ಬಾಹುಬಲಿ ಇಸ್ ಇನ್ ಲವ್ : ಆ ಲವ್ ಸ್ಟೋರಿನಾ ಕನ್ಫರ್ಮ್ ಮಾಡಿದ ಪ್ರಭಾಸ್..ಮದುವೆ ಸದ್ಯಕ್ಕಿಲ್ಲ!

ಯಂಗ್ ರೆಬಲ್ ಸ್ಟಾರ್ ಪ್ರಭಾಸ್ ಬಾಹುಬಲಿ ಸಿನಿಮಾದಿಂದ ಹೊರ ಬಂದಿದ್ದಾರೆ. ಐದು ವರ್ಷಗಳ ಅವಧಿಯನ್ನ ಇದೊಂದೇ ಚಿತ್ರಕ್ಕೆ ಮೀಸಲಿಟ್ಟಿದ್ದ ಪ್ರಭಾಸ್ ಇದೀಗ ಸಾಲು ಸಾಲು ಸಿನಿಮಾಗಳನ್ನ ಒಪ್ಪಿಕೊಳ್ತಿದ್ದಾರೆ. ಈಗಾಗಲೇ ಸುಜಿತ್ ನಿರ್ದೇಶನ ಸಾಹೋ ಸಿನಿಮಾದಲ್ಲಿ ಪ್ರಭಾಸ್ ಅಭಿನಯಿಸ್ತಿದ್ದು, ಚಿತ್ರದ ಫಸ್ಟ್ ಲುಕ್ ಟೀಸರ್ ಸಹ ಬಿಡುಗಡೆಯಾಗಿ ಸಖತ್ ಸೌಂಡ್ ಮಾಡ್ತಿದೆ. ಸಾಹೋ ನಂತ್ರ ವಾಟ್ ನೆಕ್ಸ್ಟ್ ಅನ್ನುವವರಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ ಡಾರ್ಲಿಂಗ್ ಪ್ರಭಾಸ್. ಡಾರ್ಲಿಂಗ್, ಮಿಸ್ಟರ್ ಪರ್ಫೆಕ್ಟ್ ನಂತ್ರ ಮತ್ತೊಂದು ಲವ್ ಸ್ಟೋರಿ ಸಿನಿಮಾವನ್ನ ಪ್ರಭಾಸ್ ಒಪ್ಪಿಕೊಂಡಿದ್ದು, ಈ ಚಿತ್ರಕ್ಕೆ ರಾಧ ಕೃಷ್ಣ ಕುಮಾರ್ ಆಕ್ಷನ್ ಕಟ್ ಹೇಳಲಿದ್ದಾರೆ.

ಗೋಪಿಚಂದ್ ಅಭಿನಯದ ಜಿಲ್ ಸಿನಿಮಾವನ್ನ ನಿರ್ದೇಶಿಸಿದ್ದ ರಾಧ ಕೃಷ್ಣ ಕುಮಾರ್ ಮುಂದೆ ಪ್ರಭಾಸ್ ನಟನೆಯ ಚಿತ್ರವನ್ನ ನಿರ್ದೇಶಿಸೋದಾಗಿ ಅನೌನ್ಸ್ ಮಾಡಿದ್ದಾರೆ. ಬಾಹುಬಲಿಯಲ್ಲಿರೋ ಡಾರ್ಲಿಂಗ್ ಕೋನವನ್ನ ಈ ಸಿನಿಮಾದಲ್ಲಿ ತೋರಿಸ್ತೀನಿ ಅಂತ ನಿರ್ದೇಶಕರು ಫೇಸ್ಬುಕ್‍ನಲ್ಲಿ ಬರೆದುಕೊಂಡಿದ್ದಾರೆ. ಇನ್ನೂ ಈ ಸಿನಿಮಾದಲ್ಲಿ ಬೇರೆ ಯಾರೆಲ್ಲಾ ಅಭಿನಯಿಸ್ತಾರೆ, ಟೆಕ್ನಿಕಲ್ ಟೀಮಲ್ಲಿ ಯಾರೆಲ್ಲಾ ಕೆಲಸ ಮಾಡ್ತಾರೆ ಅನ್ನೋದು ಪಕ್ಕಾ ಆಗಿಲ್ಲ. ಆದ್ರೆ ಕಥೆ ಕೇಳಿ ಖುಷಿಯಾಗಿರೋ ಪ್ರಭಾಸ್ ನಟಿಸೋಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅಲ್ಲಿಗೆ ಸಾಹೋ ನಂತ್ರ ರಾಧಾ ಕೃಷ್ಣ ಕುಮಾರ್ ನಿರ್ದೇಶನದ ಚಿತ್ರದಲ್ಲಿ ಪ್ರಭಾಸ್ ಬಣ್ಣ ಹಚ್ಚೋದು ಕನ್ಫರ್ಮ್ ಆಗಿದೆ.

