ಮನೆಯ ಕಪಾಟಿನಲ್ಲಿ ಶವ ಪತ್ತೆ: ಅನುಮಾನ ಬಾಡಿಗೆ ಇದ್ದವರ ಮೇಲೋ.. ಮಾಲೀಕರ ಮೇಲೋ..?

ಬೆಂಗಳೂರು: ಇಂದು ಬೆಂಗಳೂರಿನಲ್ಲಿ ನಡೆದಿರೋ ಘಟನೆ ಬಗ್ಗೆ ಏನಾದ್ರೂ ಕೇಳಿದ್ರೆ, ಇದು ಸಿನಿಮಾ ಕಥೆ ಅಂತ ಅನಿಸ್ಬಹುದು. ಆದ್ರೆ ಇದು ರೀಲ್ ಸ್ಟೋರಿ ಅಲ್ಲ.. ನಿಜಕ್ಕೂ ರಿಯಲ್ ಸ್ಟೋರಿ.. ಕೆಂಗೇರಿ ಉಪನಗರದ ಗಾಂಧಿನಗರದಲ್ಲಿ ಈ ಘಟನೆ ನಡೆದಿದೆ.
ಅಷ್ಟಕ್ಕೂ ಆಗಿರೋದಿಷ್ಟು, ಕೆಂಗೇರಿಯ ಈ ಮನೆಯಲ್ಲಿ ಸಂಜಯ್ ಅನ್ನುವ ವ್ಯಕ್ತಿ ತಾಯಿ ಶಶಿಕಲಾ ಹಾಗೂ ಆತನ ಅಜ್ಜಿ ಜೊತೆ ವಾಸವಾಗಿದ್ದರು. ಕಳೆದ ನಾಲ್ಕು ವರ್ಷಗಳಿಂದ ಸಂಜಯ್ ಕುಟುಂಬ ಇದೇ ಮನೆಯಲ್ಲಿದ್ದರು. ಆದ್ರೆ ಕಳೆದ ಎರಡು ತಿಂಗಳಿಂದ ಸಂಜಯ್ ಹಾಗೂ ಆತನ ಕುಟುಂಬ ನಾಪತ್ತೆಯಾಗಿತ್ತು. ಈಗ
ಮನೆಯ ವಾರ್ಡರೋಬ್ ನಲ್ಲಿ ಶವ ಸಿಕ್ಕಿದ್ದು, ಇದು ಹೆಣ್ಣಿನ ಶವ ಅನ್ನುವ ಶಂಕೆ ವ್ಯಕ್ತವಾಗಿದೆ.
ಇದು ನವೀನ್ ಅನ್ನುವವರಿಗೆ ಸೇರಿದ ಮನೆಯಾಗಿದ್ದು, ಮನೆಯ ಮಾಲಿಕರು ನೀರು ಸ್ವಿಚ್ ಹಾಕಲು ಬಂದಾಗ ಇದು ಬೆಳಕಿಗೆ ಬಂದಿದೆ. ಕೊನೆಗೆ ಅನುಮಾನಗೊಂಡು ನವೀನ್ ಪೋಲಿಸರಿಗೆ ಮಾಹಿತಿ ನೀಡಿದ್ದಾರೆ. ಈಗ ಕೆಂಗೇರಿ ಪೋಲಿಸರು ಪರಿಶೀಲನೆ ನಡೆಸುತ್ತಿದ್ದಾರೆ. ಇದ್ರೊಂದಿಗೆ ಈ ಮನೆಯಲ್ಲಿದ್ದ ಸಂಜಯ್ ಶಿವಮೊಗ್ಗ ಮೂಲದವರೆಂದು ಗೊತ್ತಾಗಿದೆ.ಅಲ್ಲದೆ ಫೆಬ್ರವರಿ.2ನೇ ತಾರೀಕಿನಿಂದ ಮನೆಗೆ ಬೀಗ ಹಾಕಿ ನಾಪತ್ತೆಯಾಗಿದ್ರು.

ಕೆಂಗೇರಿ ಪೊಲೀಸರ ಭೇಟಿಯ ಬಳಿಕ ವಾಡ್ ರೂಫ್ ನಲ್ಲಿ ಸಿಕ್ಕಿರೋದು ಅಜ್ಜಿಯ ಶವ ಇರಬಹುದೆಂಬ ಎಂಬ ಶಂಕೆ ವ್ಯಕ್ತವಾಗಿದೆ. ಸಂಜಯ್ ಇಂಜಿನಿಯರಿಂಗ್ ಸ್ಟೂಡೆಂಟ್ ಆಗಿದ್ದು, ಇಂದಿರಾನಗರದಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ಕೂಡ ಪಾರ್ಟ್ ಟೈಮ್ ಕೆಲಸ ಮಾಡುತ್ತಿದ್ದ ಎನ್ನಲಾಗುತ್ತಿದೆ. ಕೆಲವು ದಿನಗಳ ಹಿಂದೆ ಶಿವಮೊಗ್ಗಕ್ಕೆ ದೊಡ್ಡಪ್ಪನಿಗೆ ಹುಷಾರಿಲ್ಲ ಎಂದು ಹೇಳಿ ಮನೆ ಮಾಲೀಕರ ಹತ್ತಿರ 50ಸಾವಿರ ರೂ.ಗಳನ್ನ  ಆರ್.ಟಿ.ಜಿ.ಎಸ್ ಮಾಡಿಸಿಕೊಂಡಿದ್ದ ಎಂದು ಹೇಳಲಾಗಿದೆ.

Comments are closed.

Social Media Auto Publish Powered By : XYZScripts.com