ವೇಷ ನೋಡಿ ಮೋಸ ಹೋಗ್ಬೇಡಿ..ಹರಿದ ಬಟ್ಟೇಲಿ ಬಂದ ಆಸಾಮಿ ಖರೀದಿಸಿದ್ದು ಹಾರ್ಲೆ ಡೇವಿಡ್‍ಸನ್ ಬೈಕ್!

ಮುಖ ನೋಡಿ ಮೊಳ ಹಾಕಬೇಡ, ಗುಣ ನೋಡಿ ಅಳಿಯಮ್ಮಾ. ಬಟ್ಟೆ ನೋಡಿ ಬೆರಗಾಗಬೇಡ ಗುಣ ನೋಡಿ ತಿಳಿಯಮ್ಮ ಅಂತ ಒಂದು ಸಿನಿಮಾ ಗೀತೆಯಿದೆ. ಥಾಲ್ಯಾಂಡ್‍ನಲ್ಲಿ ನಡೆದ ಈ ಘಟನೆ ಹೆಚ್ಚು ಕಡಿಮೆ ಈ ಹಾಡನ್ನೇ ನೆನಪಿಸುತ್ತೆ. ವಯಸ್ಸಾದ ವ್ಯಕ್ತಿಯೋರ್ವನಿಗೆ ಹಾರ್ಲೆ ಡೇವಿಡ್‍ಸನ್ ಬೈಕ್ ಖರೀದಿಸೋ ಮನಸ್ಸಾಗಿತ್ತು. ಆದ್ರೆ ಯಾವುದೇ ಬೈಕ್ ಶೋರೂಂಗೆ ಹೋದ್ರು ಆತನನ್ನ ಗಿರಾಕಿಯಂತೆ ಯಾರು ಟ್ರೀಟ್ ಮಾಡ್ತಿರಲಿಲ್ಲ. ಅದಕ್ಕೆ ಕಾರಣ ಆತ ತೊಟ್ಟಿದ್ದ ಅರಕಲು ಬಟ್ಟೆ. ಕೊನೆಗೂ ಒಂದು ಶೋರೂಂನಲ್ಲಿ ಆತನನ್ನ ಗ್ರಾಹಕನಂತೆ ಮಾತನಾಡಿಸಿದರು. ನೋಡ ನೋಡುತ್ತಿದ್ದಂತೆ ಆ ವ್ಯಕ್ತಿ ಫುಲ್ ಕ್ಯಾಷ್ ಕೊಟ್ಟು ಹಾರ್ಲೆ ಡೇವಿಡ್‍ಸನ್ ಬೈಕ್ ಏರಿ ಹೊರಟುಬಿಟ್ಟ. ಇದನ್ನ ನೋಡಿದ ಶೋರೂಂ ಮಂದಿಗೆ ತಮ್ಮ ಕಣ್ಣನ್ನ ತಾವೇ ನಂಬಲಿಕ್ಕಾಗಲಿಲ್ಲ.

ದೊಗಲೇ ಟೀ-ಶರ್ಟ್, ಕೊಳಕು ಪ್ಯಾಂಟು, ಅವು ಸಹ ಅಲ್ಲಲ್ಲಿ ಹರಿದಿದ್ವು. ಇನ್ನೂ ಆತ ಹಾಕಿಕೊಂಡಿದ್ದ ಚಪ್ಪಲಿಯೂ ಕೊಳಗಾಗಿತ್ತು. ಹೀಗೆ ಬೈಕ್ ಶೋರೂಂಗೆ ಹೋದ್ರೆ ಯಾರು ತಾನೇ ಮಾತನಾಡಿಸುತ್ತಾರೆ. ಅದ್ರಲ್ಲೂ ಸೇಲ್ಸ್‍ಮನ್ ಇಂತಹವರನ್ನ ಅಲಕ್ಷ್ಯ ಮಾಡೋದೇ ಹೆಚ್ಚು. ನನ್ನನ್ನ ಯಾರಾದ್ರೂ ಗ್ರಾಹಕನ ರೀತಿ ವಿಚಾರಿಸ್ತಾರಾ ಅಂತ ಸುಮಾರು ಶೋರೂಂಗಳಿಗೆ ಭೇಟಿಕೊಟ್ಟ. ಕೊನೆಗೂ ಒಂದು ಶೋರೂಂನಲ್ಲಿ ಆತನನ್ನ ವಿಚಾರಿಸಿದ್ರು. ಇದಕ್ಕಿದ್ದಂತೆ ಆತ ಹಾರ್ಲೆ ಡೇವಿಡ್‍ಸನ್ ಬೈಕ್ ತೋರಿಸಿ ನನಗೆ ಆ ಬೈಕ್ ಬೇಕು ಅಂದನಂತೆ. ಆಗಲೂ ಅದನ್ನ ಎಲ್ಲರೂ ತಮಾಷೆ ಅಂತಲೇ ಅಂದುಕೊಂಡಿದ್ರು. ಆದ್ರೆ ನೋಡನೋಡುತ್ತಿದ್ದಂತೆ ಫುಲ್ ಕ್ಯಾಷ್ ಕೊಟ್ಟು ಹಾರ್ಲೆ ಡೇವಿಡ್‍ಸನ್ ಬೈಕ್ ಖರೀದಿಸಿದ. ಇದನ್ನ ನೋಡಿ ಕೆಲವರಿಗೆ ಶಾಕ್ ಆದ್ರೆ, ಮತ್ತೆ ಕೆಲವರಿಗೆ ತಮ್ಮ ತಪ್ಪಿನ ಅರಿವಾಗಿದೆ.

ಅಂದ ಹಾಗೆ ಈ ರೀತಿ ಹರಿದ ಬಟ್ಟೇಲಿ ಬಂದು ಹಾರ್ಲೆ ಡೇವಿಡ್‍ಸನ್ ಬೈಕ್ ಖರೀದಿಸಿದ ವ್ಯಕ್ತಿಯ ಹೆಸ್ರು ಲುಂಗ್ ದೆಚಾ. ಈತ ಥಾಲ್ಯಾಂಡ್ ದೇಶದ ಒಬ್ಬ ಪ್ರಾಮಾಣಿಕ ಮೆಕ್ಯಾನಿಕ್. ಲುಂಗ್ ದೆಚಾ ತಾನು ಜೀವನದಲ್ಲಿ ಕಷ್ಟಪಟ್ಟು ದುಡಿದು ಕೂಡಿಟ್ಟ ಹಣದಲ್ಲಿ ಹಾರ್ಲೆ ಡೇವಿಡ್‍ಸನ್ ಬೈಕ್ ಖರೀದಿಸುವ ಕನಸ್ಸು ಕಂಡಿದ್ದ. ಅದಕ್ಕಂತ್ಲೇ ಹಲವು ಶೋರೂಂಗಳಿಗೆ ಅಲೆದಾಡಿದ್ದ. ಇದೀಗ ವಿಷಯ ತಿಳಿದು ಆತನನ್ನ ನಿರ್ಲಕ್ಷಿಸಿದ್ದ ಶೋರೂಂ ಮಂದಿ ಕೈ ಹಿಸುಕಿಕೊಳ್ತಿದ್ದಾರಂತೆ.

Comments are closed.

Social Media Auto Publish Powered By : XYZScripts.com