Mysore : ಬಿಜೆಪಿ ಕಾರ್ಯಕಾರಿಣಿ ಮಾಧ್ಯಮಗಳಲ್ಲಿ ಬಂದ ವರದಿ ಎಲ್ಲವು ಸತ್ಯವಲ್ಲ – ಸಿ.ಟಿ.ರವಿ

ಮೈಸೂರಿನಲ್ಲಿ ಬಿಜೆಪಿ ಕಾರ್ಯಕಾರಿಣಿ ನಡೆಯುತ್ತಿದ್ದು ಇವತ್ತು ಮಾಧ್ಯಮಗಳಿಗೆ ನಿರ್ಭಂದ ಹಾಕಲಾಗಿತ್ತು. ಇದು ಕೂಡಾ ಬಹಿರಂಗವಾಗುತ್ತಿದ್ದಂತೆ ಇದಕ್ಕೆ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸ್ಷಷ್ಟನೆ ನೀಡಿದ್ದಾರೆ. ಮಾಧ್ಯಮಗಳಿಗೆ ಸ್ವಾತಂತ್ರ್ಯ ಹಾಗೂ ಮಿತಿ ಎರಡು ಇವೆ.ಮಾಧ್ಯಮದವರಿಗೆ ತಪ್ಪು ಕಲ್ಪನೆಯಾಗಿದೆ.
ನಮ್ಮ ಕಾರ್ಯಕಾರಿಣಿ ಸಭೆಯ ಉದ್ಘಾಟನೆಗೆ ಮಾತ್ರ ಆಹ್ವಾನ ನೀಡಿದ್ದೆವೆ.
ಆ ನಂತರ ಎಲ್ಲ ವಿವರವನ್ನು ಸಂಜೆ ಸುದ್ದಿಗೋಷ್ಠಿ ನಡೆಸಿ ಅದರಲ್ಲಿ ಸಭೆಯ ನಿರ್ಧಾರವನ್ನು  ತಿಳಿಸುತ್ತೆವೆ.ಈ ರೀತಿ ನಿರ್ಬಂಧ ಹೇರುವ ನಿರ್ಧಾರ ನಮ್ಮದಲ್ಲ.ಅರವಿಂದ ಲಿಂಬಾವಳಿಯವರು ಮಾಧ್ಯಮ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಅವರ ಬಳಿ ಚರ್ಚಿಸಿ ನಿಮ್ಮನ್ನು ಸಂಪರ್ಕ ಮಾಡುತ್ತೇನೆ.ಮಾಧ್ಯಮಗಳಲ್ಲಿ ಬಂದ ವರದಿ ಎಲ್ಲವು ಸತ್ಯವಲ್ಲ.ಕೆಲವು ಅಸತ್ಯ ವರದಿಗಳು ಬಿತ್ತರವಾಗುತ್ತವೆ ಎಂದು ಸಿಟಿ ರವಿ ಸ್ಪಷ್ಟನೆ ನೀಡಿದ್ದಾರೆ.

Comments are closed.

Social Media Auto Publish Powered By : XYZScripts.com