8 ವರ್ಷಗಳ ಹಿಂದೆ ಕಂಗನಾ ಹಾಗು ಬಾಹುಬಲಿ ನಡುವೆ ನಡೆದಿದ್ದೇನು ?

ಸುಮಾರು ಎಂಟು ವರ್ಷಗಳ ಹಿಂದೆ ಪ್ರಭಾಸ್ ಹಾಗು ಕಂಗನಾ ರಣಾವತ್ ಇಬ್ಬರು ಸೇರಿ ಒಂದು ಸಿನಿಮಾದಲ್ಲಿ ನಟಿಸಿದ್ರು. ಆ ಚಿತ್ರದ ಬಳಿಕ ಮತ್ತೆ ಈ ಜೋಡಿ ಒಟ್ಟಿಗೆ ಕೆಲಸ ಮಾಡ್ಲೇ ಇಲ್ಲ. ಈಗ ಇಬ್ಬರೂ ಭಾರತೀಯ ಚಿತ್ರರಂಗದ ಟಾಪ್ ಸ್ಟಾರ್ಸ್. ಆದ್ರೆ ಆಗ ಇಬ್ಬರೂ ಸ್ಟ್ರಗಲಿಂಗ್ ಆ್ಯಕ್ಟರ್ ಗಳಾಗಿದ್ರು. ಆಗ್ಲೇ ಇಬ್ಬರು ಮತ್ತೆ ಒಟ್ಟಿಗೆ ನಟಿಸೋಲ್ಲ ಅಂತ ತೀರ್ಮಾನಿಸಿದ್ರು.

ಪುರಿ ಜಗನ್ನಾಥ್ ನಿರ್ದೇಶಿಸಿದ್ದ ಏಕ್ ನಿರಂಜನ್ ಅನ್ನೋ ತೆಲುಗು ಸಿನಿಮಾದಲ್ಲಿ ಕಂಗನಾ ಹಾಗು ಪ್ರಭಾಸ್ ಒಟ್ಟಿಗೆ ನಟಿಸಿದ್ರು. ಆ ಚಿತ್ರವನ್ನ ಬ್ಯಾಂಕಾಕ್ ಹಾಗು ಸ್ವಿಡ್ಜರ್ ಲ್ಯಾಂಡ್ ನಲ್ಲಿ ಶೂಟ್ ಮಾಡ್ಲಾಗಿತ್ತು. ಆದ್ರೆ ಸಿನಿಮಾದುದ್ದಕ್ಕೂ ಇವರಿಬ್ಬರು ಜಗಳ ಮಾಡಿಕೊಳ್ತಿದ್ರು. ಒಮ್ಮೆ ದೊಡ್ಡ ಮಟ್ಟಕ್ಕಾದ ಜಗಳದಿಂದ ಮತ್ತೆ ಒಟ್ಟಿಗೆ ನಟಿಸಲೇ ಬಾರದು ಅಂತ ತೀರ್ಮಾನಿಸಿದ್ರಂತೆ ಕಂಗನಾ.

ಈಗ ಬಾಹುಬಲಿ ಮೂಲಕ ವಿಶ್ವ ಮಟ್ಟದಲ್ಲಿ ಹೆಸರು ಮಾಡಿರೋ ಪ್ರಭಾಸ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದ್ರೆ ಮತ್ತೆ ಒಟ್ಟಿಗೆ ನಟಿಸೋ ಬಗ್ಗೆ ಮಾತ್ರ ತುಟಿಬಿಚ್ಚಿಲ್ಲ. ಸದ್ಯ ಕಂಗಾನ ಮಣಿಕರ್ಣಿಕ ಹಾಗು ಸಿಮ್ರನ್ ಎರಡು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇತ್ತ ನಾಲ್ಕು ವರ್ಷಗಳ ಬಳಿಕ ಪ್ರಭಾಸ್ ಸಾಹೂ ಅನ್ನುವ ಚಿತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ಏನೇ ಇದ್ರೂ ಕಿತ್ತಾಡಿಕೊಂಡಿದ್ದವರು ಮುಂದೆ ಒಂದಾದ್ರೆ, ಮತ್ತೊಂದು ಅದ್ಭುತ ಸಿನಿಮಾ ಸಿಗೋದ್ರಲ್ಲಿ ಅನುಮಾನವಿಲ್ಲ.

One thought on “8 ವರ್ಷಗಳ ಹಿಂದೆ ಕಂಗನಾ ಹಾಗು ಬಾಹುಬಲಿ ನಡುವೆ ನಡೆದಿದ್ದೇನು ?

  • October 20, 2017 at 8:33 PM
    Permalink

    Way cool! Some extremely valid points! I appreciate you writing this write-up and also the rest of the site is really good.|

Comments are closed.

Social Media Auto Publish Powered By : XYZScripts.com