ರಾಜ್ಯದಲ್ಲಿ ಸಿಡಿಲು ಬಡಿದು 16 ಜನ ಸಾವು ಹಾಗು ೧೫ ಕುರಿ ಬಲಿ, ಅಪಾರ ಬೆಳೆ ನಷ್ಟ…

ರಾಜ್ಯದ ವಿವಿದಡೆ ವರ್ಣನ ಅರ್ಭಟ ಜೋರಾಗಿದೆ, ಇದೇ ಸಂಧರ್ಬದಲ್ಲಿ  ಸಿಡಿಲು ಬಡಿದು 16 ಜನ ಪ್ರಾಣ ಕಳೊದುಕೊಂಡಿದ್ದಾರೆ. 15 ಕುರಿಗಳು ಸಿಡಿಲಿಗೆ ಬಲಿಯಾಗಿವೆ. ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕು ವಿ.ವಿ.ಸಾಗರದ ಸಮೀಪ ಬೋಟಿಂಗ್ ಗೆ ತೆರಳಿದ ವೇಳೆ ದುರ್ಘಟನೆಯ ಉಪನ್ಯಾಸಕ ಮಲ್ಲೇಶ್ ನಾಯ್ಕ್(30), ಶಿಕ್ಷಕ ಛಾಯಾಪತಿ(29) ಹಾಗೂ ಕಾರು ಚಾಲಕ ಹರೀಶ್ ನಾಯ್ಕ ಅಲಿಯಾಸ್ ರಘು (27) ಮೃತರು, ಮೃತ ಮೂರು ಜನ ಹಿರಿಯೂರು ತಾಲೂಕು ಕುರುಬರಹಳ್ಳಿಯವರು. 9 ಜನ ಸ್ನೇಹಿತರ ಜತೆ ತೆರಳಿದ ತೆರಳಿದ್ದ ವೇಳೆ ಇದ್ದಕ್ಕಿದ್ದಂತೆ ಗಾಳಿ, ಮಳೆ ಬಂದು ಅವಘಡ ನಡೆದಿದೆ.

ಬಳ್ಳಾರಿ  ಜಿಲ್ಲೆ  ಹೂವಿನಹಡಗಲಿ  ತಾಲೂಕಿನ ಅಲ್ಲಿಪುರ ಗ್ರಾಮದಲ್ಲಿ  ಸಿಡಿಲು ಬಡಿದು ಓರ್ವವ್ಯಕ್ತಿ ಮೃತಪಟ್ಟಿದ್ದು, ಇನ್ನೋರ್ವ ಗಾಯಗೊಂಡ ಘಟನೆ ಇಂದು ಸಂಜೆ  ನಡೆದಿದೆ.  ಸಿಳ್ಳಿಕ್ಯಾತರಗುಂಡಪ್ಪ   (44)  ಮೃತ  ವ್ಯಕ್ತಿ , ಮೂಕಪ್ಪ   ಬಾಗೆವಾಡಿ   ಎನ್ನುವ   ವ್ಯಕ್ತಿಯು   ಗಾಯಗೊಂಡಿದ್ದಾರೆ.

ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕಿನ ಕುಪ್ಪಳ್ಳಿ ಗ್ರಾಮದಲ್ಲಿ ಡಿಲು ಬಡಿದು 60 ವರ್ಷದ ಈರಮ್ಮ (60) ಮೃತಪಟ್ಟರೆ, ಪಿರಿಯಾಪಟ್ಟಣ ತಾಲ್ಲೂಕಿನ ಮಾಕೋಡುಶೆಟ್ಟಿಹಳ್ಳಿ ಗ್ರಾಮದಲ್ಲಿ ಸಿಡಿಗೆ ತಂದೆ ಮಗ ಜೀವ ಕಳೆದುಕೊಂಡ್ದ್ದಾರೆ.  ಬೀರೆಗೌಡ(38) ಇವರ ಪುತ್ರ ಶಿವಕುಮಾರ್ (15) ಮೃತ ದುರ್ದೈವಿಗಳು.

 

 

ಮಂಡ್ಯದಲ್ಲಿ  ಸಿಡಲಿಗೆ ೧೫ ಕುರಿ ಬಲಿಯಾಗಿ ಒಬ್ಬ ವ್ಯಕ್ತಿಗೆ ಗಾಯವಾಗಿದೆ. ಕೆ.ಆರ್.ಪೇಟೆ ತಾಲ್ಲೂಕಿನ ದೊದ್ದನಕಟ್ಟೆ ಗ್ರಾಮದಲ್ಲಿ ರಾಜಣ್ಣ ಗಾಯಕ್ಕೊಳಗಾದ ವ್ಯಕ್ತಿ. ಅವರದೆ ಕುರಿಗಳು ಸಾಬನ್ನಪ್ಪಿವೆ..

 

Comments are closed.