Mysore : BJP ಕಾರ್ಯಕಾರಿಣಿ, ಮಾಧ್ಯಮ ಪ್ರತಿನಿಧಿಗಳಿಗೆ ನಿರ್ಭಂದ ಹಾಕಿದ್ದೆ ಸಾಧನೆ…

ಕಾರ್ಯಕಾರಿಣಿ ಮಾಧ್ಯಮ ಪ್ರತಿನಿಧಿಗಳನ್ನು ದೂರ ಇಡೋದ್ರಿಂದ ಸುದ್ಧಿಯಾಯ್ತು. ಕಾರ್ಯಕಾರಿಣಿಯ ಅಂಗಳಕ್ಕೆ ಪ್ರವೇಶ ನೀಡದೇ ಗೇಟ್ ಆಚೆಗೆ ಮಾಧ್ಯಮ ಪ್ರತಿನಿಧಿಗಳನ್ನು ಕಳುಹಿಸಿ ಕಾರ್ಯಕಾರಿಣಿ ನಡೆಸಿದ್ರು. ಪಕ್ಷದಲ್ಲಿರೋ ಬಿಕ್ಕಟ್ಟಿನ ಬಗ್ಗೆ ಮಾಧ್ಯಮಗಳು ವರದಿ ಮಾಡುತ್ತಿದೆ ಅನ್ನೊ ಕಾರಣಕ್ಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ್ ಲಿಂಬಾವಳಿ ಅವರ ಸೂಚನೆ ಮೇರೆಗೆ ಮಾಧ್ಯಮ ಪ್ರತಿನಿಧಿಗಳಿಗೆ ನಿರ್ಭಂದ ವಿಧಿಸಲಾಗಿತ್ತು.

ಇಂದಿನ ಕಾರ್ಯಕಾರಿಣಿಯಲ್ಲಿ ಹಲವು ಪ್ರಮುಖ ತಿರ್ಮಾನಗಳನ್ನು ಕೈಗೊಳ್ಳಲಾಯ್ತು. ರಾಜ್ಯದಲ್ಲಿರುವ ಬರ ಅಧ್ಯಯನ ಮಾಡಲು ಮೇ 18 ರಿಂದ ಯಡಿಯೂರಪ್ಪ ನಾಯಕತ್ವದಲ್ಲಿ ಪ್ರವಾಸ ಮಾಡೋ ನಿರ್ಣಯ ಮಾಡಲಾಯ್ತು. ಅಲ್ಲದೇ, ಪಂಡಿತ ದೀನ್ ದಯಾಳ್ ಉಪಾಧ್ಯಾಯ ಅವರ ಜನ್ಮ ಶತಾಬ್ಧಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ, ಶಾಸಕರು ಸೇರಿದಂತೆ ಎಲ್ಲಾ ಹಂತದ ಕಾರ್ಯಕರ್ತರು ಸಹ 15 ದಿನಗಳ ಕಾಲ ಮನೆ ತೊರೆದು ವಿಸ್ತಾರಕರಾಗಿ ಪಕ್ಷ ಸಂಘಟನೆ ಕೆಲಸ ಮಾಡುವಂತೆ
ನಿರ್ಣಯ ಮಾಡಲಾಗಿದೆ. ಜೊತೆಗೆ ಬ್ರಿಗೇಡ್ ಸೇರಿದಂತೆ ಯಾವುದೇ ರೀತಿಯ ವ್ಯಕ್ತಿ ಕೇಂದ್ರಿತ ರಾಜಕೀಯ ಸಂಘಟನೆಯನ್ನು ಮಾಡಬಾರದು. ಪಕ್ಷದ ಬಿಕ್ಕಟ್ಟಿನ ಬಗ್ಗೆ ಮಾಧ್ಯಮಗಳ ಮುಂದೆ ಪ್ರತಿಕ್ರಿಯೆ ನೀಡಬಾರದು ಅಂತ ಸೂಚನೆ ನೀಡಲಾಯ್ತು.

ಇನ್ನೂ ಬಿಜೆಪಿ ಕಾರ್ಯಕಾರಿಣಿಯ ಸಮಾರೋಪ ಸಮಾರಂಭದ ವೇಳೆ ಅಧ್ಯಕ್ಷೀಯ ಭಾಷಣ ಮಾಡಿದ ಯಡಿಯೂರಪ್ಪ ಅವರು, ಪಕ್ಷದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಬಿಕ್ಕಟ್ಟಿನ ಬಗ್ಗೆ ಪರೋಕ್ಷವಾಗಿ ವಿಷಾದ ವ್ಯಕ್ತಪಡಿಸಿದ್ರು. ಎಲ್ಲಾ ನಾಯಕರು ಸ್ವಯಂ ನಿಯಂತ್ರಣ ಹಾಕಿಕೊಳ್ಳಬೇಕು. ಇದಕ್ಕೆ ನಾನು ಹೊರತಲ್ಲ. ಸಂಘಟನೆ ಉಳಿಸುವ ಕೆಲಸ ಮಾಡಬೇಕು ಎಂದ್ರು. ಟಿಕೇಟ್ ಗಾಗಿ ಪೈಪೋಟಿ ನಡೆಸೊದು ಬೇಡ. ಹೈಕಮಾಂಡ್ ಟಿಕೇಟ್ ಹಂಚಿಕೆ ಮಾಡಲಿದೆ. ಜನಮನ್ನಣೆ ಮತ್ತು ಗೆಲ್ಲುವ ಅಭ್ಯರ್ಥಿಗೆ ಟಿಕೇಟ್ ಕೊಡಲಾಗುವುದು. ವಿನಾಕಾರಣ ಗೊಂದಲ ಸೃಷ್ಟಿ ಬೇಡ ಅಂತ ತಾಕೀತು ಮಾಡಿದ್ರು.

Comments are closed.