champions trophy ನಾವ್ ರೆಡಿ | ಕೊಹ್ಲಿಗೆ ಪಟ್ಟ, ಯುವಿ-ಮನೀಶ್‌ಗೆ ಸ್ಥಾನ

ಬಹುದಿನಗಳಿಂದ ಚರ್ಚೆಗೆ ಗ್ರಾಸವಾಗಿದ್ದ ಭಾರತ ಪುರುಷರ ಕ್ರಿಕೆಟ್ ತಂಡ ಚಾಂಪಿಯನ್ಸ್ ಟ್ರೋಫಿ ಆಡುತ್ತದೋ ಇಲ್ಲವೋ ಎಂಬ ಉತ್ತರಕ್ಕೆ ಭಾನುವಾರ ಬಿಸಿಸಿಐ ಉತ್ತರ ನೀಡಿತ್ತು. ಅಲ್ಲದೆ ಸೋಮವಾರ ತಂಡವನ್ನು ಪ್ರಕಟಿಸಿದ್ದು, ವಿರಾಟ್ ಕೊಹ್ಲಿ ಚಾಂಪಿಯನ್ಸ್ ಟ್ರೋಫಿಯಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ.

ತಂಡದಲ್ಲಿ ಅಚ್ಚರಿಯ ಬದಲಾವಣೆಯನ್ನು ಏನು ಕಾಣದೇ ಇದ್ದರೂ ಗಾಯದಿಂದ ಚೇತರಿಸಿಕೊಂಡ ಅನುಭವಿ ಆಟಗಾರರಿಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ. ಆರಂಭಿಕ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಹದಿನೈದು ಜನರ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಅಜಿಂಕ್ಯ ರಹಾನೆ, ಕೊಹ್ಲಿ, ಯುವರಾಜ್ ಸಿಂಗ್, ಕೇದಾರ್ ಜಾದವ್, ಮನೀಶ್ ಪಾಂಡೆ, ಧೋನಿ ೧೫ ಜನರ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನು ಆಲ್‌ರೌಂಡರ್ ಸ್ಥಾನದಲ್ಲಿ ರವೀಂದ್ರ ಜಡೇಜಾ ಹಾಗೂ ಯುವ ಆಟಗಾರ ಹಾರ್ದಿಕ್ ಪಾಂಡ್ಯ ಕಣಕ್ಕೆ ಇಳಿಯಬಹುದು. ತವರಿನಲ್ಲಿ ಸತತ ಟೆಸ್ಟ್ ಪಂದ್ಯಗಳನ್ನು ಆಡಿ ಗಾಯಕ್ಕೆ ತುತ್ತಾಗಿದ್ದ, ಅಶ್ವಿನ್ ಚೇತರಿಸಿಕೊಂಡಿದ್ದು ತಂಡ ಸೇರಿಕೊಂಡಿದ್ದಾರೆ.

ವೇಗದ ನೊಗವನ್ನು ಐಪಿಎಲ್‌ನಲ್ಲಿ ಮಾರಕ ದಾಳಿ ನಡೆಸುತ್ತಿರುವ ಭುವನೇಶ್ವರ್ ಕುಮಾರ್ ಹಾಗೂ ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರಿತ್ ಬೂಮ್ರ ಹಾಗೂ ಮೊಹಮ್ಮದ್ ಶಮಿ ವೇಗದ ಬೌಲಿಂಗ್ ಸರ್ದಾರ್ ಉಮೇಶ್ ಯಾದವ್ ತಂಡವನ್ನು ಸೇರಿಕೊಂಡಿದ್ದಾರೆ.

Comments are closed.

Social Media Auto Publish Powered By : XYZScripts.com