Mandya : ಮಳೆಯಾಗಿಲ್ಲ ಅನ್ನುವ ಹೂತಿದ್ದ ಶವವನ್ನು ಹೊರ ತೆಗೆದು ಸುಟ್ಟು…

ಮಂಡ್ಯದಲ್ಲಿ  ಹೂತಿಟ್ಟಿದ್ದ ಶವವನ್ನು  ಹೊರ ತೆಗೆದು ಸುಟ್ಟು ಹಾಕಿರುವ ಘಟನೆ ನಡೆದಿದೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಮಾಲಗಾರನಹಳ್ಳಿಯಲ್ಲಿ ನಿನ್ನೆ ತಡರಾತ್ರಿ  ನಡೆದಿದೆ.  ಕಳೆದ ವರ್ಷ ೭೦ ವರ್ಷದ ರಾಮಣ್ಣ ಅನ್ನುವ ವ್ಯಕ್ತಿ ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ರಾಮಣ್ಣನ ಶವವನ್ನ ಅವರ ಜಮೀನಿನಲ್ಲೇ ಹೂಳಲಾಗಿತ್ತು.
ಇದರಿಂದ ಗ್ರಾಮದಲ್ಲಿ ಮಳೆಯಾಗಿಲ್ಲ ಅನ್ನುವ ಕಾರಣಕ್ಕೆ ದುಷ್ಕರ್ಮಿಗಳು ಮೃತದೇಹವನ್ನ ಹೊರತೆಗೆದು ಸುಟ್ಟುಹಾಕಿದ್ದಾರೆ.
ಗ್ರಾಮದ ನಾರಾಯಣ, ರವೀಶ, ನಾಗರಾಜು ಎಂಬುವರ ಮೇಲೆ  ಈ ಆರೋಪ ಕೇಳಿಬಂದಿದೆ. ಮೃತರ ಮನೆಯವರ ಗಮನಕ್ಕೆ ತರದೇ ಅಕ್ರಮವಾಗಿ ಶವ ಹೊರಕ್ಕೆ ತೆಗೆದು ಸುಟ್ಟು ಹಾಕಿದ್ದಾರೆ. ಜೊತೆಗೆ ಶವ ಕೂಡ ಅರೆಬೆಂದ  ರೀತಿಯಲ್ಲಿ ಪತ್ತೆಯಾಗಿದೆ.  ಈ ಘಟನೆಯನ್ನ  ಪ್ರಶ್ನಿಸಿದ್ದಕ್ಕೆ ಕುಮಾರ್ ಎಂಬುವರ ಮೇಲೆ ಹಲ್ಲೆ ಮಾಡಲಾಗಿದೆ. ಹಾಗಾಗಿ ಗ್ರಾಮದಲ್ಲಿ ಬಿಗುವಿನ ವಾತಾವರಣ ಉಂಟಾಗಿದ್ದು,  ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

2 thoughts on “Mandya : ಮಳೆಯಾಗಿಲ್ಲ ಅನ್ನುವ ಹೂತಿದ್ದ ಶವವನ್ನು ಹೊರ ತೆಗೆದು ಸುಟ್ಟು…

  • October 24, 2017 at 4:29 PM
    Permalink

    I carry on listening to the newscast talk about getting boundless online grant applications so I have been looking around for the best site to get one. Could you tell me please, where could i find some?

Comments are closed.