ಬಾಹುಬಲಿ ನಂತ್ರ ಪ್ರಭಾಸ್ ಅಂತರಾಷ್ಟ್ರಿಯಮಟ್ಟದಲ್ಲಿ ಗುರ್ತಿಸಿಕೊಂಡಿದ್ದಾರೆ. ಹಾಗಾಗಿ ಅವ್ರು ಯಾವುದೇ ಸಿನಿಮಾ ಮಾಡಿದ್ರೂ, ಅದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತೆ. ಮತ್ತೊಂದ್ಕಡೆ ಬಾಹುಬಲಿ ಸಿನಿಮಾ ನಂತ್ರ ಪ್ರಭಾಸ್ ಮದುವೆಯಾಗ್ತಾರೆ ಅಂತಲೇ ಎಲ್ಲರೂ ಅಂದುಕೊಂಡಿದ್ರು. ಅದಾಗಲೇ 6000ಕ್ಕೂ ಹೆಚ್ಚು ಮದ್ವೆ ಪ್ರಫೋಸಲ್‍ಗಳು ಬಂದಿತ್ತು ಅಂತೆಲ್ಲಾ ದೊಡ್ಡದಾಗಿ ಸುದ್ದಿಯಾಯ್ತು. ಸಾಹೋ ಸಿನಿಮಾ ನಂತ್ರ ಪ್ರಭಾಸ್ ಮದುವೆಯಾಗ್ತಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. ಆದ್ರೆ ಸಾಹೋ ಆದ್ಮೇಲೆ ಗ್ಯಾಪ್ ಕೊಡದೇ ಮತ್ತೊಂದು ಸಿನಿಮಾದಲ್ಲಿ ಪ್ರಭಾಸ್ ನಟಿಸೋಕೆ ಒಪ್ಪಿಕೊಂಡಿರೋದು ನೋಡ್ತಿದ್ರೆ ಅವರ ಮದ್ವೆ ಮತ್ತಷ್ಟು ತಡವಾಗೋದು ಗ್ಯಾರೆಂಟಿ ಅಂತಿವೆ ಟಾಲಿವುಡ್ ಮೂಲಗಳು.

2 thoughts on “ಬಾಹುಬಲಿ ಇಸ್ ಇನ್ ಲವ್ : ಆ ಲವ್ ಸ್ಟೋರಿನಾ ಕನ್ಫರ್ಮ್ ಮಾಡಿದ ಪ್ರಭಾಸ್..ಮದುವೆ ಸದ್ಯಕ್ಕಿಲ್ಲ!

  • October 16, 2017 at 4:57 PM
    Permalink

    Hi, Neat post. There’s an issue together with your website in internet explorer, would test this… IE nonetheless is the marketplace chief and a good element of other people will pass over your magnificent writing because of this problem.

  • October 24, 2017 at 2:19 PM
    Permalink

    I regard something truly special in this website.

Comments are closed.

Social Media Auto Publish Powered By : XYZScripts.com