ರೈತರ ಆತ್ಮಹತ್ಯೆ ಹೆಚ್ಚಾಗಲು ಗೋ ಹತ್ಯೆ ಕಾರಣ : ಪ್ರಮೋದ್ ಮುತಾಲಿಕ್…

ಬೆಳಗಾವಿ :  ರೈತರ ಆತ್ಮಹತ್ಯೆ ಹೆಚ್ಚಾಗಲು ಗೋ ಹತ್ಯೆ ಕಾರಣ, ಹಿಗೆಂದು ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ‌ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ಗೋ ಹತ್ಯೆ ಆಗುತ್ತಿರುವು ರೈತರ ಆತ್ಮಹತ್ಯೆಗೆ ಇದು ಒಂದು ಮುಖ್ಯ  ಕಾರಣವಾಗಿದೆ. ಮುಸ್ಲಿಂ ಮತ ಬ್ಯಾಂಕ್ ಗಾಗಿ ರಾಜ್ಯ ಸರ್ಕಾರ ಗೋ ಹತ್ಯೆಗೆ ರಕ್ಷಣೆ ಮಾಡುತ್ತಿದೆ ಹಾಗು ಗೋ ಹತ್ಯೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲವೆಂದು ನೇರವಾಗಿ ಆಪಾದಿಸಿದರು.

ನರೇಂದ್ರ ಮೋದಿ ಅವರು ದೇಶದ ಪ್ರಧಾನಿ ಆದ ಬಳಿಕ ಗೋ ರಕ್ಷಣೆ ಸಂಬಂಧ ಚರ್ಚೆ ಆಗುತ್ತಿದೆ. ಗೋ‌ ರಕ್ಷಣೆ ಮಾಡುವವರ ವಿರುದ್ದ ವ್ಯವಸ್ಥಿತ ಅಪಪ್ರಚಾರ ನಡೆಯುತ್ತಿದೆ.
ಗೋ ಅನ್ನು ಹಿಂದು ಸಮಾಜ ಪೂಜೆ ಸಲ್ಲಿಸುತ್ತದೆ. ಗೋರಕ್ಷಕರ ಮೇಲೆ ಅಪಪ್ರಚಾರಕ್ಕೆ ತೀವ್ರ ಖಂಡನೆ. ದೇಶದಲ್ಲಿ ೪೦ಸಾವಿರ ಗೋ ವಧೆ ಕೇಂದ್ರಗಳಿಗೆ.
ಮುಸ್ಲಿಂ ಸಮಾಜಕ್ಕಿಂತ ಹೆಚ್ಚು ಗೋ ಹತ್ಯೆಯನ್ನು ಕೇಂದ್ರ, ರಾಜ್ಯ ಸರ್ಕಾರಗಳು ಮಾಡಿವೆ ಎಂದ ಮತಾಲಿಕ್,  ಗೋ ವಂಶವನ್ನು ನಾಶ ಆಗಲು ಸರ್ಕಾರಗಳೆ ಕಾರಣವಾಗಿವೆ.

ಜಗತ್ತಿನಲ್ಲಿ ಗೋ ಮಾಂಸ ಎಚ್ಚು ರಫ್ತು ಆಗುತ್ತುರುವುದು ಭಾರತದಿಂದಲೇ. ಬೆಳಗಾವಿ ಆಟೋ ನಗರದ ಮೂರು ಕೋಲ್ಡ್ ಸ್ಟೋರೆಜ್ ಕಾರ್ಯನಿರ್ವಹಿಸುತ್ತಿವೆ.
ತರಕಾರಿ ಸಂಸ್ಕರಿಸಲು ಕೋಲ್ಡ್ ಸ್ಟೋರೆಜ್ ಅನುಮತಿ ಪಡೆದು ಗೋ ಮಾಂಸ ರಫ್ತು ಮಾಡಲಾಗುತ್ತಿದೆ. ಕೋಲ್ಡ್ ಸ್ಟೋರೆಜ್ ಲೈಸೆನ್ಸ್ ಪಡೆದು ಗೋ ವಧೆ ಕೆಲಸ ನಡೆಯುತ್ತಿದೆ.  ಚುನಾಯಿತ ಪ್ರತಿನಿಧಿಗಳಿಗೆ ಗೋ ವಧೆ ಕೇಂದ್ರದಿಂದ ಹಫ್ತಾ ಹೋಗುತ್ತಿದೆ. ಹಾಗಾಗಿ ಕೋಲ್ಡ್ ಸ್ಟೋರೆಜ್ ವಿರುದ್ಧ ಲೋಕಾಯುಕ್ತದಲ್ಲಿ ದೂರು ಸಲ್ಲಿಸಲಾಗುವುದು ಎಂದು ಪ್ರಮೋದ್ ಮುತಾಲಿಕ್  ಹೇಳಿದರು..

 

Comments are closed.

Social Media Auto Publish Powered By : XYZScripts.com