Koppal : ಸ್ಟೇರಿಂಗ್ ಕಟ್ ಆಗಿ ಮಗುಚಿ ಬಿದ್ದ ಸರ್ಕಾರಿ ಬಸ್, ೨೨ ಮಂದಿ ಪ್ರಾಣಾಪಾಯದಿಂದ ಪಾರು…

ಕೊಪ್ಪಳದಲ್ಲಿ ಸ್ಟೇರಿಂಗ್ ಕಟ್ ಆಗಿ , ಸರ್ಕಾರಿ ಬಸ್ ಮಗುಚಿ ಬಿದ್ದಿದೆ.    ಕುಷ್ಟಗಿ ತಾಲೂಕಿನ ದೋಟಿಹಾಳ ಗ್ರಾಮದ ಬಳಿ ಘಟನೆ ನಡೆದಿದೆ. ಬಸ್ ಕುಷ್ಟಗಿಯಿಂದ ತಾವರಗೇರಾ ಕಡೆ ಹೊರಟಿತ್ತು. ದೋಟಿಹಾಳ ಗ್ರಾಮದ ಬಳಿ ಸ್ಟೇರಿಂಗ್ ಕಟ್ ಆದ ಪರಿಣಾಮ ಬಸ್ ಮುಗುಚಿ ಬಿದ್ದಿದೆ. ದೊಡ್ಡ ಅನಾಹುತವನ್ನಯ ಚಾಲಕನ ಚಾಕಚಕ್ಯತೆಯಿಂದ ತಪ್ಪಿದೆ.
ಈ ಸಂದರ್ಭದಲ್ಲಿ ಬಸ್ ನಲ್ಲಿದ್ದ ೯ ವಿದ್ಯಾರ್ಥಿಗಳು ಸೇರಿ ೨೨ ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಕುಷ್ಟಗಿ ಸಾರಿಗೆ ವಿಭಾಗದ  KA37 F 0307 ನಂಬರ್ ನ ಬಸ್ ಇದಾಗಿದೆ. ಈ ಕುರಿತು ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

2 thoughts on “Koppal : ಸ್ಟೇರಿಂಗ್ ಕಟ್ ಆಗಿ ಮಗುಚಿ ಬಿದ್ದ ಸರ್ಕಾರಿ ಬಸ್, ೨೨ ಮಂದಿ ಪ್ರಾಣಾಪಾಯದಿಂದ ಪಾರು…

Comments are closed.

Social Media Auto Publish Powered By : XYZScripts.com