ಕಾಂಗ್ರೆಸ್ ಪಕ್ಷದ ನಿಷ್ಠಾವಂತ : ಪಕ್ಷಬಿಡುವ ಪ್ರಶ್ನೆಯೇ ಇಲ್ಲ , ಸತೀಶ್ ಜಾರಕಿಹೊಳಿ ಸ್ಪಷ್ಟನೆ…

ಬೆಂಗಳೂರು  : ನಾನು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಹೀಗಾಗಿ ನಾನು ಪಕ್ಷ ಬಿಡಲ್ಲ.ಇಲ್ಲೇ ಇರ್ತೇನೆ. ಜೆಡಿಎಸ್ ಗೆ ಸೇರ್ಪಡೆಗೊಳ್ಳುತ್ತೇನೆಂಬ ಸುದ್ದಿ ಸುಳ್ಳಿ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು.


ಬೆಂಗಳೂರಿನಲ್ಲಿ ಇಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ರನ್ನ ಭೇಟಿ ಮಾಡಿದ ಸತೀಶ್ ಜಾರಕಿಹೊಳಿ ಕೆಲವು ದೂರು ಸಲ್ಲಿಸಿದರು. ಸಿಎಂ ಸಿದ್ದರಾಮಯ್ಯ ಎಲ್ಲರ ವಿಶ್ವಾಸ ಗಳಿಸುತ್ತಿಲ್ಲ. ಪಕ್ಷದಲ್ಲಿ ಸರ್ವಾಧಿಕಾರಿ ಧೋರಣೆ ಹೆಚ್ಚಾಗಿದೆ ಎಂದು ಆರೋಪಿಸಿದರು.ಹಾಗೆಯೇ ಲಾಬಿ ಮಾಡುವವರಿಗೆ ಟಿಕೇಟ್ ನೀಡಬೇಡಿ. ದೆಹಲಿಗೆ ಬಂದವರಿಗೆಲ್ಲಾ ಟಿಕೆಟ್ ನೀಡಬೇಡಿ ಕಷ್ಟ ಆಗುತ್ತೆ. ಗೆಲ್ಲುವವರನ್ನ ನೋಡಿ 6 ತಿಂಗಳ ಮೊದಲೇ ಟಿಕೆಟ್ ನೀಡಿ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ರಿಗೆ ಸತೀಶ್ ಜಾರಕಿಹೊಳಿ ಸಲಹೆ ನೀಡಿದರು.

Comments are closed.

Social Media Auto Publish Powered By : XYZScripts.com