿ ಸೈಕಲ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಜಾಲಹಳ್ಳಿ ಬಳಿಯ ಏನ್ ಡಿಡಿಎಫ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ರವಿ ಎಂದು ಗುರುತಿಸಲಾಗಿದೆ. ಅಪಘಾತವಾದ ಕೂಡಲೇ ಬಿಎಂಟಿಸಿ ಬಸ್ ಚಾಲಕ ಸ್ಥಳದಲ್ಲೇ ಬಸ್ ಬಿಟ್ಟು ಪರಾರಿಯಾಗಿದ್ದಾನೆ.

ಮೃತ ರವಿ ಸ್ಪೈರೀಂಗ್ ಸಿಸ್ಟಮ್ ನಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಈ ಮಧ್ಯೆ ಸ್ಥಳಕ್ಕೆ ಆಗಮಿಸಿದ್ದ ಪೋಲೀಸರು ಮತ್ತು ಸ್ಪೈರಿಂಗ್ ಸಿಸ್ಟಮ್ ನೌಕರ ರ ನಡುವೆ ಮಾತಿನ ಚಕಮಕಿ ನಡೆದಿದೆ. ಇದರ ಪರಿಣಾಮವಾಗಿ ಮೃತದೇಹವನ್ನು ಸ್ಥಳದಿಂದ ತೆಗೆಯಲು ನೌಕಕರು ಕೆಲ ಸಮಯ ಅಡ್ಡಿಪಡಿಸಿದರು.

ಪೀಣ್ಯ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ನಡೆದಿದೆ. ಮೃತದೇಹದ ಬಳಿ ಪತ್ನಿಯ ರೋದನ ಕರುಳು ಹಿಂಡುವಂತಿತ್ತು.

Comments are closed.

Social Media Auto Publish Powered By : XYZScripts.com