mysore : ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ಮಾಧ್ಯಮ ಪ್ರತಿನಿಧಿಗಳಿಗೆ ನಿರ್ಬಂಧ …

ಮೈಸೂರಿನಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಗೆ  ಮಾಧ್ಯಮದವರು ಬರದಂತೆ ನಿರ್ಭಂದ ಹೇರಲಾಗಿದೆ. ನಿನ್ನೆ ನಡೆದ ಸಭೆಯ ಬಗ್ಗೆ, ಹಾಗೂ ಬಿಜೆಪಿಯಲ್ಲಿ ಇರುವ ಭಿನ್ನ ಮತದ ಬಗ್ಗೆ ನಿನ್ನೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಹಾಗಾಗಿ ಕಾರ್ಯಕಾರಿಣಿ ಸಭೆ ನಡೆಯುತ್ತಿರುವ ಮೈಸೂರಿನ ರಾಮಾನುಜ ರಸ್ತೆಯಲ್ಲಿರುವ ರಾಜೇಂದ್ರ ಕಲಾಮಂದಿರದ ಆವರಣಕ್ಕೂ ಮಾಧ್ಯಮ ಪ್ರತಿನಿಧಿಗಳಿಗೆ ನಿರ್ಬಂಧ ಹೇರಲಾಗಿದೆ.
ಈ ನಡುವೆ ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಸಂತೋಷ್ ಅವರು ಕೂಡಾ ಬಿಜೆಪಿ ರಾಜ್ಯಾದ್ಯಕ್ಷ ಯಡಿಯೂರಪ್ಪ ಅವರ ಹೇಳಿಕೆಯಿಂದ ಮುನಿಸಿಕೊಂಡಿದ್ದಾರೆ ಅಂತ ಹೇಳಲಾಗುತ್ತಿದೆ. ಹಾಗಾಗಿ ಬಿಜೆಪಿಯ ಭಿನ್ನಮತದ ಸುದ್ದಿ ಪ್ರಸಾರವಾಗುತ್ತಿದ್ದಂತೆ,ಉದ್ಘಾಟನಾ ಸಮಾರಂಭ ಮುಗಿದ ನಂತರ ಸಭಾಂಗಣದಿಂದ ಮಾಧ್ಯಮ ಪ್ರತಿನಿಧಿಗಳನ್ನು  ಹೊರಕಳುಹಿಸಿದ್ದಾರೆ.
ಆದರೆ ಇಂದು ಸಭಾಂಗಣದ ಜೊತೆಗೆ ರಾಜೇಂದ್ರ ಕಲಾಮಂದಿರದ ಆವರಣಕ್ಕೆ ಪ್ರತಿನಿಧಿಗಳು ಬರದಂತೆ ನಿರ್ಭಂದಿಸಲಾಗಿದೆ.
     ಇದನ್ನೆಲ್ಲಾ ಗಮನಿಸಿದಾಗ ರಾಜೇಂದ್ರ ಕಲಾಮಂದಿರದ ಆವರಣದಿಂದಲೇ ಮಾಧ್ಯಮ ಪ್ರತಿನಿಧಿಗಳನ್ನು ದೂರ ಇಡುವಂತಹ ತಪ್ಪು ನಡೆದಿದ್ದಾರೂ ಏನು. ಬಿಜೆಪಿ ನಾಯಕರಿಗೆ ಮಾಧ್ಯಮಗಳಲ್ಲಿ ಬರುತ್ತಿರುವ ವರದಿಗಳನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲವೆ ಅನ್ನುವ ಪ್ರಶ್ನೆಯ  ಜೊತೆಗೆ ರಾಜ್ಯ ಬಿಜೆಪಿಯಲ್ಲಿ ಯಾವುದು ಸರಿಯಿಲ್ಲ ಅನ್ನುವುದು ಸ್ಪಷ್ಟವಾಗುತ್ತಿದೆ.

Comments are closed.

Social Media Auto Publish Powered By : XYZScripts.com